Optical Illusion: ಕ್ರಿಸ್‌ಮಸ್‌ ಟ್ರೀ ನಡುವೆ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸಲು ನಿಮ್ಮಿಂದ ಸಾಧ್ಯವೇ?

ಮೋಜಿನ ಆಟಗಳು ಎಲ್ಲರಿಗೂ ಇಷ್ಟನೇ. ಆದರೆ ಆಪ್ಟಿಕಲ್‌ ಇಲ್ಯೂಷನ್‌ ಬಿಡಿಸುವುದೆಂದರೆ ಹೆಚ್ಚಿನವರಿಗೆ ಕಷ್ಟ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ಕ್ರಿಸ್‌ಮಸ್‌ ಟ್ರೀಯಿದೆ. ಅದರಲ್ಲಿ ಅಡಗಿರುವ ಬೆಕ್ಕನ್ನು ಕಂಡುಹಿಡಿಯುವ ಸವಾಲು ಇಲ್ಲಿದೆ. ಈ ಒಗಟತು ಬಿಡಿಸಿ ನಿಮ್ಮ ಜಾಣರೇ ಎಂದು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಮೋಜಿನ ಒಗಟನ್ನು ಬಿಡಿಸಿ ನೋಡಿ.

Optical Illusion: ಕ್ರಿಸ್‌ಮಸ್‌ ಟ್ರೀ ನಡುವೆ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸಲು ನಿಮ್ಮಿಂದ ಸಾಧ್ಯವೇ?
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Dec 10, 2025 | 10:48 AM

ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಚಿತ್ರಗಳನ್ನು ಬಿಡಿಸುವಾಗ ಹತ್ತರಲ್ಲಿ ಒಬ್ಬರು ಮಾತ್ರ ಉತ್ತರ ಕಂಡು ಕೊಳ್ಳುತ್ತಾರೆ. ಇದು ಮೆದುಳಿಗೆ ವ್ಯಾಯಾಮ ನೀಡುವುದಲ್ಲದೇ, ನಿಮ್ಮ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುತ್ತದೆ. ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಕ್ರಿಸ್‌ಮಸ್‌ ಟ್ರೀಯ ನಡುವೆ ಅಡಗಿರುವ ಬೆಕ್ಕನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟನ್ನು ಬಿಡಿಸಲು ನಿಮಗೆ 17 ಸೆಕೆಂಡುಗಳಷ್ಟೇ ಇದೆ. ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ನೋಡಿ.

ಈ ಒಗಟಿನ ಚಿತ್ರದಲ್ಲಿ ಏನಿದೆ ಎಂದು ನೋಡಿ

Optical Illusion Photo

ಈ ಚಿತ್ರವನ್ನು ನೋಡಿದಾಗ ಮೊದಲು ನಿಮ್ಮ ಕಣ್ಣಿಗೆ ಜಗಮಗಿಸುವ ಕ್ರಿಸ್‌ಮಸ್‌ ಟ್ರೀ ಕಾಣಿಸುತ್ತದೆ. ಆದರೆ ಈ ಟ್ರೀಯಲ್ಲಿ ಜಾಣತನದಿಂದ ಬೆಕ್ಕನ್ನು ಮರೆಮಾಡಲಾಗಿದೆ. ಈ ಚಿತ್ರದಲ್ಲಿರುವ ಬೆಕ್ಕನ್ನು ಹುಡುಕುವ ಸವಾಲು ನೀಡಲಾಗಿದ್ದು, ಈ ಒಗಟು ಬಿಡಿಸಿ ನೀವು ಬುದ್ಧಿವಂತರು ಎನಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ.

ಇದನ್ನೂ ಓದಿ:ಮನೆಯ ಹಿಂಭಾಗದ ವರಾಂಡಾದಲ್ಲಿ ಅಡಗಿ ಕುಳಿತಿರುವ ಹಲ್ಲಿಯನ್ನು ಗುರುತಿಸಬಲ್ಲಿರಾ

ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?

Optical Illusion Answer

ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ 17 ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕಲು ಸಾಧ್ಯವಾಗಲಿಲ್ಲವೇ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಕಳ್ಳ ಬೆಕ್ಕನ್ನು ಹುಡುಕಲು ಸಾಧ್ಯ. ಕ್ರಿಸ್ ಮಸ್ ಟ್ರೀ ನಡುವ ಅಡಗಿ ಕುಳಿತಿರುವ ಬೆಕ್ಕನ್ನು ಈ ಮೇಲಿನ ಚಿತ್ರದಲ್ಲಿ ಗುರುತಿಸಿದ್ದೇವೆ. ನಿಮಗೆ ಈ ಕಳ್ಳ ಬೆಕ್ಕು ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us