AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸಂಬಳ ಪಡೆಯುತ್ತಿದ್ದ ಕೈಗಳಿಗಿಂತ ಖಾಲಿ ಕೈಗಳು ಕಲಿಸಿದ್ದೇ ಹೆಚ್ಚು; ಜಾಬ್ ರಿಸೈನ್ ಮಾಡಿದ ವ್ಯಕ್ತಿ ಹೀಗೆಂದಿದ್ದೇಕೆ?

ಕೈಯಲ್ಲಿ ಕೆಲಸ ಹಾಗೂ ದುಡ್ಡು ಇದ್ದರೇನೇ ಮರ್ಯಾದೆ. ಆದರೆ ಇಲ್ಲೊಬ್ಬ ವ್ಯಕ್ತಿ ಸಂಬಳವಿಲ್ಲದೆ 60 ದಿನಗಳನ್ನು ಕಳೆದಿದ್ದಾನೆ. ವ್ಯಕ್ತಿಯೊಬ್ಬ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿದ್ದು, ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮವನ್ನು ಎತ್ತಿ ತೋರಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸಂಬಳ ಪಡೆಯುತ್ತಿದ್ದ ಕೈಗಳಿಗಿಂತ ಖಾಲಿ ಕೈಗಳು ಕಲಿಸಿದ್ದೇ ಹೆಚ್ಚು; ಜಾಬ್ ರಿಸೈನ್ ಮಾಡಿದ ವ್ಯಕ್ತಿ ಹೀಗೆಂದಿದ್ದೇಕೆ?
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Jun 07, 2026 | 8:19 PM

Share

ದುಡ್ಡೇ ದೊಡ್ಡಪ್ಪ ಅನ್ನೋ ಮಾತಿದೆ. ಒಂದೇ ಒಂದು ರೂಪಾಯಿ ಇಲ್ಲದೇ ಹೋದ್ರು ಜನ ನಿಮ್ಮತ್ತ ತಿರುಗಿಯೂ ನೋಡಲ್ಲ. ಹೌದು, ಎಲ್ಲರೂ ದುಡಿಯೋದು ದುಡ್ಡಿಗಾಗಿ. ಹೀಗಿರುವಾಗ ವ್ಯಕ್ತಿಯೊಬ್ಬ ಸಂಬಳವಿಲ್ಲದೇ (salary) ಒಂದಲ್ಲ ಎರಡಲ್ಲ ಬರೋಬ್ಬರಿ 60 ದಿನಗಳನ್ನು ಕಳೆದಿದ್ದಾನೆ. ಇದೇ ವೇಳೆ ಕೆಲಸ ಹಾಗೂ ಆದಾಯವು ದೈನಂದಿನ ಜೀವನದ ಮೇಲೆ ಎಷ್ಟು ಆಳವಾಗಿ ಪ್ರಭಾವ ಬೀರುತ್ತದೆ ಎಂದು ಅರಿತುಕೊಂಡಿದ್ದಾನೆ. ವಿಡಿಯೋ ಹಂಚಿಕೊಂಡು ಸಂಬಳವಿಲ್ಲದೇ 60 ದಿನಗಳು ತಾನು ಕಲಿತ ಪಾಠಗಳನ್ನು ಬಗ್ಗೆ ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಬದುಕು ಇಂತಹ ಸಂದರ್ಭದಲ್ಲೇ ಅರ್ಥವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

@attentionslop ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಶೀರ್ಷಿಕೆಯಲ್ಲಿ 60 ದಿನಗಳು ಸಂಬಳವಿಲ್ಲದೇ ಕಲಿಸಿದ ಜೀವನ ಪಾಠಗಳೇನು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುಮಾರು ಎರಡು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ ನಂತರ ಮಾರ್ಚ್ ಅಂತ್ಯದಲ್ಲಿ ರಾಜೀನಾಮೆ ನೀಡಿದೆ. ನಾನು ಆ ನಿರ್ಧಾರವನ್ನು ತಿಂಗಳುಗಳಿಂದ ಮುಂದೂಡುತ್ತಿದ್ದೆ. ಆದರೆ ನಿಜವಾಗಿಯೂ ಏನೂ ಬದಲಾಗಿಲ್ಲ. ಸ್ಥಿರ ಸಂಬಳವು ದೈನಂದಿನ ಬದುಕನ್ನು ಕಷ್ಟಕರವಾದ ರೀತಿಯಲ್ಲಿ ರೂಪಿಸಲು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Karan (@attentionslop)

ಜಾಬ್‌ ರಿಸೈನ್‌ ಬಳಿಕ ಮನೆ ಬಾಡಿಗೆ ಹಾಗೂ ಖರ್ಚು ಮಾಡುವ ಅಭ್ಯಾಸಗಳಿಂದ ಹಿಡಿದು ವಾರಾಂತ್ಯದ ಯೋಜನೆಗಳು, ಆತ್ಮವಿಶ್ವಾಸ ಮತ್ತು ಭದ್ರತೆಯ ಪ್ರಜ್ಞೆಯವರೆಗೆ ಪ್ರಭಾವ ಬೀರುತ್ತದೆ. ತಮ್ಮ ಪೋಷಕರಿಂದ ಮತ್ತೆ ಹಣ ಕೇಳುವ ಬಗ್ಗೆ ತಪ್ಪಿತಸ್ಥರೆಂದು ಭಾವಿಸುವ, ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ನ್ನು ಹೆಚ್ಚಾಗಿ ಪರಿಶೀಲಿಸಲು ಪ್ರಾರಂಭಿಸುವ ಮತ್ತು ಸಣ್ಣ ಖರೀದಿಗಳನ್ನು ಮಾಡುವ ಮೊದಲು ಹಿಂಜರಿಯುವುದನ್ನು ಸೃಷ್ಟಿಸುತ್ತದೆ. ನಿಜವಾಗಿಯೂ ಸಂತೋಷವಾಗಿದ್ದೀರಾ ಎಂದು ಕೇಳಲು ನೀವು ವಿರಳವಾಗಿ ನಿಲ್ಲುತ್ತೀರಿ. ದಿನಚರಿಯು ದೊಡ್ಡ ಚಿತ್ರವನ್ನು ಮಸುಕುಗೊಳಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: 9 ಟು 5 ಲೈಫ್ ಬೇಡಪ್ಪಾ: ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್!

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನನ್ನದು ಅದೇ ಕಥೆ, ನಾಳೆ ನನ್ನ ಕೊನೆಯ ನೋಟಿಸ್ ಅವಧಿಯ ದಿನ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ ಎಲ್ಲಾ ಸನ್ನಿವೇಶಕ್ಕೂ ಹೊಂದಿಕೊಳ್ಳಬೇಕು, ಅದು ಅನಿವಾರ್ಯ ಎಂದಿದ್ದಾರೆ. ಮತ್ತೊಬ್ಬರು, ನಾನು ಕೂಡ 5 ವರ್ಷಗಳ ನಂತರ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ನಿಮ್ಮ ಕಥೆ ನನ್ನದಕ್ಕೆ ಹೊಂದಿಕೆಯಾಗುತ್ತದೆ ಮತ್ತು ಹೌದು, ನಿನ್ನೆ ನನಗೆ ಅನುಮೋದನೆ ಸಿಕ್ಕಿತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Sun, 7 June 26

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More