Video: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು

ಪರಿಶುದ್ಧ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಸ್ವಾರ್ಥ ಸ್ನೇಹ ಸಂಬಂಧ ಸಾರುವ ವಿಡಿಐೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಈ ಸುಂದರ ಸ್ನೇಹ ಸಂಬಂಧಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮೂವರು ಪುಟ್ಟ ಮಕ್ಕಳು ಬೀದಿ ನಾಯಿ ಜತೆಗೆ ಆಟವಾಡುತ್ತಿದ್ದಾರೆ. ಈ ದೃಶ್ಯ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು
ವೈರಲ್ ವಿಡಿಯೋ
Image Credit source: Instagram

Updated on: May 19, 2026 | 4:50 PM

ಈ ಜಗತ್ತಿನಲ್ಲಿ ಎಲ್ಲ ಬಂಧಗಳನ್ನು ಮೀರಿದ ಸಂಬಂಧವೇ ಈ ಸ್ನೇಹ (friendship). ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೌದು, ಈ ಮೂಕ ಪ್ರಾಣಿಗಳ ಜತೆಗೆ ಸ್ನೇಹ ಬೆಳೆಸಿದರೆ ಅವುಗಳು ಜೀವನ ಪರ್ಯಂತ ಜತೆಗಿರುತ್ತವೆ. ಇದೀಗ ಪುಟಾಣಿಗಳು ರಸ್ತೆ ಬದಿಯಲ್ಲಿದ್ದ ಶ್ವಾನದ ಜತೆಗೆ ಆಟ ಆಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

md_royal_teams ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಗಳ ಜತೆಗೆ ಶ್ವಾನದ ಸ್ನೇಹ ಸಂಬಂಧವನ್ನು ಕಾಣಬಹುದು. ರಸ್ತೆ ಬದಿಯಲ್ಲಿ ಕುಳಿತ ಮಕ್ಕಳ ಗುಂಪಿನಲ್ಲಿ ಶ್ವಾನವೊಂದಿರುವುದನ್ನು ನೀವು ಗಮನಿಸಬಹುದು. ಮೂವರು ಮಕ್ಕಳು ಶ್ವಾನದ ಜತೆಗೆ ಆಟ ಆಡುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ

ಈ ವಿಡಿಯೋ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮುದ್ದಾಗಿದೆ ಎಂದಿದ್ದಾರೆ. ಮತ್ತೊಬ್ಬರು, ನನ್ನ ಬಾಲ್ಯವು ಇದೆ ರೀತಿಯಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ದೃಶ್ಯವನ್ನು ಯಾರು ರೆಕಾರ್ಡ್ ಮಾಡುತ್ತಿದ್ದೀರೋ ಅವರು ದಯವಿಟ್ಟು ಈ ಶ್ವಾನಕ್ಕೆ ತಿನ್ನಲು ಆಹಾರ ಕೊಡಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us