AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ರಾಪಿಡೋ ಚಾಲಕನಿಗೆ 58 ರೂ ಬದಲು 4,000 ರೂ ಪಾವತಿಸಿದ ಪ್ರಯಾಣಿಕ, ಮುಂದೆ ಆಗಿದ್ದೇ ಬೇರೆ

ಆನ್ಲೈನ್ ಪೇಮೆಂಟ್ ವೇಳೆ ಎಷ್ಟು ಜಾಗರೂಕರಾಗಿದ್ರು ಸಾಲಲ್ಲ. ಸಣ್ಣ ತಪ್ಪಿನಿಂದಾಗಿ ಇದ್ದ ಹಣವನ್ನೆಲ್ಲಾ ಕಳೆದುಕೊಳ್ಳಬೇಕಾಗುತ್ತದೆ. ಇಲ್ಲೊಬ್ಬ ಪ್ರಯಾಣಿಕನದ್ದು ಅದೇ ಕಥೆ. ಹೌದು, ರಾಪಿಡೋ ಡ್ರೈವರ್ ಗೆ 58 ರೂಪಾಯಿ ಹಣ ಪಾವತಿಸುವ ಬದಲು ಆಕಸ್ಮಿಕವಾಗಿ ಬರೋಬ್ಬರಿ 4,000 ರೂ ಪಾವತಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ರಾಪಿಡೋ ಚಾಲಕನಿಗೆ 58 ರೂ ಬದಲು 4,000 ರೂ ಪಾವತಿಸಿದ ಪ್ರಯಾಣಿಕ, ಮುಂದೆ ಆಗಿದ್ದೇ ಬೇರೆ
ಸಾಂದರ್ಭಿಕ ಚಿತ್ರImage Credit source: cartoq.com
ಸಾಯಿನಂದಾ
|

Updated on:Oct 14, 2026 | 11:33 AM

Share

ಕೆಲವೊಮ್ಮೆ ನಾವು ಎಲ್ಲಾ ವಿಷ್ಯಗಳ ಬಗ್ಗೆಯೂ ಎಷ್ಟು ಎಚ್ಚರ ವಹಿಸಿದ್ರೂ ಸಾಲಲ್ಲ. ಗೊತ್ತೋ ಗೊತ್ತಿಲ್ಲದೆ ಮಾಡುವ ತಪ್ಪುಗಳಿಂದ ಸಮಸ್ಯೆಗಳೇ ಹೆಚ್ಚು. ಇದೀಗ ಪ್ರಯಾಣಿಕನೊಬ್ಬ (passenger) ರಾಪಿಡೋ ಬುಕ್ ಮಾಡಿದ್ದಾನೆ. ಇದೇ ವೇಳೆ ರಾಪಿಡೋ ಬಾಡಿಗೆಯಾಗಿ 58 ರೂ ಪೇಮೆಂಟ್ ಮಾಡಬೇಕಾಗಿತ್ತು. ಗೊಂದಲದಲ್ಲಿದ್ದ ಪ್ರಯಾಣಿಕ ಒಟಿಪಿಯನ್ನೇ ಹಾಕಿ 4,000 ರೂ ಪಾವತಿಸಿದ್ದಾನೆ. ತದನಂತರದಲ್ಲಿ ರಾಪಿಡೋ ಚಾಲಕನ ವರ್ತನೆ ಚರ್ಚೆಗೆ ಕಾರಣವಾಗಿದೆ.

ಸಣ್ಣ ಎಡವಟ್ಟಿನಿಂದ ಹಣ ಕಳೆದುಕೊಂಡ ಪ್ರಯಾಣಿಕ

ರಾಪಿಡೋ ಯೂಸರ್ಸ್‌ (r/RapidoUsers) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬ ತನಗಾದ ಕಹಿ ಅನುಭವವನ್ನು ಪೋಸ್ಟ್ ಮಾಡಿದ್ದಾರೆ. ರಾಪಿಡೋ ರೈಡ್ ಮುಗಿದ ಬಳಿಕ ಹಣ ಪಾವತಿಸಲು ಯುಪಿಐ ಬಳಸಿದೆ. ಆದರೆ ತನ್ನ ಗೊಂದಲದಿಂದ 50 ರೂ ಪಾವತಿಸುವ ಬದಲು ಒಟಿಪಿ ಸಂಖ್ಯೆಯನ್ನೇ ಹಾಕಿ 4,000 ರೂ ಪಾವತಿ ಮಾಡಿದೆ. ತನ್ನ ಗಮನಕ್ಕೆ ಬಂದ ತಕ್ಷಣ ರಾಪಿಡೋ ಚಾಲಕನ ಬಳಿ ಹೆಚ್ಚುವರಿ ಹಣವನ್ನು ವಾಪಾಸ್ ಕೊಡುವಂತೆ ಕೇಳಿದೆ. ಆದರೆ ಆತ ಹಣ ಮರುಪಾವತಿಸಲು ಒಪ್ಪಲಿಲ್ಲ. ಹಣವು ನಾಳೆ ನನ್ನ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ . ತೆರಿಗೆ ಕಡಿತಗೊಳಿಸಿ ಉಳಿದ ಹಣವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ. ಆದರೆ ಕೊನೆಗೆ ನಾನು ಸಹಾಯಕ್ಕಾಗಿ ರಾಪಿಡೋದ ಗ್ರಾಹಕ ಸೇವಾ ತಂಡವನ್ನು ಸಂಪರ್ಕಿಸಿದೆ. ಗ್ರಾಹಕ ಸೇವಾ ತಂಡವು ಈಗಾಗಲೇ ಚಾಲಕನಿಗೆ ಹಣ ವರ್ಗಾವಣೆಯಾಗಿದೆ ಹಾಗೂ ಇದು ನಿಮ್ಮಿಬ್ಬರ ನಡುವಿನ ವ್ಯವಹಾರವಾಗಿದೆ ಎಂದು ಹೇಳಿದರು. ಈ ಸಮಸ್ಯೆಗೆ ಪರಿಹಾರವಂತೂ ಸಿಗಲಿಲ್ಲ.. ದಯವಿಟ್ಟು ಯಾರಾದರೂ ಇದಕ್ಕೆ ಸಲಹೆ ನೀಡಬಹುದೇ ಎಂದು ಕೇಳಿದ್ದಾನೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

Accidentally paid my otp to rapido by u/scaredoftoothdecay45 in RapidoUsers

ಇದನ್ನೂ ಓದಿ: ಏರ್‌ಹೋಸ್ಟೆಸ್ ತರಬೇತಿ ಬಿಟ್ಟು ಟ್ರಕ್ ಚಾಲಕಿಯಾದ ಹಿಮಾಚಲದ ಯುವತಿ: ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ ನೇಹಾ ಠಾಕೂರ್

ಸಲಹೆ ನೀಡಿದ ನೆಟ್ಟಿಗರು

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ರಾಪಿಡೋ ಚಾಲಕನಿಗೆ ದುಡ್ಡಿನ ಮೇಲೆ ಆಸೆ ಎಂದು ಕಾಣುತ್ತದೆ. ಬಾಡಿಗೆ ಹಣ ಇಟ್ಟುಕೊಂಡು ಉಳಿದ ಹಣ ಕೊಡಬಹುದು ಅಲ್ಲವೇ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಸೈಬರ್ ಕ್ರೈಂ ದೂರು ನೀಡಿದರೆ ಹಣ ವಾಪಾಸ್ ಬರಬಹುದೇನೋ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, ಆ ದುಡ್ಡಿನ ಆಸೆಯೇ ಬಿಟ್ಟು ಬಿಡಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Wed, 14 October 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