AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೆದುರಲ್ಲೇ ಮಗುವಿಗೆ ಜನ್ಮ ನೀಡುವ ಬೊಂಬೆ: ‘ಝುರು’ ಕಂಪನಿಯ ವಿಚಿತ್ರ ಆಟಿಕೆ ವೀಡಿಯೋ ವೈರಲ್

ಅಮೆರಿಕದ 'ಝುರು' ಕಂಪನಿಯ 'ಮೈ ಮಿನಿ ಬೇಬಿ ಮಾಮ್ ಅಂಡ್ ಬೇಬಿ ಸರ್ಪ್ರೈಸ್' ಬೊಂಬೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಗುವಿಗೆ 'ಜನ್ಮ ನೀಡುವ' ವಿಚಿತ್ರ ಕಾರ್ಯವೈಖರಿಯ ಈ ಬೊಂಬೆ, ವಿಶೇಷವಾಗಿ ಮಕ್ಕಳಿಗಾಗಿ ಸೂಕ್ತವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದರ ಅನ್‌ಬಾಕ್ಸಿಂಗ್ ವೀಡಿಯೋ ವೈರಲ್ ಆಗಿದ್ದು, ಪೋಷಕರು ಮತ್ತು ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಇದು ಗರ್ಭಧಾರಣೆ ಹಾಗೂ ಹೆರಿಗೆಯ ಪ್ರಕ್ರಿಯೆಯ ಕುರಿತು ತಪ್ಪು ಸಂದೇಶ ನೀಡುತ್ತದೆ ಎಂಬ ಅಭಿಪ್ರಾಯವಿದೆ.

ಕಣ್ಣೆದುರಲ್ಲೇ ಮಗುವಿಗೆ ಜನ್ಮ ನೀಡುವ ಬೊಂಬೆ: 'ಝುರು' ಕಂಪನಿಯ ವಿಚಿತ್ರ ಆಟಿಕೆ ವೀಡಿಯೋ ವೈರಲ್
ಝುರು ಬೊಂಬೆ
ಅಕ್ಷಯ್​ ಪಲ್ಲಮಜಲು​​
|

Updated on: Sep 23, 2026 | 10:38 AM

Share

ಅಮೆರಿಕ ಮೂಲದ ಪ್ರಸಿದ್ಧ ಬೊಂಬೆ ತಯಾರಿಕಾ ಸಂಸ್ಥೆಯಾದ ‘ಝುರು’ (Zuru) ವಿನ್ಯಾಸಗೊಳಿಸಿರುವ ನೂತನ ಬೊಂಬೆ ಸೆಟ್‌ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯ ಬೊಂಬೆಗಳಂತೆ ಕೇವಲ ಮುದ್ದಾಗಿ ಕಾಣಿಸುವುದಷ್ಟೇ ಅಲ್ಲದೇ, ಕಣ್ಣೆದುರಲ್ಲೇ ‘ಮಗುವಿಗೆ ಜನ್ಮ ನೀಡುವ’ (Giving Birth) ವಿಚಿತ್ರ ಕಾರ್ಯವೈಖರಿಯನ್ನು ಈ ಬೊಂಬೆ ಹೊಂದಿದ್ದು, ವೀಡಿಯೋ ನೋಡಿದ ನೆಟ್ಟಿಗರು ಅಚ್ಚರಿಯ ಜತೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನ ‘Xoxo Toyz’ ಎಂಬ ಖಾತೆಯಲ್ಲಿ ಈ ‘ಝುರು ಮೈ ಮಿನಿ ಬೇಬಿ ಮಾಮ್ ಅಂಡ್ ಬೇಬಿ ಸರ್ಪ್ರೈಸ್’ ಬೊಂಬೆಯ ಅನ್‌ಬಾಕ್ಸಿಂಗ್ ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಏನಿದು ‘ಹೆರಿಗೆ ಮಾಡಿಸುವ’ ಬೊಂಬೆಯ ವಿಚಿತ್ರ ವಿನ್ಯಾಸ?:

