Viral: ಬಲೆಗೆ ಬಿದ್ದ ಬೃಹತ್ ಗಾತ್ರದ ಕಾಟ್ಲಾ ಮೀನು; ಬಂಪರ್ ಹೊಡೆದ ಮೀನುಗಾರ
ಸಮುದ್ರದಲ್ಲಿ ಮೀನುಗಾರಿಕೆಯ ಸಮಯದಲ್ಲಿ ದೈತ್ಯಾಕಾರದ ಮೀನುಗಳು ಬಲೆಗೆ ಬೀಳುವುದು ಸಾಮಾನ್ಯ. ನದಿ ನೀರಿನಲ್ಲಿ ಬೃಹದಾಕಾರದ ಮೀನುಗಳು ಮೀನುಗಳು ಅಷ್ಟಾಗಿ ಕಾಣಸಿಗುವುದಿಲ್ಲ. ಆದ್ರೆ ಇಲ್ಲೊಬ್ಬ ಮೀನುಗಾರ ಬೀಸಿದ ಬಲೆಗೆ ಬರೋಬ್ಬರಿ 32.5 ಕೆಜಿ ತೂಕದ ಕಾಟ್ಲಾ ಮೀನು ಬಿದ್ದಿದ್ದು, ಬಲೆಗೆ ಬಿದ್ದ ದೈತ್ಯ ಮೀನನ್ನು ಕಂಡು ಮೀನುಗಾರ ಫುಲ್ ಖುಷ್ ಆಗಿದ್ದಾರೆ. ಬಲೆಗೆ ಬಿದ್ದ ದೈತ್ಯ ಕಾಟ್ಲಾ ಮೀನಿನ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತೆಲಂಗಾಣ, ಏ. 21: ಜೀವನ ಸಾಗಿಸಲು ಮೀನು ಹಿಡಿಯುವುದನ್ನೇ (Fishing) ಕಾಯಕ ಮಾಡಿಕೊಂಡವರು ಹಲವರಿದ್ದಾರೆ. ಕೆಲವರು ಆಳ ಸಮುದ್ರದಲ್ಲಿ (deep ocean) ಮೀನುಗಾರಿಕೆಯಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ನದಿ ನೀರಿನಲ್ಲಿ (river) ಮೀನು ಹಿಡಿಯುವವರಿದ್ದಾರೆ. ಆದ್ರೆ ಸಮುದ್ರದಲ್ಲಿ ಸಿಕ್ಕ ಹಾಗೆ ನದಿಯಲ್ಲಿ ಬೃಹತ್ ಗಾತ್ರದ ಮೀನು (huge fish) ಸಿಗುವುದು ಬಲು ಅಪರೂಪ. ನದಿಯಲ್ಲಿ ಯಾವಾಗ್ಲೂ ಸಣ್ಣ ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ. ಆದ್ರೆ ತೆಲಂಗಾಣದ (Telangana) ಮೀನುಗಾರರೊಬ್ಬರಿಗೆ (fisherman) ನದಿ ನೀರಿನಲ್ಲಿ ಬರೋಬ್ಬರಿ 32.5 ಕೆ.ಜಿ ತೂಕದ ಕಾಟ್ಲಾ (Catla) ಮೀನು ಸಿಕ್ಕಿದೆ. ಮೀನುಗಾರ ನರೇಶ್ (Naresh) ಬೀಸಿದ ಬಲೆಗೆ ದೈತ್ಯಾಕಾರದ ಮೀನು ಬಿದ್ದಿದ್ದು, ಬೃಹದಾಕಾರದ ಮತ್ಸ್ಯ ಕಂಡು ಮೀನುಗಾರ ಫುಲ್ ಖುಷಿಯಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿಯ ಮೀನುಗಾರ ನರೇಶ್ ಎಂದಿನಂತೆ ಮಿಡ್ ಮಾನೇರು ಡ್ಯಾಮ್ ಬಳಿ ಮೀನುಗಾರಿಕೆಗೆ ತೆರಳಿದ್ದರು. ಯಾವಾಗಲೂ ಬೀಳುವ ಹಾಗೆ ಸಣ್ಣಸಣ್ಣ ಮೀನುಗಳೇ ಬೀಳುತ್ತವೆ ಎಂದು ಅವರು ಬೀಸಿದ ಬಲೆಯನ್ನು ನದಿ ನೀರಿನಿಂದ ಮೇಲಕ್ಕೆ ಎತ್ತಿದ್ದರು. ಎಷ್ಟೇ ಎತ್ತಿದರೂ ಬಲೆ ಮೇಲಕ್ಕೆ ಬರಲೇ ಇಲ್ಲ. ಆ ಸಂದರ್ಭದಲ್ಲಿ ನರೇಶ್ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಮೆಲ್ಲಗೆ ಬಲೆಯನ್ನು ಮೇಲಕ್ಕೆ ಎತ್ತಿದ್ದು, ಆ ಬಲೆಗೆ ಬಿದ್ದ ದೈತ್ಯಾಕಾರದ ಮೀನನ್ನು ಕಂಡು ನರೇಶ್ ಖುಷಿಯಾಗಿದ್ದಾರೆ. ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ ಎಂದುಕೊಂಡಿದ್ದ ನರೇಶ್ ಬಲೆಗೆ ಬಿದ್ದ ಬೃಹತ್ ಗಾತ್ರದ ಕಾಟ್ಲಾ ಮೀನನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆಯಾಗಿ ನೀಡಿದ ಗೆಳೆಯರ ಬಳಗ, ವಿಡಿಯೋ ವೈರಲ್
ಬಲೆಗೆ ಬಿದ್ದ ಕಾಟ್ಲಾ ಮೀನು ಬರೋಬ್ಬರಿ 32.5 ಕೆಜಿ ತೂಕವನ್ನು ಹೊಂದಿದ್ದು, ಸ್ಥಳೀಯರು ಈ ಬೃಹದಾಕಾರದ ಮೀನನ್ನು ಕಣ್ತುಂಬಿಕೊಳ್ಳಲು ನಾ ಮುಂದು, ತಾ ಮುಂದು ಅಂತ ಧಾವಿಸಿದ್ದಾರೆ. ಈ ಮೀನನ್ನು ಕಂಡು ಸಮುದ್ರ ಪ್ರದೇಶದಲ್ಲಿ ಮಾತ್ರ ಇಂತಹ ದೈತ್ಯ ಮೀನುಗಳು ಕಾಣಿಸುತ್ತವೆ. ಆದರೆ ಮಿಡ್ ಮನೇರು ಡ್ಯಾಮ್ ಬಳಿ ಇಷ್ಟೊಂದು ದೊಡ್ಡ ಮೀನು ಇಲ್ಲಿ ತನಕ ಕಂಡು ಬಂದೇ ಇಲ್ಲ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಜನ ಈ ಮೀನಿನ ಫೋಟೋವನ್ನು ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Mon, 21 April 25