Elephant: ಕರ್ನಾಟಕದಲ್ಲಿರುವ ಕಾಡಿನ ದೃಶ್ಯವಿದು. ಆನೆಯೊಂದು ನೀರು ಕುಡಿಯಲು ಬಂದಿದೆ. ಆ ಸಮಯಕ್ಕೆ ಹುಲಿಯೂ ಅಲ್ಲಿಗೆ ಬಂದಿದೆ. ಮುದೇನಾಗಬಹುದು ಎಂಬ ಕುತೂಹಲಕ್ಕಿಲ್ಲಿ ತೆರೆ ಬಿದ್ದಿದೆ. ಪರಸ್ಪರ ಸಮಾಧಾನವಾಗಿ ತಮ್ಮ ತಮ್ಮ ಹಾದಿ ಹಿಡಿದಿವೆ. ಈ ಅಪರೂಪದ ದೃಶ್ಯವನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ. ಸಂರಕ್ಷಿತ ಪ್ರದೇಶಗಳಲ್ಲಿ ಮೊಬೈಲ್ ಬಳಕೆ ಅತ್ಯಂತ ಅಸಹ್ಯಕರ, ಮೊಬೈಲ್ ನಿಷೇಧಿಸಬೇಕೇ? ಎಂದು ಕೇಳಿದ್ದಾರೆ. ಯಾಕೆ ಎನ್ನುವುದು ಈ ವಿಡಿಯೋ ನೋಡಿದ ಮೇಲೆ ನಿಮಗರ್ಥವಾಗುತ್ತದೆ.
Tigers and elephants tolerate each other fairly well in the wild.
But at times gentle giant shows who the boss is? ಇದನ್ನೂ ಓದಿYou can hear mobile calls in the background. Disgusting. Should mobiles be banned in side the Protected areas ? pic.twitter.com/7xWQAsfmbB
— Susanta Nanda (@susantananda3) June 13, 2023
ಮೊಬೈಲ್ ಶಬ್ದ ಕಿರಿಕಿರಿ ಮಾಡಿದ್ದು ಹೌದು. ಆದರೆ ಜೀಪ್ ಎಂಜಿನ್ ಶಬ್ದ? ಎಲೆಕ್ಟ್ರಿಕ್ ಜೀಪ್ ಆಗಬಹುದಲ್ಲ ಎಂದಿದ್ಧಾರೆ ಒಬ್ಬರು. ತಡೋಬಾ ಟೈಗರ್ ರಿಸರ್ವ್ ಕೋರ್ ಹಾಗೂ ಬಫರ್ ಝೋನ್ನಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇತರೇ ಅರಣ್ಯ ಪ್ರದೇಶಗಳೂ ಇದನ್ನು ಅನುಸರಿಸಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಇದನ್ನು ಅನೇಕರು ಅನುಮೋದಿಸಿದ್ದಾರೆ.
ಇದನ್ನೂ ಓದಿ : Viral Video: ಆಸ್ಟ್ರೇಲಿಯಾದ ಮನೆಯೊಂದರಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆ
ಫಾರೆಸ್ಟ್ ಗಾರ್ಡ್ ಮಾತ್ರ ಉಪಯೋಗಿಸುವಂತಿರಲಿ ಎಂದು ಅನೇಕರು ಹೇಳಿದ್ದಾರೆ. ಮನಾನು ಸಾಕಷ್ಟು ಸಲ ಕಬಿನಿಗೆ ಪ್ರಯಾಣಿಸಿದ್ದೇನೆ. ಹುಲಿ, ಚಿರತೆ ಕಂಡತಕ್ಷಣ ಡ್ರೈವರ್ಗಳು ಮೊಬೈಲ್ ಬಳಸಲು ಶುರು ಮಾಡುತ್ತಾರೆ ಎಂದಿದ್ದಾರೆ ಇನ್ನೂ ಒಬ್ಬರು. ಪ್ರವಾಸಿಗರ ಭೇಟಿ, ಪ್ರಾಣಿಗಳ ನಡುವಿನ ಅಂತರ ಇತ್ಯಾದಿಯೆಡೆ ವಿಶೇಷ ಗಮನ ಹರಿಸಬೇಕು ಎಂದು ಕೆಲವರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:57 am, Wed, 14 June 23