Viral: ಸ್ವೀಟ್ ಬಾಕ್ಸ್ ಕಳುಹಿಸಿಕೊಡಿ: ಮನೆ ಅಡ್ರೆಸ್ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ತಮಿಳುನಾಡಿನ ಮಧುರೈ ಮೂಲದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ವೀರಮಣಿ ದೀಪಾವಳಿ ಹಬ್ಬಕ್ಕೆ ಉಚಿತ ಸ್ವೀಟ್ ಬಾಕ್ಸ್ ನೀಡುವಂತೆ ಮನವಿ ಮಾಡಿದ್ದು, ಇದುವೇ ಅವರಿಗೆ ಮುಳುವಾಗಿದೆ. ಹೌದು, ತಮ್ಮ ಫೋನ್ ನಂಬರ್ ಮತ್ತು ಮನೆ ವಿಳಾಸವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅವರ ಮನೆಗೆ ವಿವಿಧ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ ಮೂಲಕ ಆರ್ಡರ್ ಮಾಡಿದ್ದಾರೆ. ಇದುವರೆಗೆ 500 ಕ್ಕೂ ಹೆಚ್ಚು ಆರ್ಡರ್ ಬಂದಿರುವುದಾಗಿ ವರದಿಯಾಗಿದೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Viral: ಸ್ವೀಟ್ ಬಾಕ್ಸ್ ಕಳುಹಿಸಿಕೊಡಿ: ಮನೆ ಅಡ್ರೆಸ್ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್
ಇನ್‌ಫ್ಲುಯೆನ್ಸರ್ ವೀರಮಣಿ
Image Credit source: Instagram

Updated on: Oct 13, 2026 | 11:33 AM

ಮುಖ್ಯಾಂಶಗಳು

  • ನೆಟ್ಟಿಗರಲ್ಲಿ ಸ್ವೀಟ್ ಬಾಕ್ಸ್ ಕೇಳಿ ಸಂಕಷ್ಟಕ್ಕೆ ಸಿಲುಕಿಕೊಂಡ ಇನ್‌ಫ್ಲುಯೆನ್ಸರ್ ವೀರಮಣಿ
  • ಮನೆ ಬಾಗಿಲಿಗೆ ಹರಿದು ಬಂತು 500 ಕ್ಕೂ ಹೆಚ್ಚು ದುಬಾರಿ ಬೆಲೆಯ ಆರ್ಡರ್‌ಗಳು
  • ಪರಿಸ್ಥಿತಿ ನಿಭಾಯಿಸಲಾಗದೇ ನೆಟ್ಟಿಗರಲ್ಲಿ ಮನವಿ ಮಾಡಿದ ಇನ್‌ಫ್ಲುಯೆನ್ಸರ್

ಮಧುರೈ, ಅಕ್ಟೋಬರ್ 13: ಇತ್ತೀಚೆಗಿನ ದಿನಗಳಲ್ಲಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಲೈಕ್ಸ್,  ವೀವ್ಸ್‌ಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿತಾರೆ. ಆದರೆ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ತಮಿಳುನಾಡಿನ (Tamil Nadu) ವೀರಮಣಿ ಎಂಬುವವರು ಫಾಲೋವರ್ಸ್ ಗಳ ಬಳಿಯೇ ಸ್ವೀಟ್ ಬಾಕ್ಸ್ ಕೇಳಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹೌದು, ತಮ್ಮ ಮನೆ ಅಡ್ರೆಸ್ ಹಂಚಿಕೊಳ್ಳುತ್ತಿದ್ದಂತೆ ಅವರ ಮನೆಗೆ ನೂರಾರು ವಸ್ತುಗಳ ಆರ್ಡರ್‌ಗಳು ಹರಿದುಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮನೆಗೆ ಹರಿದು ಬಂತು 500 ಕ್ಕೂ ಹೆಚ್ಚು ಆರ್ಡರ್‌ಗಳು

ವೀರಮಣಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮನೆ ವಿಳಾಸ ಹಾಗೂ ಫೋನ್ ನಂಬರ್ ನೀಡುತ್ತಿದ್ದಂತೆ ಆರಂಭದಲ್ಲಿ ಹಾಲು, ಟಿವಿ, ಫ್ರಿಡ್ಜ್ ಸೇರಿದಂತೆ ದುಬಾರಿ ಬೆಲೆಯ ವಸ್ತುಗಳು ಮನೆ ಬಾಗಿಲಿಗೆ ಬಂದಿವೆ. ಈ ದುಬಾರಿ ಬೆಲೆಯ ವಸ್ತುಗಳೊಂದಿಗೆ ಮನೆ ಮುಂದೆ ದೊಡ್ಡ ವಾಹನವೇ ಬಂದು ನಿಂತಿರುವ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಅದರ ಜತೆಗೆ ವೀರಮಣಿ ಅವರ ಹೆಸರಿನಲ್ಲಿ ಬರೋಬ್ಬರಿ 70 ಕೋಟಿ ರೂ ಮೌಲ್ಯದ ಟಿ-90ಎಸ್ ಮಿಲಿಟರಿ ಟ್ಯಾಂಕ್ ಹಾಗೂ ಪಿಎಸ್‌ಎಲ್‌ವಿ ರಾಕೆಟ್‌ ಆರ್ಡರ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ಸ್ಟಾಗ್ರಾಮ್ ವಿಡಿಯೋ ಇಲ್ಲಿದೆ

ಕಾಟ ತಡೆಯಲಾರದೇ ನೆಟ್ಟಿಗರಲ್ಲಿ ಮನವಿ ಮಾಡಿದ ಇನ್ಫ್ಲುಯೆನ್ಸರ್

ಇನ್ ಫ್ಲುಯೆನ್ಸರ್ ವೀರಮಣಿ ಅವರು ತಮ್ಮ ಖಾತೆಯಲ್ಲಿ ಸರಣಿ ವಿಡಿಯೋಗಳನ್ನು ಮಾಡಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿಳಿಯದೇ ನಾನು ಸ್ವೀಟ್ ಬಾಕ್ಸ್ ಕೇಳಿದ್ದೆ. ದಯವಿಟ್ಟು ಇದನ್ನೂ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಮನೆ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಏರ್‌ಹೋಸ್ಟೆಸ್ ತರಬೇತಿ ಬಿಟ್ಟು ಟ್ರಕ್ ಚಾಲಕಿಯಾದ ಹಿಮಾಚಲದ ಯುವತಿ: ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ ನೇಹಾ ಠಾಕೂರ್

ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು

ಇನ್ಫ್ಲುಯೆನ್ಸರ್ ವೀರಮಣಿಯವರ ಸರಣಿ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ದಯವಿಟ್ಟು ಈ ರೀತಿ ಮಾಡಿ ಹಿಂಸೆ ಕೊಡಬೇಡಿ ಎಂದರೆ, ಮತ್ತೊಬ್ಬರು, ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಈ ರೀತಿ ಮಾಡುವುದು ತಪ್ಪು ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ನೋಡಲು ವಿಚಿತ್ರ ಎನಿಸುತ್ತದೆ, ಆದರೆ ಆ ವ್ಯಕ್ತಿಯ ಸ್ಥಿತಿ ಯಾರಿಗೂ ಬೇಡ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 am, Tue, 13 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us