
ಮುಂಬೈಯಲ್ಲಿ ಈಗ ಮಳೆಯ ಅಬ್ಬರ ಜೋರಾಗಿದೆ. ಮಳೆಯ ಅಬ್ಬರಕ್ಕೆ ನೂರಾರು ಮರಗಳು ನೆಲಕ್ಕುರುಳಿವೆ. ರಸ್ತೆಗಳು ಹಾನಿಗೊಳಗಾಗಿವೆ. ಈ ಮುನ್ನವೂ ಮಳೆಯಿಂದ ರೈಲ್ವೆ ಹಳಿಗಳ ಮೇಲೆ ನೀರು ತುಂಬಿಹೋಗಿತ್ತು. ಮಳೆಯ ಅಬ್ಬರಕ್ಕೆ ಕೊವಿಡ್ ನ ನಡುವೆಯೂ ಮುಂಬೈ ನಾಗರಿಕರು ಸ್ವಲ್ಪ ಹೆಚ್ಚೇ ಕಳವಳಗೊಂಡಿದ್ದರು. ಏಕೆಂದರೆ ಆ ಪ್ರಮಾಣದ ಮಳೆ ಮುಂಬೈನಲ್ಲಿ ಸುರಿದಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡುತ್ತಿರುವ ಮಳೆಯ ನಂತರದ ಮುಂಬೈನ ವಿಡಿಯೋವೊಂದು ಆಘಾತ ಮೂಡಿಸುವಂತಿದೆ.
ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ನಡೆದಿದ್ದು ಎಂದು ಹೇಳಲಾಗಿದೆ. ಮನೆಯ ಮುಂದೆ ಕಾರನ್ನು ನಿಲ್ಲಿಸಲಾಗಿತ್ತು. ಆದರೆ, ಧಾರಾಕಾರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ರಸ್ತೆಯಲ್ಲಿ ನಿಂತ ನೀರು ಹರಿದುಹೋಗಿರಲೇ ಇಲ್ಲ. ಕಾರಿನ ಮುಂಭಾಗದಲ್ಲೇ ರಸ್ತೆಯೊಳಗಿನ ಹೊಂಡ ನೀರು ನಿಂತದ್ದೇ ನೆವವಾಗಿ ಬಾಯ್ತೆರೆದುಬಿಟ್ಟಿದೆ. ಅಷ್ಟೇ, ಆ ಹೊಂಡ ಕಾರನ್ನು ನುಂಗಿಬಿಟ್ಟಿದೆ. ದೂರದಿಂದ ಇದನ್ನೆಲ್ಲ ನೋಡುತ್ತಿರುವವರು ಆಕ್ಷಣ ಏನನ್ನೂ ಮಾಡಲಾರದೇ ದಂಗಾಗಿಬಿಟ್ಟಿದ್ದಾರೆ. ಯಾರೋ ಮಹಾನುಭಾವರು ಈ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದಾರೆ.
ನೋಡನೋಡುತ್ತಿದ್ದಂತೆಯೇ ಕಾರು ಹೊಂಡದಲ್ಲಿ ಮುಳುಗಿ ಕಣ್ಣಿಗೆ ಕಾಣಿಸದಂತಾಗಿದೆ. ದೂರದಲ್ಲಿ ನಿಂತು ನೋಡುತ್ತಿದ್ದವರು ಆಘಾತಕ್ಕೊಳಗಾಗಿ ಉದ್ಘಾರವೆತ್ತುವುದನ್ನು ಸಹ ವಿಡಿಯೊದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಮನೆ ಎದುರಿಗೆ ಕಾರ್ ಪಾರ್ಕ್ ಮಾಡಿದ್ದೇನೆ, ಇನ್ಯಾವ ಭಯ ಇಲ್ಲ ಎಂದುಕೊಂಡ ಕಾರಿನ ಮಾಲೀಕ ಮಾತ್ರ ತಲೆ ಮೇಲೆ ಕೈ ಹೊತ್ತು ಕೂತಿದ್ದಾನಂತೆ.
ಇದನ್ನೂ ಓದಿ: Happy birthday Disha Patani: 19ನೇ ವಯಸ್ಸಿಗೆ ದಿಶಾ ಕೊಟ್ಟ ಮೊದಲ ಆಡಿಷನ್ ವಿಡಿಯೋ ವೈರಲ್
Viral Video: ಮಾಸ್ಕ್ ಧರಿಸದೆ ಓಡಾಡಿದವರಿಗೆ ಮಂಗಳಾರತಿ ಬೆಳಗಿ ಹಾಡು ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್
(Car sunk in ditch in Mumbai due to heavy rain video viral)
Published On - 5:01 pm, Sun, 13 June 21