
ಸೋಶಿಯಲ್ ಮೀಡಿಯಾ (social media) ದಲ್ಲಿ ರೈಲ್ವೆ ಸ್ಟೇಷನ್, ರೈಲಿನಲ್ಲಿ ನಡೆಯುವ ಕೆಲವು ಚಿತ್ರ ವಿಚಿತ್ರ ಘಟನೆಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದಲ್ಲದೇ ಕೆಲವೊಮ್ಮೆ ಪ್ರಯಾಣಿಕರ ನಡುವಿನ ವಾದ ವಿವಾದಗಳು, ಸೀಟಿಗಾಗಿ ನಡೆಯುವ ಜಗಳಗಳು, ರೀಲ್ಸ್ ಹುಚ್ಚಾಟ ಇಂತಹ ಹತ್ತಾರು ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತದೆ. ಇದೀಗ ಪ್ರಯಾಣಿಕನೊಬ್ಬನು ಊಟ ಆರ್ಡರ್ ಮಾಡಿದ್ದು, ಆದರೆ ಈ ಊಟದ ಮೇಲೆ ದುಪ್ಪಟ್ಟು ದರ ವಸೂಲಿ ಮಾಡಲಾಗಿದೆ. ಈ ಬಗ್ಗೆ ಪ್ರಯಾಣಿಕನು ಪ್ರಶ್ನಿಸಿದ್ದು, ಪ್ರಯಾಣಿಕನ ಮೇಲೆ ರೈಲ್ವೇ ನಿರ್ವಹಣಾ ಸಿಬ್ಬಂದಿ ಯೂ ಹಲ್ಲೆ ನಡೆಸಿದ್ದಾರೆ. ಈ ಘಟನೆಯೂ ಋಷಿಕೇಶ (rushikesh) ದಿಂದ ವೈಷ್ಣೋದೇವಿ (vaishnodevi) ಗೆ ತೆರಳುವ ಹೇಮಕುಂಟ್ ಎಕ್ಸ್ಪ್ರೆಸ್ (hemakunt express) ರೈಲು 14609ರಲ್ಲಿ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Mr vishala ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಪ್ರಯಾಣಿಕನು ಊಟ ಆರ್ಡರ್ ಮಾಡಿದ್ದು, ಈ ವೇಳೆ ಯಲ್ಲಿ ಊಟದ ದರ ನಿಗದಿತ ದರಕ್ಕಿಂತ ದುಪ್ಪಟ್ಟು ಹಣವನ್ನು ಪ್ರಯಾಣಿಕನಿಂದ ವಸೂಲಿ ಮಾಡಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದು, ಮಾತ್ರವಲ್ಲದೇ ಇದನ್ನು ಪ್ರಯಾಣಿಕನು ವಿಡಿಯೋ ಮಾಡಿದ್ದಾನೆ. ಇದರಿಂದ ಕೋಪಗೊಂಡ ರೈಲ್ವೇ ಸಿಬ್ಬಂದಿಯೂ ಆತನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಹೌದು, ಸಹ ಸಿಬ್ಬಂದಿಗಳನ್ನು ಕರೆಸಿಕೊಂಡು ಮೇಲಿನ ಬರ್ತ್ ನಲ್ಲಿದ್ದ ಪ್ರಯಾಣಿಕನ ಮೇಲೇರಿ ಹೊಡೆಯುವುದನ್ನು ನೀವಿಲ್ಲಿ ನೋಡಬಹುದು. ಈ ಪ್ರಯಾಣಿಕನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂಧೂರ, ಕಲಾವಿದರ ಮೈ ರೋಮಾಂಚನಕಾರಿ ಮಾತುಗಳು
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈಗಾಗಲೇ 4.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ‘ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆಗೆ ತಿಳಿಸಿದ್ದಾರೆ. ಇನ್ನೊಬ್ಬರು, ಈ ರೀತಿ ಪ್ರಯಾಣಿಕರಿಂದ ಊಟಕ್ಕೆ ದುಪ್ಪಟ್ಟು ದರ ವಸೂಲಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ದಯವಿಟ್ಟು ಈ ಪ್ರಕರಣವನ್ನು ಪರಿಶೀಲಿಸಿ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದ್ದು, ಇದನ್ನು ಸಂಪೂರ್ಣ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಬರೆದಿದೆ. ಅಡುಗೆ ಒದಗಿಸುವವರಿಗೆ ₹5 ಲಕ್ಷ ದಂಡ ವಿಧಿಸಲಾಗಿದೆ. ಕಥುವಾ ಜಿಆರ್ಪಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