Video: ಕನಸುಗಳನ್ನು ಬೆನ್ನಟ್ಟಿ ಮುಂಬೈಗೆ ಬರುವ ಯುವಸಮುದಾಯಕ್ಕೆ ಕಿವಿಮಾತು ಹೇಳಿದ ಯುವಕ
ಮಧ್ಯಮವರ್ಗದ ಜನರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಉಳಿಸಿ ಸ್ವಂತ ಸೂರನ್ನು ಕಟ್ಟಿಕೊಳ್ಳಲು ಹರಸಾಹಸ ಪಡ್ತಾರೆ. ಇಲ್ಲೊಬ್ಬ ಯುವಕನದ್ದು ಅದೇ ಕನಸು. ಈ ಯುವಕ ಕನಸು ಕಾಣುತ್ತಾ ಮುಂಬೈಗೆ ತೆರಳಿದ್ದಾನೆ. ಆದರೆ ಆತನ ಕನಸುಗಳೆಲ್ಲವನ್ನು ತಿಂದು ಹಾಕಿದ್ದು ನಗರದ ಬಾಡಿಗೆಯಂತೆ. ಹೌದು, ಈ ಯುವಕ ದುಬಾರಿ ಬಾಡಿಗೆ ನನ್ನ ಆದ್ಯತೆಗಳನ್ನು ಬದಲಾಯಿಸಿದೆ ಎಂದು ಹೇಳಿರುವ ವಿಡಿಯೋ ಸದ್ಯ ಚರ್ಚೆಗೆ ಕಾರಣವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮುಂಬೈ, ಜೂನ್ 21: ಮುಂಬೈನ (Mumbai) ಮನೆ ಬಾಡಿಗೆಗಳು ಗಗನಕ್ಕೇರುತ್ತಿವೆ. ಮದ್ಯಮವರ್ಗದ ಜನರು ಇರೋ ಸಂಬಳದಲ್ಲಿ ಅಲ್ಪ ಸ್ವಲ್ಪ ಉಳಿಸಿ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ. ದುಡಿದ ಹಣವನ್ನೆಲ್ಲಾ ಮನೆ ಬಾಡಿಗೆಗೆ, ಜೀವನ ನಿರ್ವಹಣೆಗೆ ಸಾಕಾಗುತ್ತಿದೆ. ಹೀಗಿರುವಾಗ ಯುವಕನೊಬ್ಬನ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಮುಂಬೈನ ದುಬಾರಿ ಬಾಡಿಗೆ ತನ್ನ ಕನಸಿನ ಸಣ್ಣ ಫ್ಲಾಟ್ ಖರೀದಿಸಲು ಕಷ್ಟಪಡುವಂತೆ ಮಾಡಿದೆ ಎಂದು ಯುವಕ ಹೇಳಿಕೊಂಡಿದ್ದಾನೆ. ಈ ಪೋಸ್ಟ್ ಕನಸುಗಳೊಂದಿಗೆ ನಗರಕ್ಕೆ ತೆರಳಿ ಜೀವನ ವೆಚ್ಚದೊಂದಿಗೆ ಹೋರಾಡುತ್ತಿರುವುದನ್ನು ಯುವಕನ ಬದುಕನ್ನು ಎತ್ತಿ ತೋರಿಸಿದೆ.
ಜಾಗ್ರತ್ ತಿರ್ವಾನಿ (jagratthirwani) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಬಾಲ್ಕನಿ ಇಲ್ಲದ ಫ್ಲಾಟ್ ಅನ್ನು ತೋರಿಸುವುದನ್ನು ಕಾಣಬಹುದು. ಈ ಯುವಕನು, ನಾನು ನನ್ನ ಕನಸುಗಳನ್ನು ನನಸಾಗಿಸಲು ಮುಂಬೈಗೆ ಬಂದಿದ್ದೇನೆ. ಇದನ್ನು ನೋಡಿ, ಬಾಲ್ಕನಿ ಇಲ್ಲದ ಫ್ಲಾಟ್. ಆದ್ದರಿಂದ ಕನಸು ಕಾಣುತ್ತಿರುವವರಿಗೆ ನಾನು ಒಂದು ಸಲಹೆಯನ್ನು ನೀಡಲು ಬಯಸುತ್ತೇನೆ. ನೀವು ಮುಂಬೈಗೆ ಬರಬೇಕಾಗಿಲ್ಲದ ರೀತಿಯಲ್ಲಿ ಕನಸು ಕಾಣಿರಿ ಎಂದು ಹೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ನೀವು ನಿಮ್ಮ ಕನಸುಗಳೊಂದಿಗೆ ಮುಂಬೈಗೆ ಬಂದು ಮನೆ ಬಾಡಿಗೆ ಮನೆಯಲ್ಲಿ ಉಳಿದಾಗ, ನಿಮ್ಮ ಏಕೈಕ ಕನಸು ಬಾಡಿಗೆಯನ್ನು ಕಟ್ಟುವುದರಲ್ಲೇ ಮುಗಿದು ಹೋಗುತ್ತದೆ. ಆಗ ಕನಸುಗಳನ್ನು ನನಸಾಗಿಸುವುದು ಅಷ್ಟು ಮುಖ್ಯವಲ್ಲ ಎಂಬ ಭಾವನೆ ಮೂಡುತ್ತದೆ. ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳದೇ ಅರ್ಧಕ್ಕೆ ಬಿಟ್ಟು ಬಹುದು. ಆದ್ದರಿಂದ, ಪ್ರಿಯ ಹಿತೈಷಿಗಳೇ ನೀವು ಮುಂಬೈ ಬರದೇ ಕನಸು ಕಂಡರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ನಿಮಗೆ ಸಲಹೆ ನೀಡಲು ಬಯಸುತ್ತೇನೆ. ಭಾರತ ಚಿರಕಾಲ ಬಾಳಲಿ, ಕನಸುಗಳು ಚಿರಕಾಲ ಬಾಳಲಿ ಎಂದು ವಿವರಿಸಿದ್ದಾನೆ.
ಇದನ್ನೂ ಓದಿ: 40 ಸಾವಿರ ರೂ ಮನೆ ಬಾಡಿಗೆ, 2.4 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಫುಲ್ ಶಾಕ್
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಗರದಲ್ಲಿ ಬದುಕಲು ಪ್ರಯತ್ನಿಸುತ್ತಿರುವ ಯುವ ವೃತ್ತಿಪರರಿಗೆ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕನಸು ಕಾಣುವುದು ಸುಲಭ, ನನಸು ಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಮಾತು ಕೇಳುವಾಗ ತಮಾಷೆಯೆನಿಸುತ್ತದೆ. ಆದರೆ ಸಣ್ಣ ಮನೆಯಲ್ಲಿ ವಾಸಿಸುವ, ಅರ್ಧದಷ್ಟು ಸಂಬಳವನ್ನು ಬಾಡಿಗೆಯಾಗಿ ನೀಡುವ ಪ್ರತಿಯೊಬ್ಬರಿಗೂ ಇದು ನೋವಿನ ಸಂಗತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




