
ಈಗಿನ ದುಬಾರಿ ದುನಿಯಾದಲ್ಲಿ ನಗರದಲ್ಲಿ ಬದುಕು ಕಷ್ಟಕರ. ದುಡಿದ ಹಣವನ್ನೆಲ್ಲವೂ ಮನೆ ಖರ್ಚಿಗೆ ಸಾಕಾಗುತ್ತದೆ. ದಂಪತಿಯಿಬ್ಬರೂ ಹೊರಗೆ ಹೋಗಿ ದುಡಿಯುತ್ತಿದ್ದರೂ ಹಣಕಾಸಿನ ನಿರ್ವಹಣೆ (Financial management) ಕಷ್ಟಕರವಾಗಿರುತ್ತದೆ. ಈ ದಂಪತಿಯದ್ದು ಅದೇ ಪರಿಸ್ಥಿತಿ. 30ರ ಹರೆಯದ ದಂಪತಿಯ ಒಟ್ಟು ಮಾಸಿಕ ಆದಾಯ 1.7 ಲಕ್ಷ ರೂ ಆಗಿದ್ರೂ, ಪ್ರತಿ ತಿಂಗಳ ಕೊನೆಯಲ್ಲಿ ಕೇವಲ 2,520ರೂ ಉಳಿತಾಯ ಮಾಡುತ್ತಾರಂತೆ. ಆರ್ಥಿಕ ಸಲಹೆ ಕೋರಿ ಮಾಡಿದ ಪೋಸ್ಟ್ ರೆಡ್ಡಿಟ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
personalfinanceindia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. 1.7 ಲಕ್ಷ ರೂಪಾಯಿ ಗಳಿಕೆ, ಜೀವನ ವೆಚ್ಚದಿಂದ ಮಾನಸಿಕವಾಗಿ ದಣಿದಿದ್ದೇವೆ, ಸಲಹೆಗಳು ಬೇಕು” ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ ದಂಪತಿ ಬರೆದುಕೊಂಡಿದ್ದಾರೆ.
Posts from the personalfinanceindia
community on Reddit
ನಮಗೆ 30 ವರ್ಷ ವಯಸ್ಸು, 2 ವರ್ಷಗಳ ಹಿಂದೆ ವಿವಾಹವಾದೆವು, ನಮ್ಮ ಹಣಕಾಸಿನ ಬಗ್ಗೆ ನಿಗಾ ಇಡಲು ಪ್ರಾರಂಭಿಸಿದೆವು. ಶೀಘ್ರದಲ್ಲೇ ನಮಗೆ ರಿಯಾಲಿಟಿ ಚೆಕ್ ಸಿಕ್ಕಿತು. ಇದನ್ನು ಸರಿಪಡಿಸಲು ನಾನು ಎಲ್ಲಿಂದ ಪ್ರಾರಂಭಿಸಬೇಕು? ಮನೆಯನ್ನು ಹೇಗೆ ಯೋಜಿಸುವುದು? ಮಕ್ಕಳಿಗಾಗಿ ಯಾವಾಗ ಯೋಜಿಸಬೇಕು? ತುರ್ತು ಪರಿಸ್ಥಿತಿಗಳಿಗೆ ಹೇಗೆ ಉಳಿಸುವುದು? ನಿವೃತ್ತಿಗಾಗಿ ಯಾವಾಗ ಉಳಿಸುವುದು? 2 ವರ್ಷಗಳ ನಂತರ ನಮ್ಮ ಹಣಕಾಸು ಉತ್ತಮವಾಗಿರುತ್ತದೆ ಎಂದುಕೊಂಡೆವು ಆದರೆ ಸಮಯ ಮೀರುತ್ತಿದೆ ಎಂದೆನಿಸುತ್ತಿದೆ ಎಂದಿದ್ದಾರೆ.
ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ನಾನು ತಿಂಗಳಿಗೆ 1.02 ಲಕ್ಷ ಗಳಿಸಿದರೆ ನನ್ನ ಪತ್ನಿ ಮಾಸಿಕ 68,000 ರೂ ಗಳಿಸುತ್ತಾಳೆ. ನಮ್ಮಿಬ್ಬರ ಒಟ್ಟು ಆದಾಯ 1.7 ಲಕ್ಷ ರೂ. ನಮ್ಮ ಈ ಆದಾಯದ ಬಹುಪಾಲು ಭಾಗ ಸಾಲ ಮರುಪಾವತಿಗೆ ಹೋಗುತ್ತದೆ. ಮಾಸಿಕ ಇಎಂಐ ಮೊತ್ತ 85,980 ರೂ, ಇದರಲ್ಲಿ 70,154 ರೂ ವೈಯಕ್ತಿಕ ಸಾಲ ಮರುಪಾವತಿ, 3,000 ರೂ ಶಿಕ್ಷಣ ಸಾಲ, 12,000 ರೂ ಬೈಕ್ ಸಾಲ ಮತ್ತು 826 ರೂ ಫೋನ್ ಇಎಂಐ ಸೇರಿವೆ ಎಂದು ಹೇಳಿದ್ದಾರೆ.
