AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಇಂಚಿನ ಬಾಲದೊಂದಿಗೆ ಹುಟ್ಟಿದ ಹೆಣ್ಣುಮಗು

Baby girl born with a tail : ಎರಡು ತಿಂಗಳ ಹಿಂದೆ ಎರಡು ಇಂಚಿನ ಬಾಲದೊಂದಿಗೆ ಈ ಹೆಣ್ಣುಮಗು ಹುಟ್ಟಿದಾಗ ವೈದ್ಯರು, ಪೋಷಕರು ಆಘಾತಕ್ಕೆ ಒಳಗಾಗಿದ್ದದರು. ಇದೀಗ ಶಸ್ತ್ರಚಿಕಿತ್ಸೆಯ ಮೂಲಕ ಬಾಲವನ್ನು ತೆಗೆಯಲಾಗಿದೆ.

ಎರಡು ಇಂಚಿನ ಬಾಲದೊಂದಿಗೆ ಹುಟ್ಟಿದ ಹೆಣ್ಣುಮಗು
ಬಾಲದೊಂದಿಗೆ ಹುಟ್ಟಿದ ಹೆಣ್ಣುಮಗು
TV9 Web
| Updated By: ಶ್ರೀದೇವಿ ಕಳಸದ|

Updated on:Nov 28, 2022 | 10:30 AM

Share

Viral : ಹೆಣ್ಣೋ ಗಂಡೋ ಒಟ್ಟಿನಲ್ಲಿ ಆರಾಮಾದ ಮಗು ಜನಿಸಿದರೆ ಅದೇ ದೊಡ್ಡ ಸಮಾಧಾನ ಈವತ್ತು. ಸದ್ಯದ ಜೀವನಶೈಲಿಯಲ್ಲಿ ಮಗು ಸೂಸೂತ್ರವಾಗಿ ಹೊರಬಂದು ತಾಯಿಮಗು ಆರೋಗ್ಯವಾಗಿದ್ದರೆ ಸಾಕು ಎಂಬಂಥ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಹುಟ್ಟಿದ ಮಗುವಿಗೆ ಸಣ್ಣ ಏರುಪೇರಾಗಿದ್ದರೆ ಆ ಸಂಕಟ ಹೇಳತೀರದು. ಏನೇ ಆದರೂ ವೈದ್ಯಕೀಯ ಜಗತ್ತು ಅದಕ್ಕೊಂದು ಪರಿಹಾರ ಕೊಟ್ಟೇ ಕೊಡುತ್ತದೆ ಎನ್ನುವುದು ದೊಡ್ಡ ಭರವಸೆ.

ಮೆಕ್ಸಿಕೋದ ನ್ಯೂವೋ ಲಿಯೋನ್​ ಆಸ್ಪತ್ರೆಯಲ್ಲಿ ಎರಡು ಇಂಚಿನ ಬಾಲದೊಂದಿಗೆ ಜನಿಸಿದ ಹೆಣ್ಣುಮಗುವಿನ ಫೋಟೋ ಇದೀಗ ವೈರಲ್ ಆಗಿದೆ. ಎರಡು ತಿಂಗಳ ಶಸ್ತ್ರಕ್ರಿಯೆಯ ಮೂಲಕ ಈ ಮಗು ಜನಿಸಿತ್ತು. ಬಾಲದೊಂದಿಗೆ ಹುಟ್ಟಿದ ಮಗುವನ್ನು ನೋಡಿದ ವೈದ್ಯರು, ನರ್ಸ್​ಗಳು ಮತ್ತು ಪೋಷಕರು ಆರಂಭದಲ್ಲಿ ಆತಂಕ ಮತ್ತು ಆಘಾತಕ್ಕೆ ಒಳಗಾಗಿದ್ದರು. ಆದರೆ ಬಾಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದ ನಂತರ ಎಲ್ಲರೂ ನಿರಾಳವಾದರು.  ಮಗುವಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂಬುದು ದೃಢಪಟ್ಟಿದೆ. ಈಗ ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ.

ಇದನ್ನೂ ಓದಿ : ಇದು ನಿಜವಾದ ಪ್ರೀತಿ ಎನ್ನುತ್ತಿದ್ದಾರೆ ನೆಟ್ಟಿಗರು, ನೋಡಿ ವೈರಲ್​ ವಿಡಿಯೋ

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಮಗು ಗರ್ಭಾವಸ್ಥೆಯಲ್ಲಿದ್ಧಾಗ ಕೂಡ ಯಾವುದೇ ರೀತಿಯ ತೊಂದರೆಗಳು ಉಂಟಾಗಿರಲಿಲ್ಲ. ಮೃದು ಚರ್ಮ ಮತ್ತು ಕೂದಲಿನಿಂದ ಕೂಡಿದ ಬಾಲವು ಬೆನ್ನಿನ ಕೆಳಗೆ ಎಡಭಾಗದಲ್ಲಿ ಇತ್ತು. ಒಟ್ಟು 5.7 ಸೆಂ.ಮೀ ಉದ್ದವನ್ನು ಇದು ಹೊಂದಿತ್ತು. ಮಗುವಿನ ಬೆಳವಣಿಗೆಯಲ್ಲಿ ಸಹಜತೆ ಇತ್ತು, ತೂಕದಲ್ಲಿಯೂ ಹೆಚ್ಚಳವಾಗಿತ್ತು. ಎರಡು ತಿಂಗಳು ತುಂಬುತ್ತಿದ್ದಂತೆ ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಈ ಬಾಲವನ್ನು ಕತ್ತರಿಸಿ ತೆಗೆಯಲಾಯಿತು. ಅದೇ ದಿನ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಅದೇ ದಿನವೇ ಮಗುವನ್ನು ಡಿಸ್ಚಾರ್ಜ್​ ಮಾಡಲಾಯಿತು.

ಬಾಲದೊಂದಿಗೆ ಹುಟ್ಟಿದ ಮಕ್ಕಳು ಅಪರೂಪ. 2017ರ ತನಕ ಇಂಥ ಮಕ್ಕಳ ಸಂಖ್ಯೆ 195ರಷ್ಟಿತ್ತು. 20 ಸೆಂ.ಮೀ. ಉದ್ದದ ಬಾಲವನ್ನು ಹೊಂದಿದ ಮಗುವೊಂದು ಜನಿಸಿತ್ತು. ಆ ಬಾಲಕ್ಕೆ ಮಾಂಸದಿಂದ ಕೂಡಿದ ಚೆಂಡಿನಂಥದ್ದೊಂದು ಅಂಟಿಕೊಂಡಿತ್ತು. ನೋಡಲು ಗದೆಯಂತೆ ಕಾಣುತ್ತಿತ್ತು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:28 am, Mon, 28 November 22

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್