Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್‌ ಕಳಿಸಿ ಎಂದ ಅಳಿಯ

ಕೆಲ ಗಂಡ್ಮಕ್ಕಳು ತನ್ನ ಹೆಂಡ್ತಿ ಯಾವಾಗ ತವರು ಮನೆಗೆ ಹೋಗ್ತಾಳೆ ಅಂತ ಕಾಯ್ತಾ ಇರ್ತಾರೆ. ತಾಯಿ ಮನೆಗೆ ಹೊರಡುತ್ತಾಳೆ ಅಂದ್ರೆ ಈ ಗಂಡು ಮಕ್ಕಳ ಖುಷಿಗೆ ಪಾರಾವೇ ಇರಲ್ಲ. ಆದರೆ ಈ ವ್ಯಕ್ತಿಯದ್ದು ಮಾತ್ರ ಬೇರೆಯದ್ದೇ ಕಥೆ. ತಾಯಿ ಮನೆಗೆ ಹೋದ ಹೆಂಡ್ತಿ ಬರಲೇ ಇಲ್ಲ. ಹತ್ತು ದಿನಗಳ ಕಾಲ ಸಹಿಸಿಕೊಂಡ ವ್ಯಕ್ತಿ ನೇರ ಅತ್ತೆ ಮನೆಗೆ ಹೋಗಿದ್ದಾನೆ. ಮುಂದೇನಾಯ್ತು ಎಂದು ತಿಳಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್‌ ಕಳಿಸಿ ಎಂದ ಅಳಿಯ
ವೈರಲ್‌ ವಿಡಿಯೋ
Image Credit source: Instagram

Updated on: Jun 08, 2026 | 4:36 PM

ಗಂಡು ಮಕ್ಕಳಿಗೆ ಹೆಂಡ್ತಿ ತವರಿಗೆ ಹೊರಟು ನಿಂತರೆ ಅದೇನೋ ಖುಷಿ. ಹೆಂಡ್ತಿ ಮರಳಿ ಬರುವ ತನಕ ತಮ್ಮ ಸ್ನೇಹಿತರ ಪಾರ್ಟಿ, ಸುತ್ತಾಟ ಎಂದು ಬ್ಯುಸಿಯಾಗಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತವರಿಗೆ ಹೋದ ಹೆಂಡ್ತಿ ಬರ್ತಾಳೆ ಎಂದು ಕಾದು ಕೊನೆಗೆ ಅತ್ತೆ (mother-in-law) ಮನೆಗೆ ಹೋಗಿದ್ದಾನೆ. ಕೇಕ್ ತೆಗೆದುಕೊಂಡು ಹೋಗಿ ನನ್ನ ಹೆಂಡ್ತಿನಾ ಕೊಡಿ ಎಂದು ಕೇಳಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರಿಗೆ ನಗು ತಡೆಯಲಾಗಲಿಲ್ಲ.

Karan and Mona ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಂಡ್ತಿ ತವರಿಗೆ ಹೋದ ಹತ್ತು ದಿನದ ಬಳಿಕ ಅತ್ತೆ ಮನೆಗೆ ತೆರಳಿದ್ದಾನೆ. ಹೌದು, 11 ನೇ ದಿನ ಈ ವ್ಯಕ್ತಿ ಕೇಕ್‌ ಹಿಡಿದುಕೊಂಡು ಅತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಸುಳಿವೇ ನೀಡದೇ ಅತ್ತೆ ಮನೆಗೆ ಬಂದ ಅಳಿಯನನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. 15 ದಿನ ತವರು ಮನೆಯಲ್ಲಿ ಉಳಿದು ಬರುವೆ. ಫೋನ್ ಮಾಡುವೆ ಆಗ ಬನ್ನಿ ಎಂದಿದ್ದ ಪತ್ನಿಗೂ ಗಂಡನ ಆಗಮನದಿಂದ ಅಚ್ಚರಿಯಾಗಿದೆ. ಅತ್ತೆ ಮಾವನ ಬಳಿ ಪತ್ನಿಯನ್ನು ವಾಪಸ್ ಕೊಡಿ ಎಂದು ಕೇಳಿದ್ದಾನೆ. ಅಳಿಯನ ಮಾತು ಕೇಳಿ ಒಂದೆಡೆ ಶಾಕ್ ಆದರೆ, ಕೇಕ್ ಮೇಲೆ ನನಗೆ ನನ್ನ ಪತ್ನಿಯನ್ನು ವಾಪಸ್ ಕೊಡಿ ಎಂದು ಬರೆದಿದ್ದ ಸಾಲುಗಳನ್ನು ನೋಡಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಕೊನೆಗೆ ಅತ್ತೆ ಮಾವ ತಮ್ಮ ಮಗಳ ಕೈಹಿಡಿದು ಮತ್ತೆ ಅಳಿಯನ ಕೈಗೆ ಇಟ್ಟಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಹೊಸದಾಗಿ ಮದುವೆಯಾದ ಜೋಡಿ ಇರಬೇಕು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಅಳಿಯ ನಿಮಗೆ ಸಿಕ್ಕಿದ್ದು ಪುಣ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ವಲ್ಪ ವರ್ಷಗಳು ಕಳೆಯಲಿ ಹೆಂಡ್ತಿ ತವರು ಮನೆಯಿಂದ ಕರೆ ತರುವಾಗ ಇಷ್ಟೊಂದು ಖುಷಿ ಇರಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:34 pm, Mon, 8 June 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us