AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಾನಸಿಕ ಆರೋಗ್ಯ ಹಾಳ್ತಾಗಿದೆ; ಕಾರ್ಪೊರೇಟ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ ಜೆನ್ ಝೀ ಉದ್ಯೋಗಿ

ಇಂದಿನ ದಿನಗಳಲ್ಲಿ ಸೌಲಭ್ಯ ಹೆಚ್ಚಿದಷ್ಟೂ ಕಾರ್ಪೊರೇಟ್ ಕೆಲಸದಲ್ಲಿ ಒತ್ತಡವೂ ಹೆಚ್ಚುತ್ತಿದೆ. ಡೆಡ್ ಲೈನ್ ಯಿಂದ ಒದ್ದಾಡುತ್ತಿದ್ದಾರೆ. ಇದೀಗ ಜೆನ್ ಝೀ ಯುವತಿಯೊಬ್ಬರು ಕಂಪನಿಯ ರೂಲ್ಸ್ ಬಗ್ಗೆ ಮೌನ ಮುರಿದಿದ್ದಾರೆ. 10 ನಿಮಿಷ ತಡವಾಗಿ ಬಂದರೆ ಕಂಪನಿ ಉದ್ಯೋಗಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.

Viral: ಮಾನಸಿಕ ಆರೋಗ್ಯ ಹಾಳ್ತಾಗಿದೆ; ಕಾರ್ಪೊರೇಟ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ ಜೆನ್ ಝೀ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Westend61/ Getty Images
ಸಾಯಿನಂದಾ
|

Updated on: Oct 19, 2026 | 12:18 PM

Share

ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳವಿದ್ರೂ ಒತ್ತಡ ಡಬಲ್ ಆಗಿರುತ್ತದೆ. ಕೆಲಸ ಸಾಕಪ್ಪ ಸಾಕೆಂದು ಜಾಬ್ ರಿಸೈನ್ ಮಾಡೋರೇ ಹೆಚ್ಚು. ಆದರೆ ಜೆನ್ ಝೀ ಯುವತಿ ಕಾರ್ಪೊರೇಟ್ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಕೇವಲ 3 ವೇತನ ಸಹಿತ ರಜೆಗಳು, 10 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬರುವಂತಿಲ್ಲ. ಕೆಲಸದ ಅವಧಿ 9 ಗಂಟೆಗೂ ಹೆಚ್ಚು. ಕಂಪನಿಯ ಈ ಎಲ್ಲಾ ರೂಲ್ಸ್ ಗೆ ಹೊಂದಿಕೊಂಡರೂ ಆರೋಗ್ಯ ಮಾತ್ರ ಕೈ ಕೊಡುತ್ತಲೇ ಇರುತ್ತದೆ. ತನ್ನ ಸೋದರ ಸಂಬಂಧಿ ಒಬ್ಬರು ಅನುಭವಿಸುವ ಒತ್ತಡದ ಬಗ್ಗೆ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಎಕ್ಸ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಊಟಕ್ಕೆ ಇದೆ ಇಂತಿಷ್ಟು ಸಮಯ

ಶೀತಲ್ (Sheetal) ಎಂಬ ಯುವತಿ ಕಾರ್ಪೊರೇಟ್ ನಲ್ಲಿ ಕೆಲಸ ಮಾಡುವ ತನ್ನ ಕಸಿನ್ ಅನುಭವಿಸುವ ಒತ್ತಡದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ನನ್ನ ಸೋದರ ಸಂಬಂಧಿ ಹೊಸ ಕೆಲಸದ ಸ್ಥಳದಲ್ಲಿನ ರೂಲ್ಸ್‌ ಬಗ್ಗೆ ಕರೆ ಮಾಡಿ ಮಾತನಾಡಿದ್ದಾರೆ. ಆಫೀಸಿನಲ್ಲಿ ಊಟಕ್ಕೆಂದು ನಿರ್ದಿಷ್ಟ ಟೈಮ್‌ ನೀಡಲಾಗಿದೆ. ನಾವು ಆ ಸಮಯದಲ್ಲಿ ಮಾತ್ರ ಊಟ ಮಾಡಬೇಕು. ಆಫೀಸಿನ ಟೈಮಿಂಗ್ಸ್ ಗಿಂತ ಮೊದಲೇ ಹಸಿವಾದ್ರೆ ಏನು ಮಾಡೋದು

