Viral: ಎಲ್ಲಾ ಎಣ್ಣೆ ಮಹಿಮೆ; ಕುಡಿದ ಮತ್ತಲ್ಲಿ ರೈಲನ್ನೇ ತಡೆದು ನಿಲ್ಲಿಸಿದ ಕುಡುಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 22, 2025 | 9:30 AM

ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿಯಾದ ಕುಡಿತವು ಒಳ್ಳೆಯದಲ್ಲ. ಹೀಗೆ ಕಂಠಪೂರ್ತಿ ಕುಡಿದು ಅವಾಂತರಗಳನ್ನು ಸೃಷ್ಟಿಸುವ ಕುಡುಕರ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕುಡಿದ ಮತ್ತಲ್ಲಿ ವ್ಯಕ್ತಿಯೊಬ್ಬ ರೈಲನ್ನೇ ತಡೆದು ನಿಲ್ಲಿಸಿದ್ದಾನೆ. ಟ್ರೈನ್‌ ಹೋಗದಂತೆ ಹಳಿಯ ಮೇಲೆ ಕುಳಿತು ಅವಾಂತರ ಸೃಷ್ಟಿಸಿದ್ದು, ಈತನ ಮಂಗನಾಟದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಎಲ್ಲಾ ಎಣ್ಣೆ ಮಹಿಮೆ; ಕುಡಿದ ಮತ್ತಲ್ಲಿ ರೈಲನ್ನೇ ತಡೆದು ನಿಲ್ಲಿಸಿದ ಕುಡುಕ
ವೈರಲ್​​ ವಿಡಿಯೋ
Follow us on

ಮುಂಬೈ, ಮಾ. 22: ಕುಡುಕರು (drunkards) ಕಂಠಪೂರ್ತಿ ಕುಡಿದಾಗ ಅವರು ಏನು ಮಾಡ್ತಾರೆ ಎಂಬ ಅರಿವೇ ಅವರಿಗೆ ಇರೋದಿಲ್ಲ. ಎಣ್ಣೆ ಪ್ರಿಯರಿಗೆ ಕುಡಿದ ಮೇಲೆ ಅದೆಷ್ಟು ಹುಚ್ಚು ಧೈರ್ಯ ಬರುತ್ತೆ ಅಂದ್ರೆ ಹುಲಿಯ ಬೋನಿಗೂ ಬೇಕಾದ್ರೂ ಕೈ ಹಾಕ್ತಾರೆ, ಟವರ್‌ ಬೇಕಾದ್ರೂ ಏರಿ ನಿಲ್ತಾರೆ. ಕುಡುಕರ ಅವಾಂತರ, ಹುಚ್ಚು ಸಾಹಸಗಳಿಗೆ ಸಂಬಂಧಿಸಿದ ಇಂತಹ ಸುದ್ದಿಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕುಡಿದ ಮತ್ತಲ್ಲಿ ವ್ಯಕ್ತಿಯೊಬ್ಬ ರೈಲನ್ನೇ (Train) ತಡೆದು ನಿಲ್ಲಿಸಿದ್ದಾನೆ. ಅದು ಹೆಂಗ್‌ ಹೋಗ್ತೀರಾ ಎಂದು ಹೇಳಿ ರೈಲು ಹೋಗದಂತೆ ತಡೆದು ನಿಲ್ಲಿಸಿ ಅವಾಂತರ ಸೃಷ್ಟಿಸಿದ್ದಾನೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಈತನ ಮಂಗನಾಟವನ್ನು ಕಂಡು ನೋಡುಗರು ಫುಲ್‌ ಸುಸ್ತಾಗಿದ್ದಾರೆ.

ಮುಂಬೈನ ಮಾಹಿಮ್‌ನಲ್ಲಿ ಈ ಘಟನೆ ನಡೆದಿದ್ದು, ಎಣ್ಣೆ ಏಟಲ್ಲಿ ಕುಡುಕನೊಬ್ಬ ಇಲ್ಲಿನ ಲೋಕಲ್‌ ಟ್ರೈನ್‌ನನ್ನೇ ತಡೆದು ನಿಲ್ಲಿಸಿದ್ದಾನೆ. ರೈಲಿನ ಕಂಪಾರ್ಟ್‌ಮೆಂಟ್‌ ಮೇಲೆ ಹಾರಿ ಮಂಗನಾಟ ಆಡಿದ್ದು ಮಾತ್ರವಲ್ಲದೆ ಹಳಿಯ ಮೇಲೆ ಕುಳಿತು ಅದು ಹೆಂಗ್‌ ಹೋಗ್ತೀರಾ ನಾನು ನೋಡ್ತೀನಿ ಎನ್ನುತ್ತಾ ರೈಲು ಮುಂದೆ ಚಲಿಸದಂತೆ ತಡೆದು ನಿಲ್ಲಿಸಿದ್ದಾನೆ. ಕುಡುಕನ ಈ ಅವಾಂತರದಿಂದ ಮಾಹಿಮ್‌ ರೈಲು ನಿಲ್ದಾಣದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಯಿತಲ್ಲದೆ, ಇದರಿಂದ ಪ್ರಯಾಣಿಕರು ಕೂಡಾ ತೊಂದರೆಯನ್ನು ಅನುಭವಿಸಿದ್ದಾರೆ.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು chal_mumbai ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮುಂಬೈನ ಮಾಹಿಮ್‌ ರೈಲ್ವೆ ಸ್ಟೇಷನ್‌ನಲ್ಲಿ ಕುಡುಕನೊಬ್ಬ ರೈಲನ್ನು ತಡೆದು ನಿಲ್ಲಿಸಿ ಅವಾಂತರ ಸೃಷ್ಟಿಸಿದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬೈಕ್‌ ಸವಾರನಿಗೆ ಗುದ್ದಿದ ಟ್ಯಾಂಕರ್;‌ ಇಲ್ಲಿ ತಪ್ಪು ಯಾರದ್ದು?

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಲ್ಲಾ ಎಣ್ಣೆ ಪವರ್‌ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆರ್‌ಪಿಎಫ್‌ ಸಿಬ್ಬಂದಿಗಳು, ಸೆಕ್ಯುರಿಟಿ ಗಾರ್ಡ್ಸ್‌ ಎಲ್ಲಿ ಹೋಗಿದ್ದಾರೆʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮದ್ಯಕ್ಕೆ ರೈಲನ್ನೇ ತಡೆದು ನಿಲ್ಲಿಸುವ ಶಕ್ತಿಯಿದೆ ನೋಡಿʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