Optical Illusion: ನಿಮ್ಮ ಕಣ್ಣಿಗೊಂದು ಸವಾಲ್;‌ ಗೂಬೆಗಳ ನಡುವೆ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿನ ಚುರುಕುತನ ಹಾಗೂ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಇಂತಹ ಒಗಟಿನ ಆಟವನ್ನು ನೀವು ಆಡಿರುತ್ತೀರಿ. ಆದರೆ ಈ ಚಿತ್ರದಲ್ಲಿ ಬೆಕ್ಕು ಎಂದು ಕಂಡು ಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ನಿರ್ದಿಷ್ಟ ಸಮಯದೊಳಗೆ ಈ ಟ್ರಿಕ್ಕಿ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ನೋಡಿ.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್;‌ ಗೂಬೆಗಳ ನಡುವೆ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: TinEye

Updated on: May 20, 2026 | 1:18 PM

ನಿಮ್ಮ ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆ ಪರೀಕ್ಷಿಸಲು ನೀವು ಮುಂದಾಗಿದ್ದೀರಾ. ಹಾಗಾದ್ರೆ ನೀವು ಈ ಇಲ್ಯೂಷನ್ ಚಿತ್ರವನ್ನು ಏಕಾಗ್ರತೆಯಿಂದ ನೋಡುವುದು ಒಳ್ಳೆಯದು. ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಗೂಬೆಗಳ ನಡುವೆ ಇರುವಾಗ ಬೆಕ್ಕನ್ನು 10 ಸೆಕೆಂಡುಗಳೊಳಗೆ ಹುಡುಕಬೇಕು. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ.

ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಈ ಮೋಜಿನ ಆಟಗಳ ಮೂಲಕ ಕಣ್ಣುಗಳು ಮತ್ತು ಬುದ್ಧಿ ಎಷ್ಟು ಚುರುಕಾಗಿದೆ ತಿಳಿಯಬಹುದು. ಈ ಚಿತ್ರ ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದೇ ಗೂಬೆಗಳ ಗುಂಪು. ಈ ಗೂಬೆಗಳ ನಡುವೆ ಕಳ್ಳ ಬೆಕ್ಕೊಂದು ಅಡಗಿ ಕುಳಿತಿದ್ದು, ನೀವು ಈ ಸಾಕು ಪ್ರಾಣಿಯನ್ನು ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 10 ಸೆಕೆಂಡುಗಳು ಮಾತ್ರ ಎಂಬುದು ಮರೆಯದಿರಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ

ಬೆಕ್ಕು ನಿಮಗೆ ಕಾಣಿಸಿತೇ?

ಗೂಬೆಗಳ ಗುಂಪಿನಲ್ಲಿ ಬೆಕ್ಕು ಎಲ್ಲಿದೆ ಎಂದು ಹುಡುಕುವುದು ಹೇಳಿದ್ದಷ್ಟು ಸುಲಭವಲ್ಲ. ಟ್ರಿಕ್ಕಿಯಾಗಿರುವ ಈ ಒಗಟು ನಿಮ್ಮ ತಲೆಗೆ ಹುಳ ಬಿಡಬಹುದು. ಈ ಸಾಕು ಪ್ರಾಣಿಯನ್ನು ಹುಡುಕಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳುತ್ತೇವೆ. ಒಂದು ವೇಳೆ ನೀವು ವಿಫಲರಾಗಿದ್ದೀರಿ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಾವೇ ನಿಮಗೆ ಕಳ್ಳ ಬೆಕ್ಕು ಎಲ್ಲಿದೆ ಎಂದು ತಿಳಿಸುತ್ತೇವೆ. ಈ ಕೆಳಗಿನ ಚಿತ್ರ ನೋಡಿ ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us