AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varamahalakshmi festival 2026: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿ

ಇನ್ನೇನೂ ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ವಲ್ಪ ದಿನಗಳು ಬಾಕಿ ಉಳಿದಿವೆ. ಮಹಿಳೆಯರೆಲ್ಲರೂ ಶಾಪಿಂಗ್‌, ಮನೆ ಕ್ಲೀನಿಂಗ್‌ ಅಂತ ಸಖತ್‌ ಬ್ಯುಸಿಯಾಗಿದ್ದಾರೆ. ಅನೇಕರಿಗೆ ಶಾಪಿಂಗ್‌ಗಿಂತ ಮನೆಯನ್ನು ಡೀಪ್‌ ಕ್ಲೀನ್‌ ಮಾಡುವುದೇ ತಲೆ ನೋವಿನ ಕೆಲಸ. ಆದರೆ ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಈ ಕೆಲವು ಸರಳ ಸಲಹೆಗಳನ್ನು ಪಾಲಿಸುವ ಮುನ್ನ ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಸಂಪೂರ್ಣ ಮನೆಯನ್ನು ಸುಲಭವಾಗಿ ಕ್ಲೀನ್‌ ಮಾಡಿಬಿಡಬಹುದು.

Varamahalakshmi festival 2026: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿ
ಸಾಂದರ್ಭಿಕ ಚಿತ್ರ Image Credit source: magnific
ಮಾಲಾಶ್ರೀ ಅಂಚನ್​
|

Updated on: Aug 15, 2026 | 5:32 PM

Share

ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಅಥವಾ ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿನಕ್ಕಿಂತ ಬರುವ ಶುಕ್ರವಾರದಂದು ವರಮಹಾಲಕ್ಷ್ಮಿ (Varamahalakshmi) ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಅಧಿದೇವತೆಯಾದ ಲಕ್ಷ್ಮಿಯನ್ನು ಆರಾಧಿಸುವ ಹಬ್ಬ. ಈ ಹಬ್ಬದ ದಿನ ಅನೇಕರು ಲಕ್ಷ್ಮೀದೇವಿಯನ್ನು ಮನೆಯಲ್ಲಿ ಕೂರಿಸಿ ಪೂಜಿಸುತ್ತಾರೆ. ಲಕ್ಷ್ಮೀ ದೇವಿಯನ್ನು ಮನೆಯೊಳಗೆ ಬರಮಾಡಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ಮನೆಯನ್ನು ಸ್ವಚ್ಛಗೊಳಿಸುತ್ತಾರೆ, ಹೌದು ವರಮಹಾಲಕ್ಷ್ಮಿ ಹಬ್ಬ ಬಂದರೆ ಸಾಕು, ಪ್ರತಿಯೊಬ್ಬರೂ ಸಹ ಮನೆಯನ್ನು ಡೀಪ್‌ ಕ್ಲೀನ್‌ ಮಾಡುತ್ತಾರೆ. ಆದರೆ ಹೊರಗೆ ಕೆಲಸಕ್ಕೆ ಹೋಗುವ ಅನೇಕರಿಗೆ ಸರಿಯಾಗಿ ಮನೆ ಕ್ಲೀನ್‌ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸಿಂಪಲ್‌ ಸಲಹೆಗಳನ್ನು ಪಾಲಿಸುವ ಮೂಲಕ ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಬಲು ಸುಲಭವಾಗಿ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.

ಕ್ಲೀನಿಂಗ್‌ ಕೆಲಸ ಯಾವಾಗ ಪ್ರಾರಂಭಿಸಬೇಕು?

ಪ್ರತಿಯೊಬ್ಬರೂ ವರಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಹಬ್ಬಕ್ಕೆ ಇನ್ನೇನು ಐದಾರು ದಿನ ಇರುವಾಗ ಕ್ಲೀನಿಂಗ್‌ ಕಾರ್ಯ ಆರಂಭಿಸಿದರೆ, ಒತ್ತಡದ ಜೊತೆಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಹ ಸಾಧ್ಯವಾಗುವುದಿಲ್ಲ. ಹಬ್ಬ ಸಮೀಪಿಸುತ್ತಿದ್ದಂತೆ ಕೆಲಸಗಳನ್ನು ಮುಂದೂಡುವುದರಿಂದ ನಿಮ್ಮ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಆದ್ದರಿಂದ ನೀವು 10-12 ದಿನಗಳ ಮುಂಚಿತವಾಗಿ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಬೇಕು.

ಮನೆ ಕ್ಲೀನಿಂಗ್‌ ಎಲ್ಲಿಂದ ಆರಂಭಿಸಬೇಕು?

ಮೊದಲು ನಿಮ್ಮ ಕ್ಲೋಸೆಟ್‌ಗಳನ್ನು ಸ್ವಚ್ಛಗೊಳಿಸಿ ಮತ್ತು ಜೋಡಿಸಿ. ನೀವು ಹಾಕದ ಹಳೆಯ ಬಟ್ಟೆಗಳಿದ್ದರೆ ಅದನ್ನು ಬೆರೆಯೇ ಇಟ್ಟು ಯಾರಿಗಾದರೂ ನೀಡಿ, ಇದರಿಂದ ಕ್ಲೋಸೆಟ್‌ಗಳಲ್ಲಿ ಸಾಕಷ್ಟು ಜಾಗ ಕೂಡ ಲಭ್ಯವಾಗುತ್ತದೆ. ನಂತರ ಕಿಟಕಿ ಪರದೆಗಳು ಮತ್ತು ಕಾರ್ಪೆಟ್‌ಗಳನ್ನು ಮುಂಚಿತವಾಗಿ ತೊಳೆಯಿರಿ. ಅವುಗಳನ್ನು ಚೆನ್ನಾಗಿ ಒಣಗಲು ಬಿಡಿ, ಮನೆ ಸಂಪೂರ್ಣ ಸ್ವಚ್ಛವಾದ ಬಳಿಕ ಪರದೆ ಕಾರ್ಪೆಟ್‌ಗಳನ್ನು ಜೋಡಿಸಿಡಿ. ಜೊತೆಗೆ ಅಲಂಕಾರಿಕ ವಸ್ತುಗಳನ್ನು ಸಹ ಮೊದಲೇ ಸ್ವಚ್ಛಗೊಳಿಸಿಡಿ.

