
ಮುಂಬೈ, ಅಕ್ಟೋಬರ್ 30: ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಎಷ್ಟೋ ಹೆಣ್ಣುಮಕ್ಕಳು ಬಸ್, ಕ್ಯಾಬ್, ಆಟೋದಲ್ಲಿ ಪ್ರಯಾಣಿಸುವಾಗ ಅಹಿತಕರ ಅನುಭವವಾಗಿರುತ್ತದೆ. ಮುಂಬೈನಲ್ಲಿ ತಡರಾತ್ರಿ ಯಾವುದೇ ಭಯವಿಲ್ಲದೇ ಟ್ಯಾಕ್ಸಿಯಲ್ಲಿ (taxi) ಪ್ರಯಾಣಿಸಿದೆ. ವಿಮಾನ ನಿಲ್ದಾಣದಿಂದ ಮನೆಗೆ ತೆರಳಲು ಚಾಲಕಿಯ ಟ್ಯಾಕ್ಸಿ ಬುಕ್ ಮಾಡಿದ್ದೇ ಆತಂಕವಿಲ್ಲದೇ ಪ್ರಯಾಣಿಸಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ. ಈ ಪ್ರಯಾಣವು ಸದ್ಯ ನೆಟ್ಟಿಗರ ಗಮನ ಸೆಳೆದಿದೆ.
ಅಪೂರ್ವ (Apoorva) ಎಂಬ ಮಹಿಳೆ ಮುಂಬೈನ ತಡರಾತ್ರಿ ಪ್ರಯಾಣದ ಅನುಭವ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಾನು ವಿಮಾನ ನಿಲ್ದಾಣದಿಂದ ಮನೆಗೆ ತೆರಳಲು ಚಾಲಕಿಯ ಟ್ಯಾಕ್ಸಿ ಬುಕ್ ಮಾಡಿದ್ದೆ. ಆದರೆ ಪ್ರಯಾಣದ ವೇಳೆ ಲೈವ್ ಲೊಕೇಶನ್ ಶೇರ್ ಮಾಡುವುದು ಇಲ್ಲವಾದ್ರೆ ಮನೆಯವರ ಜತೆಗೆ ಫೋನ್‌ನಲ್ಲಿ ಇರುತ್ತಿದ್ದೆ. ಆದ್ರೆ ಈ ಪ್ರಯಾಣದಲ್ಲಿ ಹಾಗೆ ಇರಲಿಲ್ಲ. ಯಾವುದೇ ಭಯವಿಲ್ಲದೇ ಆರಾಮವಾಗಿ ಕುಳಿತು ಪ್ರಯಾಣಿಸಿದೆ. ಇದಕ್ಕೆ ಕಾರಣ ಮಹಿಳಾ ಟ್ಯಾಕ್ಸಿ ಚಾಲಕಿ. ಪುರುಷರಿಗೆ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯವಿದೆ. ಆ ಅನುಭವ ಹೇಗಿರುತ್ತದೆ ಎಂದು ತಿಳಿಯಿತು ಎಂದಿದ್ದಾರೆ.
ಇದನ್ನೂ ಓದಿ: ಕೈ ತುಂಬಾ ಸ್ಯಾಲರಿ ಸಿಗೋ ಇಂಜಿನಿಯರ್ ಕೆಲ್ಸ ಬಿಟ್ಟು ರ‍್ಯಾಪಿಡೋ ಚಾಲಕನಾದ ಯುವಕ, ಅಸಲಿ ಕಾರಣ ಇಲ್ಲಿದೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಂಟಿಯಾಗಿ ಪ್ರಯಾಣಿಸುವುದು ಸುಲಭವಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೆಣ್ಣು ಸುರಕ್ಷತೆ ಇದೆಯೇ ಎಂದು ಎಲ್ಲರಿಗೂ ಕಾಡುವ ಪ್ರಶ್ನೆ ಎಂದಿದ್ದಾರೆ. ಇನ್ನೊಬ್ಬರು, ಭಯವಿಲ್ಲದೇ ಪುರುಷರಂತೆ ಓಡಾಡುವ ಸ್ವಾತಂತ್ರ್ಯ ಯಾವಾಗ ಸಿಗುತ್ತದೆಯೋ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