ಮಾಜಿ ಪ್ರೇಮಿಗಳ ಭೇಟಿಗಾಗಿಯೇ ಇದೆ ಲವ್ ಮಾರ್ಕೆಟ್, ಏನಿದರ ವಿಶೇಷತೆ?
ಮಾಜಿ ಪ್ರೇಮಿಗಳು ಭೇಟಿಯಾಗುವುದು, ಮಾತನಾಡುವುದು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಂತೆ. ಆದರೆ ಮಾಜಿ ಪ್ರೇಮಿಗಳು ಭೇಟಿಯಾಗಲೆಂದೇ ಲವ್ ಮಾರ್ಕೆಟ್ ಇದೆ. ವಿಯೆಟ್ನಾಂನ ಹಾವಾ ವೈ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಜಿ ಪ್ರೇಮಿಗಳು ಭೇಟಿಯಾಗುವ ವಿಶಿಷ್ಟ ಸಂಪ್ರದಾಯವಿದೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಮುಖ್ಯಾಂಶಗಳು
- ಮಾಜಿ ಪ್ರೇಮಿಗಳ ಭೇಟಿಗಾಗಿಯೇ ಇದೆ ಖೌ ವೈ ಲವ್ ಮಾರ್ಕೆಟ್
- ಅನೇಕರು ಇಲ್ಲಿಗೆ ಬಂದು ಮಾಜಿ ಪ್ರೇಮಿಗಳನ್ನು ಭೇಟಿಯಾಗಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕ್ತಾರೆ
- ಗಂಡ, ಹೆಂಡತಿ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆ ಮೇರೆಗೆ ಇಲ್ಲಿಗೆ ಬರುವುದು ವಿಶೇಷ
ಪ್ರೀತಿ ಪ್ರೇಮ ಪ್ರಾರಂಭದಲ್ಲಿ ಚೆನ್ನಾಗಿರುತ್ತೆ. ಆದ್ರೆ ಈ ಸಂಬಂಧ ಮುರಿದು ಬಿದ್ದ ಮೇಲೆ ಕೆಲವರು ದ್ವೇಷ ಕಟ್ಟಿಕೊಳ್ಳುತ್ತಾರೆ. ಇನ್ನು ಕೆಲವರು ಮಾಜಿ ಪ್ರೇಮಿಯ ನೆನಪಿನಲ್ಲಿ ತಮ್ಮ ಜೀವನವನ್ನು ಕಳೆಯುತ್ತಾರೆ. ಮತ್ತೆಂದು ಕೈಕೊಟ್ಟ ಪ್ರೇಮಿಯನ್ನು ಭೇಟಿಯಾಗುವ ಪ್ರಯತ್ನ ಮಾಡುವುದು ಕಡಿಮೆಯೇ. ಆದರೆ ವಿಯೆಟ್ನಾದಲ್ಲಿ (Vietnam’s) ಮಾಜಿ ಪ್ರೇಮಿಗಳಿಗೆಂದೇ ವಿಶೇಷ ಲವ್ ಮಾರ್ಕೆಟ್ ಇದೆ. ಇದರ ಹೆಸರೇ ಖೌ ವೈ ಲವ್ ಮಾರ್ಕೆಟ್ (Khau Vai Love Market) ವರ್ಷಕ್ಕೊಮ್ಮೆ ಹಾವಾ ವೈ ಪ್ರದೇಶದಲ್ಲಿರುವ ಖೌ ವೈ ಲವ್ ಮಾರ್ಕೆಟ್‌ಗೆ ಬಂದು ತಮ್ಮ ಮಾಜಿ ಪ್ರೇಮಿಗಳನ್ನು ಭೇಟಿಯಾಗಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.
ಖೌ ವೈ ಲವ್ ಮಾರ್ಕೆಟ್ ವಿಶೇಷತೆ ಏನು?