ವೀಡಿಯೋದಲ್ಲಿ ತೋರಿಸಿರುವಂತೆ, ಗರ್ಭಿಣಿಯಂತೆ ಕಾಣುವ ಈ ಬೊಂಬೆಯ ಹೊಟ್ಟೆ ದೊಡ್ಡದಾಗಿ ದುಂಡಗಿದೆ. ವೀಡಿಯೋ ಮುಂದುವರಿದಂತೆ, ಆ ಬೊಂಬೆಯ ಹೊಟ್ಟೆಯ ಭಾಗದಿಂದ ಪುಟ್ಟ ಮಗುವಿನ ಬೊಂಬೆಯನ್ನು ಹೊರಗೆ ತೆಗೆಯಲಾಗುತ್ತದೆ. ಹೊಟ್ಟೆಯ ಭಾಗವನ್ನು ಪ್ರತ್ಯೇಕಿಸಿ (Detachable) ಮಗುವನ್ನು ಹೊರತೆಗೆಯುವ ರೀತಿಯನ್ನು ನೋಡಿದರೆ, ಬೊಂಬೆಯೇ ನಿಜವಾಗಿ ಮಗುವಿಗೆ ಜನ್ಮ ನೀಡುತ್ತಿರುವಂತೆ ಅಥವಾ ‘ಸಿ-ಸೆಕ್ಷನ್’ ಹೆರಿಗೆ ಆಗುತ್ತಿರುವಂತೆ ಭಾಸವಾಗುತ್ತದೆ.

ಮಗುವನ್ನು ಹೊಟ್ಟೆಯಿಂದ ಹೊರತೆಗೆದು, ಬಟ್ಟೆ ತೊಡಿಸಿ ತಾಯಿಯ ಮಡಿಲಿಗೆ ನೀಡುವ ದೃಶ್ಯಗಳು ವೀಡಿಯೋದಲ್ಲಿದ್ದು, ಬೊಂಬೆ ತಯಾರಕರು ಗರ್ಭಧಾರಣೆ ಹಾಗೂ ಹೆರಿಗೆಯ ಪ್ರಕ್ರಿಯೆಯನ್ನು ಆಟದ ರೂಪದಲ್ಲಿ ತರಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಂತರ್ಜಾಲದಲ್ಲಿ ಭಾರಿ ವಾಕ್ಸಮರ ಹಾಗೂ ಚರ್ಚೆಗಳು ಶುರುವಾಗಿವೆ. ಸಣ್ಣ ವಯಸ್ಸಿನ ಮಕ್ಕಳಿಗೆ ಇಂತಹ ಬೊಂಬೆಗಳು ನೀಡಲು ಸೂಕ್ತವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

View this post on Instagram

A post shared by Toy Unboxing (@xoxo.toyz)

“ಇಂತಹ ಬೊಂಬೆಗಳು ಸಣ್ಣ ಮಕ್ಕಳಿಗೆ ಖಂಡಿತ ಸೂಕ್ತವಲ್ಲ, ಇದು ಅತ್ಯಂತ ವಿಚಿತ್ರ ಹಾಗೂ ಅನಗತ್ಯ ಬೊಂಬೆ” ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. “ಯಾವುದೇ ಅನುಭವವಿಲ್ಲದ ವ್ಯಕ್ತಿಯೊಬ್ಬ ಹೆರಿಗೆ ಪ್ರಕ್ರಿಯೆಯನ್ನು ಯೋಚಿಸಿ ಈ ಬೊಂಬೆ ತಯಾರಿಸಿದಂತಿದೆ, ನೀವು ನೇರವಾಗಿ ಸಿ-ಸೆಕ್ಷನ್ ಹೆರಿಗೆಯನ್ನೇ ಮಾಡಿಸಿಬಿಟ್ಟಿರಿ!” ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾತ್ರಿ ವೇಳೆ ವಾಹನ ಚಾಲನೆ ಮಾಡುತ್ತಿದ್ದೀರಾ?: ಲೈಟ್ ಬಳಕೆಯ ಈ ಸಣ್ಣ ತಪ್ಪು ಜೀವಕ್ಕೆ ತರಬಹುದು ಕಂಟಕ

“ಹೀಗೂ ಒಂದು ಬೊಂಬೆ ಇರಲು ಸಾಧ್ಯವೇ? ಇದನ್ನು ನೋಡಿದರೆ ಭಯವಾಗುತ್ತದೆ” ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ. ಆಟಿಕೆ ಪೆಟ್ಟಿಗೆಯ ಮೇಲಿರುವ ‘ಸರ್ಪ್ರೈಸ್’ ಎಂಬ ಪದ, ಬಾಕ್ಸ್ ಓಪನ್ ಮಾಡುವ ಮಕ್ಕಳಿಗಿಂತ ವೀಡಿಯೋ ನೋಡಿದ ಪೋಷಕರು ಹಾಗೂ ಹಿರಿಯರಿಗೇ ಹೆಚ್ಚು ಆಘಾತ ತಂದಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More