ಬಾಡಿಗೆ, ನಿರ್ವಹಣೆ, ದಿನಸಿ, ಪ್ರಯಾಣ, ವೈದ್ಯಕೀಯ ವೆಚ್ಚಗಳು ಮತ್ತು ಯುಟಿಲಿಟಿ ಬಿಲ್‌ಗಳನ್ನು ಒಳಗೊಂಡಂತೆ ಅವರ ಸ್ಥಿರ ಮಾಸಿಕ ವೆಚ್ಚವು 53,500 ರೂ ಇರುತ್ತದೆ. ವೈಯಕ್ತಿಕ ಖರ್ಚು, ಔಟಿಂಗ್ ಗೆ ಹಾಗೂ ಕುಟುಂಬ ಸಂಬಂಧಿತ ತುರ್ತು ಪರಿಸ್ಥಿತಿಗಳು ಸೇರಿದಂತೆ ವೇರಿಯಬಲ್ ವೆಚ್ಚಗಳಿಗಾಗಿ 28,000 ರೂ ಆಗುತ್ತದೆ. ಎಲ್ಲಾ ಖರ್ಚುಗಳನ್ನು ಕಳೆದು ಪ್ರತಿ ತಿಂಗಳು ಕೇವಲ 2,520 ರೂ ಮಾತ್ರ ಉಳಿಯುತ್ತದೆ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಸಂಬಳ ಪಡೆಯುತ್ತಿದ್ದ ಕೈಗಳಿಗಿಂತ ಖಾಲಿ ಕೈಗಳು ಕಲಿಸಿದ್ದೇ ಹೆಚ್ಚು; ಜಾಬ್ ರಿಸೈನ್ ಮಾಡಿದ ವ್ಯಕ್ತಿ ಹೀಗೆಂದಿದ್ದೇಕೆ?
ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆ ಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ದುಬಾರಿ ಖರ್ಚು ಮಾಡುವುದು ಸಮಸ್ಯೆಯಲ್ಲ. ನಿಮ್ಮ ಸಾಲಗಳು ಇಲ್ಲಿ ನಿಜವಾದ ಖಳನಾಯಕರು. ನೀವು ಕನಿಷ್ಠ ವೈಯಕ್ತಿಕ ಸಾಲವನ್ನು ತೀರಿಸುವವರೆಗೆ ನೀವು ಹೆಚ್ಚು ಉಳಿಸಲು ಸಾಧ್ಯವಿಲ್ಲ. ನಿಮ್ಮ ಬೈಕ್ ಸಾಲ ಮುಗಿಯುತ್ತದೆ. 4 ತಿಂಗಳು ಕಾಯಲು ನಾನು ಸೂಚಿಸುತ್ತೇನೆ. ತದನಂತರ 12 ಸಾವಿರ ರೂ. ನಿಮ್ಮ ವೈಯಕ್ತಿಕ ಸಾಲವನ್ನು ಬೇಗನೆ ಪೂರ್ವಪಾವತಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ದುಡಿಮೆ ಹೆಚ್ಚಾದ್ದಂತೆ ಕಮಿಟ್ ಮೆಂಟ್ ಹೆಚ್ಚು. ಹೀಗಾಗಿ ಅನಗತ್ಯಕ್ಕಿಂತ ಹೆಚ್ಚು ಖರ್ಚುಗಳು ಹಾಗೂ ಕಮಿಟ್ ಮೆಂಟ್ ಗಳು ಬೇಡ ಎಂದಿದ್ದಾರೆ. ಮತ್ತೊಬ್ಬರು, ಬೆಲೆಗಳು ಏರಿಕೆ, ಲಾಗಾಮು ಇಲ್ಲದ ಆಸೆಗಳೇ ಉಳಿತಾಯಕ್ಕೆ ತಡೆಯಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Mon, 8 June 26