ಎಕ್ಸ್‌ ಪೋಸ್ಟ್‌ ಇಲ್ಲಿದೆ

ಮಾನಸಿಕ ಆರೋಗ್ಯ ತೀರಾ ಹದಗೆಟ್ಟಿದೆ

ತಿಂಗಳಿಗೆ ಕೇವಲ 3 ರಜೆ ಮಾತ್ರ. ಆಫೀಸಿಗೆ 10 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬರುವಂತಿಲ್ಲ. 9 ಗಂಟೆಗಳ ಕಾಲ ರೆಸ್ಟ್ ಇಲ್ಲದೇ ಕೆಲಸ ಮಾಡ್ಬೇಕು. ಮ್ಯಾನೇಜರ್ ವರ್ತನೆ ಅತಿರೇಕ ಅನಿಸುತ್ತದೆ. ಕೆಲಸದ ವಿಷ್ಯದಲ್ಲಿ ಡೌಟ್ ಇದ್ದರೆ ಕೇಳಿ. ಪ್ರಾಜೆಕ್ಟ್ ತುಂಬಾ ಮುಖ್ಯ, ಹೀಗಾಗಿ ಯಾವುದೇ ತಪ್ಪು ಮಾಡ್ಬೇಡಿ. ಕೆಲಸದ ಒತ್ತಡದಿಂದಾಗಿ ನನ್ನ ಮಾನಸಿಕ ಆರೋಗ್ಯ ಹಾಳಾಗಿದೆ. ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಬಂದಿದೆ. ನಾನು ಈ ಕೆಲಸಕ್ಕೆ ಸೇರಿದ್ದೆ ತಪ್ಪಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಫೀಸ್‌ನಲ್ಲಿ ಕಾಫಿ ಕುಡಿಯುವಂತಿಲ್ಲ; ಬಾಸ್‌ನ ವಿಚಿತ್ರ ರೂಲ್ಸ್‌ಗೆ ಉದ್ಯೋಗಿ ಶಾಕ್

 ಯುವತಿಗೆ ಸಲಹೆ ನೀಡಿದ ನೆಟ್ಟಿಗರು

ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅವಳಿಗೆ ತಿಳಿಸಿ ಒತ್ತಡದ ಭರಿತ ಕೆಲಸದ ಸ್ಥಳದಿಂದ ಹೊರಬರುವುದು ಹೇಗೆಂದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಮ್ಯಾನೇಜರ್ ಎಷ್ಟು ರೂಡ್ ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕೆಲಸಕ್ಕೆ ರಿಸೈನ್ ಹೇಳುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಟಿವಿ9 ಫೆಸ್ಟಿವಲ್​ ಆಫ್​ ಇಂಡಿಯಾ ವೈಭವ: ನೇರಪ್ರಸಾರ ಇಲ್ಲಿದೆ
ಟಿವಿ9 ಫೆಸ್ಟಿವಲ್​ ಆಫ್​ ಇಂಡಿಯಾ ವೈಭವ: ನೇರಪ್ರಸಾರ ಇಲ್ಲಿದೆ
ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಂ
ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಂ
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ
ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ
ರಾಮ್‌ಪುರದಲ್ಲಿ ಓವೈಸಿ ಗುಡುಗು: ಮುಸ್ಲಿಂ ಯುವಶಕ್ತಿಗೆ ಎಐಎಂಐಎಂ ಹೊಸ ವೇದಿಕೆ
ರಾಮ್‌ಪುರದಲ್ಲಿ ಓವೈಸಿ ಗುಡುಗು: ಮುಸ್ಲಿಂ ಯುವಶಕ್ತಿಗೆ ಎಐಎಂಐಎಂ ಹೊಸ ವೇದಿಕೆ
ಇಂದು ಮಹಾನವಮಿ; ಸಿದ್ಧಿಧಾತ್ರಿಯ ಪೂಜಾ ಪರ್ವಕಾಲ
ಇಂದು ಮಹಾನವಮಿ; ಸಿದ್ಧಿಧಾತ್ರಿಯ ಪೂಜಾ ಪರ್ವಕಾಲ
ಬದ್ಧ ವೈರಿಗಳ ಭೇಟಿ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ
ಬದ್ಧ ವೈರಿಗಳ ಭೇಟಿ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ
ಹುಟ್ಟುಹಬ್ಬದಂದು ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ವಸಿಷ್ಠ ಸಿಂಹ
ಹುಟ್ಟುಹಬ್ಬದಂದು ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ವಸಿಷ್ಠ ಸಿಂಹ