50,000 ಅಡಿ ಸೋನು ಸೂದ್ ಭಾವಚಿತ್ರ; ಬರ್ತ್​ ಡೇ ದಿನ ಅಭಿಮಾನಿಯಿಂದ ಭರ್ಜರಿ ಗಿಫ್ಟ್

50,000 ಅಡಿ ಸೋನು ಸೂದ್ ಭಾವಚಿತ್ರ; ಬರ್ತ್​ ಡೇ ದಿನ ಅಭಿಮಾನಿಯಿಂದ ಭರ್ಜರಿ ಗಿಫ್ಟ್
50,000 ಅಡಿ ಸೋನು ಸೂದ್ ಭಾವಚಿತ್ರ

Sonu Sood: ವಿಪುಲ್ ಮಿರಾಜ್ಕರ್ ಎಂಬ ಕಲಾವಿದ ಮೈದಾನದಲ್ಲಿ 50,000 ಚದರ ಅಡಿ ಭೂಮಿಯಲ್ಲಿ ನಟ ಸೋನು ಸೂದ್ ಅವರ ಭಾವ ಚಿತ್ರವನ್ನು ಚಿತ್ರಿಸುವ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

TV9kannada Web Team

| Edited By: shruti hegde

Aug 02, 2021 | 4:36 PM

ಬಾಲಿವುಡ್ ನಟ ಸೋನು ಸೂದ್ (Sonu Sood) ಅನೇಕ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ ಅಪಾರ ಅಭಿಮಾನ ಬಳಗವನ್ನು ಹೊಂದಿದ್ದಾರೆ. ಕಳೆದ ಒಂದು ವರ್ಷದ ಕೊವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಸಹಾಯದಿಂದ ಮುಂಬೈನಲ್ಲಿದ್ದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂತಿರುಗಲು ಸಹಾಯಕವಾಯಿತು. ಅವರ ಹುಟ್ಟು ಹಬ್ಬದ ವಿಶೇಷವಾಗಿ ಅಭಿಮಾನಿ 50,000 ಅಡಿಯ ಭಾವಚಿತ್ರ ತಯಾರಿಸಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ವಿಪುಲ್ ಮಿರಾಜ್ಕರ್ ಎಂಬ ಕಲಾವಿದ ಮೈದಾನದಲ್ಲಿ 50,000 ಚದರ ಅಡಿ ಭೂಮಿಯಲ್ಲಿ ನಟ ಸೋನು ಸೂದ್ ಅವರ ಭಾವ ಚಿತ್ರವನ್ನು ಚಿತ್ರಿಸುವ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಸೋನು ಸೂದ್ ಅವರ ಹುಟ್ಟು ಹಬ್ಬದ ಅಚ್ಚರಿಯ ಭಾವಚಿತ್ರ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ಕಲಾಕೃತಿಯನ್ನು ತಯಾರಿಸಲು ವಿಪುಲ್ ಭೂಮಿಯನ್ನು ಕೆತ್ತಿದರು. ಸಂಪೂರ್ಣವಾಗಿ ಸೋನು ಸೂದ್ ಅವರ ಭಾವಚಿತ್ರ ಮೂಡಿ ಬರುವಂತೆ ಚಿತ್ರಿಸಿದ್ದಾರೆ. ಡ್ರೋನ್ ಮೂಲಕ ಸಂಪೂರ್ಣ ಭಾವಚಿತ್ರವನ್ನು ನೋಡಬಹುದು.

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ವಿಡಿಯೋ ಇದೀಗ ವೈರಲ್ ಅಗಿದೆ. ಇನ್ಸ್ಟಾಗ್ರಾಂನಲ್ಲಿ 18,928 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜನಪ್ರಿಯತೆ ಪಡೆಯುತ್ತಿರುವ ಕಲಾಕೃತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನೆಟ್ಟಿಗರು ಕಲಾಕಾರನಿಗೆ ಶ್ಲಾಘಿಸಿದ್ದಾರೆ. ಕಲಾಕಾರನ ಪ್ರತಿಭೆಗೆ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಸೂಪರ್ ಆರ್ಟ್ ಅನ್ನುತ್ತಾ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಕಲಾವಿದ ನಟರನ್ನು ಭೇಟಿ ಮಾಡಿ ಕೇಕ್ ಕತ್ತರಿಸಿದ ವಿಡಿಯೋವನ್ನೂ ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Sonu Sood: ದೂಕುಡು ಸಿನಿಮಾದಲ್ಲಿ ಸೋನು ಸೂದ್​ಗೆ ಹೊಡೆದದ್ದಕ್ಕೆ ಸಿಟ್ಟಿನಿಂದ ಮನೆಯ ಟಿವಿ ಕುಟ್ಟಿ ಪುಡಿ ಮಾಡಿದ ಪೋರ

WTC Final: ವಿಲಿಯಮ್ಸನ್​ನನ್ನು ಪೆವಿಲಿಯನ್​ಗೆ ಕಳುಹಿಸಿ! ಸೋನು ಸೂದ್ ಬಳಿ ಮನವಿ ಮಾಡಿದ ಅಭಿಮಾನಿ.. ಸೋನು ಉತ್ತರ ಹೀಗಿತ್ತು

Follow us on

Related Stories

Most Read Stories

Click on your DTH Provider to Add TV9 Kannada