ಹಳೆಯ ವಸ್ತುಗಳನ್ನೆಲ್ಲಾ ಹೊರಗಿಡಿ:

ಸಾಮಾನ್ಯವಾಗಿ ಹಳೆಯ ವಸ್ತುಗಳು, ಮುರಿದ ವಸ್ತುಗಳನ್ನೆಲ್ಲಾ ಮೂಲೆಗೆ ಎಸೆದು ಬಿಡುತ್ತೇವೆ. ಮನೆ ಸ್ವಚ್ಛಗೊಳಿಸುವಾಗ ಮೊದಲು ಅವುಗಳನ್ನು ಮನೆಯಿಂದ ಹೊರಗೆ ಹಾಕಿ. ಹೌದು ಮುರಿದ ವಸ್ತುಗಳು, ಗಾಜು ಏನಾದರೂ ಇದ್ದರೆ ಅದನ್ನು ಕಸದ ಬುಟ್ಟಿಗೆ ಹಾಕಿ, ಹಳೆಯ ಬಟ್ಟೆಗಳನ್ನು ಯಾರಿಗಾದರೂ ನೀಡಿ. ಹೀಗೆ ಮಾಡುವುದರಿಂದ ಅರ್ಧ ಶುಚಿಗೊಳಿಸುವಿಕೆ ಸುಲಭವಾಗುತ್ತದೆ, ಮನೆಯಲ್ಲಿ ಸಕಾರಾತ್ಮಕತೆಯೂ ನೆಲೆಸುತ್ತದೆ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಕ್ಲೀನಿಂಗ್‌ ಕೆಲಸವನ್ನು ವಿಭಾಗಿಸಿ:

ಹಬ್ಬದ ಒಂದೆರಡು ದಿನಕ್ಕಿಂತ ಮುಂಚೆ ಮನೆ ಸ್ವಚ್ಛಗೊಳಿಸಲು ಆರಂಭಿಸಿದರೆ ಖಂಡಿತವಾಗಿಯೂ ಆಯಾಸ ಹೆಚ್ಚಾಗುತ್ತದೆ. ಆದ್ದರಿಂದ ಹಬ್ಬಕ್ಕೆ 10-12 ದಿನಕ್ಕೂ ಮುಂಚೆಯೇ ಕ್ಲೀನಿಂಗ್‌ ಕೆಲಸ ಆರಂಭಿಸಿ, ಒಂದೇ ದಿನ ಎಲ್ಲಾ ಕೆಲಸವನ್ನು ಮಾಡುವ ಬದಲು  ಒಂದು ದಿನ ಲಿವಿಂಗ್‌ ರೂಮ್‌, ಇನ್ನೊಂದು ದಿನ ಅಡುಗೆ ಕೋಣೆ, ಮತ್ತೊಂದು ದಿನ ಸ್ಟೋರ್‌ ಕ್ಲೀನಿಂಗ್‌ ಈ ರೀತಿ ಕೆಲಸವನ್ನು ವಿಭಜಿಸಿ, ಹೀಗೆ ಮಾಡುವುದರಿಂದ ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಒತ್ತಡವಿಲ್ಲ ಸಂಪೂರ್ಣ ಮನೆ ಸ್ವಚ್ಛವಾಗಿರುತ್ತದೆ.

ಕ್ಲೀನಿಂಗ್‌ ಕೆಲಸವನ್ನು ಸುಲಭಗೊಳಿಸುವುದು ಹೇಗೆ?

ಇಡೀ ಮನೆಯನ್ನು ಸ್ವಚ್ಛಗೊಳಿಸುವುದು ಸವಾಲಿನ ಕೆಲಸವೇ ಸರಿ. ಈ ಸವಾಲಿನ ಕೆಲಸವನ್ನು ಮೋಜಿನಿಂದ ಸುಲಭವಾಗಿ ಮಾಡಿಮುಗಿಸಬಹುದು. ಒಬ್ಬರೇ ಮನೆ ಕ್ಲೀನ್‌ ಮಾಡುವ ಬದಲು ಕುಟುಂಬ ಸದಸ್ಯರೊಂದಿಗೆ ಸೇರಿ ಮಾರಾಡುತ್ತಾ ಕೆಲಸ ಮಾಡಿ. ನೀವು ಮಕ್ಕಳನ್ನು ಸಹ ಸಣ್ಣ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳಬಹುದು.  ಒಬ್ಬರೇ ಕೆಲಸ ಮಾಡುತ್ತಿದ್ದೀರಿ ಎಂದಾದರೇ ಸಂಗೀತವನ್ನು ಆಲಿಸುತ್ತಾ ಕ್ಲೀನ್‌ ಮಾಡಿ. ಇದರಿಂದ ಯಾವುದೇ ಬೇಸರ, ಆಯಾಸವಿಲ್ಲದೆ ಕ್ಲೀನಿಂಗ್‌ ಕೆಲಸವೆಲ್ಲಾ ಬೇಗ ಮುಗಿದುಹೋಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us