ಮಾಜಿ ಪ್ರೇಮಿಗಳು ಈ ಮಾರುಕಟ್ಟೆಯಲ್ಲಿ ವರ್ಷಕ್ಕೊಮ್ಮೆ ಭೇಟಿಯಾಗುತ್ತಾರೆ. ಈ ಮಾರುಕಟ್ಟೆ ವಿಶೇಷತೆ ಎಂದರೆ ಗಂಡ, ಹೆಂಡತಿ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆ ಮೇರೆಗೆ ಇಲ್ಲಿಗೆ ಬರುತ್ತಾರೆ. ಮಾಜಿ ಪ್ರೇಮಿಯ ಜತೆಗೆ ಕಳೆದ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಹಾಗೂ ಒಬ್ಬರನ್ನೊಬ್ಬರ ಯೋಗಕ್ಷೇಮ ವಿಚಾರಿಸಲು ಇಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ಆದರೆ ಈ ವಿಶಿಷ್ಟ ಆಚರಣೆಯು ಚಂದ್ರ ಮಾಸದ 27ನೇ ದಿನದಂದು ಅಂದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತದೆ. ಮಾಜಿ ಪ್ರೇಮಿಗಳ ಭೇಟಿಯ ಜತೆಗೆ ಇಲ್ಲಿ ಜಾನಪದ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಲವ್ ಮಾರ್ಕೆಟ್ ಹುಟ್ಟಿಕೊಂಡದ್ದರ ಹಿಂದಿದೆ ಈ ಕಾರಣ
ಸ್ಥಳೀಯ ಕಥೆಗಳ ಪ್ರಕಾರ ನುಂಗ್ ಸಮುದಾಯದ ಯುವಕ ಹಾಗೂ ಗಿಯಾಯ್ ಸಮುದಾಯದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರದ್ದು ಬೇರೆ ಬೇರೆ ಜನಾಂಗ ಹಾಗೂ ಸಂಪ್ರದಾಯವಾಗಿತ್ತು. ಹೀಗಾಗಿ ಎರಡು ಕುಟುಂಬಗಳು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿತ್ತು. ತಮ್ಮ ಪ್ರೀತಿಯಿಂದ ಎರಡು ಕುಟುಂಬಗಳ ನಡುವೆ ದ್ವೇಷ ಹುಟ್ಟಿಕೊಳ್ಳಬಾರದು, ಜಗಳ ಉಂಟಾಗಬಾರದೆನ್ನುವ ಕಾರಣಕ್ಕೆ ಇಬ್ಬರೂ ದೂರಾಗಲು ನಿರ್ಧಾರ ಮಾಡಿದರು.
ಇದನ್ನೂ ಓದಿ: ಈ ಯುವಕನನ್ನು ವರಿಸಲು ಅಂದ ಚಂದ ಇದ್ರೆ ಸಾಲಲ್ಲ, ಹುಡ್ಗಿಯಲ್ಲಿ ಈ ಗುಣಗಳಿರಲೇ ಬೇಕು
ಈ ಸಂದರ್ಭ ಇಬ್ಬರೂ ಖೌ ವೈನಲ್ಲಿ ನಿರ್ದಿಷ್ಟ ದಿನದಂದು ಭೇಟಿಯಾಗೋಣ ಎಂದು ನಿರ್ಧರಿಸಿದರು. ಈ ಭೇಟಿ ಮುಂದೆ ಸಂಪ್ರದಾಯವಾಗಿ ಬದಲಾಯಿತು. ಅಂದಿನಿಂದ ಖೌ ವೈ ಲವ್ ಮಾರ್ಕೆಟ್‌ನಲ್ಲಿ ವರ್ಷಕ್ಕೊಮ್ಮೆ ಮಾಜಿ ಪ್ರೇಮಿಗಳು ಪರಸ್ಪರ ಭೇಟಿಯಾಗುವುದು ಖಾಯಂ ಆಯಿತು. ಇವತ್ತಿಗೂ ಕೂಡ ಅನೇಕರು ತಮ್ಮ ಮಾಜಿ ಪ್ರೇಮಿಯನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




