ರೈಲಿನಲ್ಲಿ ಪ್ರಯಾಣಿಕರಿಗೆ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದರ ಹಿಂದಿದೆ ಕಾರಣ
ಸಾಮಾನ್ಯವಾಗಿ ನಾವೆಲ್ಲಾ ಡ್ರೆಸ್ ಅಥವಾ ಸೀರೆ ಖರೀದಿಸಲು ಹೋದ್ರೆ ಬಿಳಿ ಬಣ್ಣದ ಉಡುಗೆಗಳ ಖರೀದಿಯತ್ತ ಅಷ್ಟಾಗಿ ಮನಸ್ಸು ಮಾಡುವುದಿಲ್ಲ. ಬಿಳಿ ಬಣ್ಣದ ಉಡುಪು ಬೇಗನೆ ಕೊಳೆಯಾಗುತ್ತವೆ. ಆದರೆ ಈ ರೈಲಿನಲ್ಲಿ ಬಿಳಿ ಬಣ್ಣದ ಬೆಡ್ಶೀಟನ್ನೇ ಬಳಸುತ್ತಾರೆ. ಬಿಳಿ ಬಣ್ಣದ ಬೆಡ್ಶೀಟ್ ಹಾಗೂ ದಿಂಬನ್ನು ಬಳಸುವುದರ ಹಿಂದೆ ಸ್ವಚ್ಫತೆ ಹಾಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂಬ ಕಾರಣವು ಅಡಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ಬಿಳಿ ಬಣ್ಣದ ಮೇಲೆ ಸ್ವಲ್ಪ ಕೊಳೆಯಾದ್ರು ಬೇಗನೆ ಕಾಣಿಸಿಕೊಳ್ಳುತ್ತವೆ
ಎಸಿ ಅಥವಾ ಸ್ಲೀಪರ್ ಕೋಚ್‌ಗಳಲ್ಲಿ ಬಿಳಿ ಬಣ್ಣದ ಬೆಡ್‌ಶೀಟ್‌ಗಳನ್ನೇ ಪ್ರಯಾಣಿಕರಿಗೆ ನೀಡುತ್ತಾರೆ
ಬಿಳಿ ಬಣ್ಣವು ಶುದ್ಧತೆ ಹಾಗೂ ಪ್ರಶಾಂತತೆಯ ಭಾವನೆಯನ್ನು ಮೂಡಿಸುತ್ತದೆ
ನೀವು ರೈಲಿನಲ್ಲಿ ಪ್ರಯಾಣಿಸಿದ್ದೀರಬಹುದು. ಅದರಲ್ಲೂ ಈ ಎಸಿ ಹಾಗೂ ಸ್ಲೀಪರ್ ಕೋಚ್‌ಗಳಲ್ಲಿ ಹೋಗಿದ್ದರೆ ಈ ವಿಷ್ಯವನ್ನು ನೀವು ಗಮನಿಸಿರುತ್ತೀರಿ. ಹೌದು, ಎಸಿ ಬೋಗಿಗಳಲ್ಲಿ ಬಿಳಿ ಬಣ್ಣದ ಬೆಡ್‌ಶೀಟ್‌ಗಳನ್ನೇ (white bed sheet) ಪ್ರಯಾಣಿಕರಿಗೆ ನೀಡುತ್ತಾರೆ. ಈ ಬಿಳಿ ಬಣ್ಣದ ಮೇಲೆ ಸ್ವಲ್ಪ ಕೊಳೆಯಾದ್ರು ಬೇಗನೆ ಕಾಣಿಸಿಕೊಳ್ಳುತ್ತವೆ. ಆದ್ರೂ ಯಾಕೆ ಈ ಬಣ್ಣದ ಬೆಡ್ ಶೀಟ್ ಹಾಗೂ ದಿಂಬನ್ನು ಪ್ರಯಾಣಿಕರಿಗೆ ನೀಡುತ್ತಾರೆ ಎಂಬ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ. ಈ ಬಣ್ಣವು ಬೇಗನೆ ಮಾಸುವುದಿಲ್ಲ ಹಾಗೂ ಸ್ವಚ್ಛತೆಗೂ ಸುಲಭ ಸೇರಿದಂತೆ ಇನ್ನಿತರ ಕಾರಣಗಳು ಸೇರಿವೆ.
ರೈಲಿನಲ್ಲಿ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದು ಯಾಕೆ?
ಬಿಳಿ ಬಣ್ಣದಲ್ಲಿ ಕೊಳೆ ಕಾಣಿಸುತ್ತದೆ. ಹೀಗಾಗಿ ಪ್ರಯಾಣಿಕರು ಬೆಡ್ ಶೀಟ್‌ಗಳು ಸ್ವಚ್ಛವಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಇದು ರೈಲು ಪ್ರಯಾಣಿಕರಿಗೆ ಸ್ವಚ್ಛತೆಯ ಭರವಸೆ ನೀಡಲು ಸಹಕಾರಿಯಾಗಿದೆ.
ಬಿಳಿ ಬಟ್ಟೆಗೆ ಬ್ಲೀಚ್ ಮಾಡುವುದು ಸುಲಭ ಹಾಗೂ ಈ ಬಟ್ಟೆ ದೀರ್ಘಕಾಲ ಬಾಳಿಕೆ ಬರುತ್ತದೆ.
ಬಿಳಿ ಬಣ್ಣವು ಶುದ್ಧತೆ ಹಾಗೂ ಪ್ರಶಾಂತತೆಯ ಭಾವನೆಯನ್ನು ಮೂಡಿಸುತ್ತದೆ.
ಬಿಳಿ ಬೆಡ್ ಶೀಟ್ ಗಳನ್ನು ಅಧಿಕ ಉಷ್ಣಾಂಶದಲ್ಲಿ ಹಾಗೂ ರಾಸಾಯನಿಕ ಬಳಸಿ ತೊಳೆಯಲಾಗುತ್ತದೆ. ಇದು ಬಿಳಿಯಾಗಿರುವುದರಿಂದ ಬಣ್ಣ ಬೇಗ ಮಾಸುತ್ತದೆ ಎನ್ನುವ ಭಯ ಇರುವುದಿಲ್ಲ.