
ಒಗಟು ಎಂದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಹೀಗಾಗಿ ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳತ್ತ ಆಸಕ್ತಿ ತೋರಿಸುತ್ತಾರೆ. ಇದು ನಿಮ್ಮ ಕಣ್ಣಿನ ದೃಷ್ಟಿ, ತಾಳ್ಮೆ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೀಗ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಕೇವಲ 5 ಸೆಕೆಂಡುಗಳಲ್ಲಿ ಬಣ್ಣದ ಚಿಟ್ಟೆಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ನೂರಕ್ಕೆ ನೂರರಷ್ಟು ಪರೀಕ್ಷಿಸುತ್ತದೆ. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಲಿವಿಂಗ್ ರೂಮ್. ಈ ರೂಮ್‌ನಲ್ಲಿ ವೃದ್ಧ ವ್ಯಕ್ತಿ ಕುಳಿತುಕೊಂಡಿದ್ದಾನೆ. ಆತನ ಪಕ್ಕದಲ್ಲಿ ಫೋಟೋ ಫ್ರೇಮ್‌ಗಳಿವೆ. ಮನೆಯ ಸಾಕು ನಾಯಿ ಕೂಡ ಪಕ್ಕದ ಸೋಫಾದಲ್ಲಿ ಕುಳಿತಿದೆ, ಇಲ್ಲಿ ಚಿಟ್ಟೆಯೊಂದಿದೆ. ನೀವು ಅದನ್ನು ಕೇವಲ 5 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.
ಇದನ್ನೂ ಓದಿ: ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಕಂಡು ಹಿಡಿಯಿರಿ
ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯ. ಈ ಚಿತ್ರದಲ್ಲಿ ಚಿಟ್ಟೆಯೊಂದಿದೆ. ತೀಕ್ಷ್ಣವಾದ ಕಣ್ಣು ನಿಮ್ಮದಾಗಿದ್ದರೆ ಈ ಚಿತ್ರದ ಇಂಚಿಂಚು ಕಣ್ಣಾಯಿಸಿ. ಎಷ್ಟೇ ಪ್ರಯತ್ನ ಪಟ್ಟರೂ ಚಿಟ್ಟೆ ಕಣ್ಣಿಗೆ ಬಿದ್ದಿಲ್ಲವೇ, ನಾವೇ ನಿಮಗೆ ಈ ಒಗಟಿನ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Sun, 17 May 26