Taumata Hill: ಜಗತ್ತಿನ ಅತಿ ಉದ್ದದ ಹೆಸರಿನ ಸ್ಥಳವಿದು; ನ್ಯೂಜಿಲೆಂಡ್‌ನ ಈ ಸ್ಥಳದ ಹೆಸರಿನಲ್ಲಿದೆ 85 ಅಕ್ಷರಗಳು

ಜಗತ್ತಿನಲ್ಲಿ ಅತಿ ಉದ್ಯದ ಹೆಸರನ್ನು ಹೊಂದಿರುವ ಸ್ಥಳವಿದೆ ಅಂದ್ರೆ ನೀವು ನಂಬುವಿರಾ. ಇದೊಂದು ಬೆಟ್ಟವಾಗಿದ್ದು, ಇಂತಹ ವಿಶೇಷ ಸ್ಥಳವೊಂದು ನ್ಯೂಜಿಲೆಂಡ್‌ನಲ್ಲಿದೆ. ಇದರ ಹೆಸರು ಬರೋಬ್ಬರಿ 85 ಅಕ್ಷರಗಳನ್ನು ಹೊಂದಿದೆ. ಗಿನ್ನಿಸ್‌ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಇದು ವಿಶ್ವದ ಅತ್ಯಂತ ಉದ್ದವಾದ ಏಕಪದದ ಸ್ಥಳದ ಹೆಸರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಥಳೀಯರು ತಾಮಟಾ ಬೆಟ್ಟ ಎಂದು ಕರೆಯುತ್ತಾರೆ.

Taumata Hill: ಜಗತ್ತಿನ ಅತಿ ಉದ್ದದ ಹೆಸರಿನ ಸ್ಥಳವಿದು; ನ್ಯೂಜಿಲೆಂಡ್‌ನ ಈ ಸ್ಥಳದ ಹೆಸರಿನಲ್ಲಿದೆ 85 ಅಕ್ಷರಗಳು
ತಾಮಟಾ ಬೆಟ್ಟ
Image Credit source: Facebook

Updated on: Sep 21, 2026 | 5:16 PM

ಸಾಮಾನ್ಯವಾಗಿ ಅತಿ ಉದ್ದದ ನದಿ, ಸಿಹಿ ನೀರಿನ ಸರೋವರ, ಎತ್ತರದ ಬೆಟ್ಟ ಹೀಗೆ ವಿಶೇಷತೆಗಳ ಬಗ್ಗೆ ನೀವು ತಿಳಿದಿರುತ್ತೀರಿ. ಇದೀಗ ನ್ಯೂಜಿಲೆಂಡ್‌ನಲ್ಲಿರುವ ಬೆಟ್ಟವು ಅತಿ ಉದ್ದದ ಹೆಸರನ್ನು ಹೊಂದಿರುವ ಸ್ಥಳವೆಂದೇ ಖ್ಯಾತಿ ಪಡೆದಿದೆ. ನೀವು ಈ ಹೆಸರನ್ನು ಉಚ್ಚರಿಸಲು ಕಷ್ಟ ಪಡುತ್ತೀರಿ. ಹೌದು, ಗಿನ್ನಿಸ್‌ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಇದು ವಿಶ್ವದ ಅತ್ಯಂತ ಉದ್ದವಾದ ಹೆಸರನ್ನು ಹೊಂದಿರುವ ಸ್ಥಳವೇ ತಾಮಟಾ ಬೆಟ್ಟ (Taumata Hill). ಹಾಗಾದ್ರೆ ಈ ಸ್ಥಳದ ವಿಶೇಷತೆಯೇನು? ಈ ಕುರಿತಾದ ಮಾಹಿತಿ ಇಲ್ಲಿದೆ.

ಈ ವಿಶೇಷ ಸ್ಥಳವಿರುವುದು ಎಲ್ಲಿ?

ನ್ಯೂಜಿಲೆಂಡ್‌ನ ಉತ್ತರ ದ್ವೀಪದಲ್ಲಿರುವ ಒಂದು ಸಣ್ಣ ಬೆಟ್ಟವು ಅತಿ ಉದ್ದದ ಹೆಸರನ್ನು ಹೊಂದಿದೆ. ಪ್ರವಾಸಿಗರು ಇದನ್ನು ಸಂಕ್ಷಿಪ್ತವಾಗಿ ತಾಮಟಾ () ಎಂದು ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಇದು ಒಟ್ಟು 85 ಅಕ್ಷರಗಳನ್ನು ಹೊಂದಿರುವುದು ವಿಶೇಷ.

ಇಲ್ಲಿದೆ ಈ ವಿಶೇಷ ಸ್ಥಳದ ವಿಡಿಯೋ

ನ್ಯೂಜಿಲೆಂಡ್‌ನಲ್ಲಿರುವ ಬೆಟ್ಟದ ಪೂರ್ಣ ಹೆಸರೇನು?

ಈ ಬೆಟ್ಟವು ನ್ಯೂಜಿಲೆಂಡ್‌ನ ಸೆಂಟ್ರಲ್ ಹಾಕ್ಸ್ ಬೇ ಪ್ರಾಂತ್ಯದ ಪೋರಂಗಹೌ ಗ್ರಾಮದ ಸಮೀಪವಿದೆ. ಜಗತ್ತಿನ ಅತಿ ಉದ್ದದ ಹೆಸರಿನ ಈ ಬೆಟ್ಟದ ಪೂರ್ಣ ಹೆಸರನ್ನು ಹೀಗೆ ಬರೆಯಲಾಗಿದೆ. ‘ತಾಮಟಾವಕಟಂಗಿಹಂಗಾಕೋವಾವುವೋಟಮಾ ಟೇಟಿರಿಪುಕಾಕಾಪಿಕಿಮೌಂಗಾಹೊರೊನುಕುಪೊಕೈವೆ ನುವಾಕಿಟನಾಟಹು’ (Taumatawhakatangihangakoauauotamateat uripukakapikimaungahoronukupokaiwhenuak itanatahu).

ಇದನ್ನೂ ಓದಿ: ಮಾಜಿ ಪ್ರೇಮಿಗಳ ಭೇಟಿಗಾಗಿಯೇ ಇದೆ ಲವ್ ಮಾರ್ಕೆಟ್, ಏನಿದರ ವಿಶೇಷತೆ?

ಈ ಸ್ಥಳದ ಹೆಸರಿನ ಅರ್ಥವೇನು?

ನ್ಯೂಜಿಲೆಂಡ್‌ನ ಮೂಲ ನಿವಾಸಿಗಳಾದ ಮಾವುರಿ ಭಾಷೆಯ ಹೆಸರು ಇದಾಗಿದೆ. ಇದು ದೊಡ್ಡ ಮೊಣಕಾಲುಗಳನ್ನು ಹೊಂದಿದ್ದ, ಪರ್ವತಗಳನ್ನು ಹತ್ತಿದ, ನುಂಗಿದ ಮತ್ತು ಭೂಮಿಯ ಸುತ್ತಲೂ ಪ್ರಯಾಣಿಸಿದ ತಮಾಟಿಯಾ ಎಂಬ ವ್ಯಕ್ತಿಯು ತನ್ನ ಪ್ರೀತಿಪಾತ್ರರಿಗಾಗಿ ಕೊಳಲು ನುಡಿಸಿದ ಸ್ಥಳ ಎನ್ನುವ ಅರ್ಥವನ್ನು ನೀಡುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us