AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕಾಣೆಯಾದ ಸಾಕು ನಾಯಿ ಹುಡುಕಿಕೊಟ್ಟವರಿಗೆ 10,000 ರೂ ನಗದು ಬಹುಮಾನ ಘೋಷಿಸಿದ ಮಾಲೀಕ

ಕೆಲವರಿಗೆ ಶ್ವಾನ ಅಂದ್ರೆ ಜೀವಕ್ಕಿಂತ ಹೆಚ್ಚು. ಶ್ವಾನಕ್ಕೆ ಏನಾದ್ರೂ ತೊಂದರೆಯಾದರೆ ಸಹಿಸಿಕೊಳ್ಳೋದಕ್ಕೆ ಆಗಲ್ಲ. ಹೀಗಿರುವಾಗ ನಾಗರಾಜು ಎಂಬುವವರ ಮನೆಯ ಮುದ್ದಿನ ಶ್ವಾನವೊಂದು ಕಾಣೆಯಾಗಿದೆ. ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಮಾಲೀಕ ಕಳೆದುಹೋದ ತಮ್ಮ ನಾಯಿಯ ಬಗ್ಗೆ ಸುಳಿವು ನೀಡಿದವರಿಗೆ ಮಾಲೀಕರು 10,000 ರೂ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇದೀಗ ಇದೇ ವಿಚಾರ ಚರ್ಚೆಗೆ ಕಾರಣವಾಗಿದೆ.

Viral: ಕಾಣೆಯಾದ ಸಾಕು ನಾಯಿ ಹುಡುಕಿಕೊಟ್ಟವರಿಗೆ 10,000 ರೂ ನಗದು ಬಹುಮಾನ ಘೋಷಿಸಿದ ಮಾಲೀಕ
ಸಾಕು ನಾಯಿImage Credit source: Tv9 Telugu
ಸಾಯಿನಂದಾ
|

Updated on:Jul 22, 2026 | 6:41 PM

Share

ಮುಖ್ಯಾಂಶಗಳು

  • ಸಾಕು ನಾಯಿ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ
  • ಪ್ರೀತಿಯ ಶ್ವಾನವನ್ನು ಹುಡುಕಿ ಕೊಟ್ಟವರಿಗೆ 10,000 ರೂ. ನಗದು ಬಹುಮಾನ ಘೋಷಿಸಿದ ಮಾಲೀಕ
  • ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಈ ಘಟನೆ ನಡೆದಿದೆ.

ತೆಲಂಗಾಣ, ಜುಲೈ 22: ನೀವು ಹಣ, ಚಿನ್ನಾಭರಣ, ವಾಹನ, ಬೆಳೆ ಬಾಳುವ ವಸ್ತುಗಳು ಕಳೆದು ಹೋದರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವುದು ಸಾಮಾನ್ಯ.  ಆದರೆ, ನಾಗರಾಜು ಎಂಬ ವ್ಯಕ್ತಿ ಸಾಕು ನಾಯಿ (pet dog) ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಪ್ರೀತಿಯ ಶ್ವಾನವನ್ನು ಹುಡುಕಿ ಕೊಟ್ಟವರಿಗೆ 10,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ (Nalgonda district in Telangana) ಮಿರಿಯಾಲಗುಡದಲ್ಲಿ ಈ ಘಟನೆ ನಡೆದಿದೆ.

ಇದೇ ತಿಂಗಳ ಜುಲೈ 18 ರಂದು ಅವರ ಸಾಕು ನಾಯಿ ಕಾಣೆಯಾಗಿದೆ. ಕುಟುಂಬದ ಸದಸ್ಯರೆಲ್ಲರೂ ಶ್ವಾನವನ್ನು ಹುಡುಕಿದರೂ ಯಾವುದೇ ಸುಳಿವು ಸಿಗಲೇ ಇಲ್ಲ. ಹೀಗಾಗಿ ಅವರು ವಾಸಿಸುವ ಕಾಲೋನಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಚರ್ಚ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಅಪರಿಚಿತ ವ್ಯಕ್ತಿಗಳು ಸಾಕು ನಾಯಿಯನ್ನು ತೆಗೆದುಕೊಂಡು ಹೋಗಿರುವುದನ್ನು ಗಮನಿಸಿದ್ದಾರೆ. ಇದರಿಂದ ಚಿಂತಿತರಾದ ಮಾಲೀಕ ನಾಗರಾಜು ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ

ಈ ದೂರನ್ನು ಸಹ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಮಾಲೀಕ ತನ್ನ ಶ್ವಾನವನ್ನು ಹುಡುಕಿ ಕೊಟ್ಟವರಿಗೆ ಬಹುಮಾನ 10 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Wed, 22 July 26

Follow Us