AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ!

ಹರಿಯಾಣದ ಜನಪ್ರಿಯ ಗಾಯಕಿ ಕಾಜಲ್ ಚೌಧರಿ ಅವರು ತಮ್ಮ 90 ವರ್ಷದ ಅತ್ತೆಯ ಬಹುದಿನಗಳ ಆಸೆಯನ್ನು ಈಡೇರಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಬುಟ್ಟಿಯಲ್ಲಿ ಅತ್ತೆಯನ್ನು ತಲೆಯ ಮೇಲೆ ಹೊತ್ತುಕೊಂಡು 84-ಕೋಸ್ ಬ್ರಜ್ ಪರಿಕ್ರಮ ಯಾತ್ರೆಯನ್ನು ಕೈಗೊಳ್ಳುವ ವಿಡಿಯೋ ವೈರಲ್ ಆಗಿದೆ. ಪವಿತ್ರ ಬ್ರಜ್ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಕಾಜಲ್ ಚೌಧರಿ ತನ್ನ ಅತ್ತೆಯನ್ನು ತಲೆಯ ಮೇಲೆ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಹೊತ್ತುಕೊಂಡು ಹೋಗುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಜಲ್ ಅವರನ್ನು ಆಧುನಿಕ ಕಾಲದ ಶ್ರವಣ ಕುಮಾರ್ ಎಂದು ಹೊಗಳುತ್ತಿದ್ದಾರೆ.

ಕಲಿಯುಗದ 'ಶ್ರವಣ ಕುಮಾರ'; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ!
Haryana SingerImage Credit source: TV9
ಸುಷ್ಮಾ ಚಕ್ರೆ
|

Updated on: Jun 04, 2026 | 4:59 PM

Share

ಮಥುರಾ, ಜೂನ್ 4: ಇಂದಿನ ಆಧುನಿಕ ಯುಗದಲ್ಲಿ ಅತ್ತೆ-ಸೊಸೆಯರ ಸಂಬಂಧದ ಬಗ್ಗೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿ ಕೇಳಿಬರುವಾಗ ಹರಿಯಾಣದ ಪ್ರಸಿದ್ಧ ಜಾನಪದ ಗಾಯಕಿ ಕಾಜಲ್ ಚೌಧರಿ (Kajal Chaudhary) ಅವರು ಇಡೀ ಸಮಾಜಕ್ಕೇ ಮಾದರಿಯಾಗುವಂತಹ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ನಡೆಯಲು ಸಾಧ್ಯವಾಗದ ತಮ್ಮ 90 ವರ್ಷದ ಅತ್ತೆಯನ್ನು ವಿಶೇಷವಾಗಿ ಸಿದ್ಧಪಡಿಸಿದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಕೂರಿಸಿಕೊಂಡು, ಆ ಬುಟ್ಟಿಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಬರೋಬ್ಬರಿ 260 ಕಿಲೋಮೀಟರ್ ದೂರದ ಪವಿತ್ರ ‘ಬ್ರಜ್ ಪರಿಕ್ರಮ’ (Brij Parikrama) ಯಾತ್ರೆಯನ್ನು ಕೈಗೊಂಡಿದ್ದಾರೆ!

ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಾಜಲ್ ಅವರ 90 ವರ್ಷದ ಅತ್ತೆ ಚಂದ್ರಿ ದೇವಿ ಅವರಿಗೆ ಶ್ರೀಕೃಷ್ಣನ ಪವಿತ್ರ ಭೂಮಿಯಾದ ಬ್ರಜ್ ಪ್ರದೇಶದ ಸುಮಾರು 260 ಕಿ.ಮೀ ಉದ್ದದ ಧಾರ್ಮಿಕ ಪ್ರದಕ್ಷಿಣೆ ಮಾಡಬೇಕೆಂಬುದು ಬಹುಕಾಲದ ಆಸೆಯಾಗಿತ್ತು. ಆದರೆ ವಯೋಸಹಜ ನಿಶ್ಯಕ್ತಿಯಿಂದಾಗಿ ಅವರಿಗೆ ನಡೆಯಲು ಸಾಧ್ಯವಿರಲಿಲ್ಲ. ಅತ್ತೆಯ ಈ ಕೊನೆಯ ಆಸೆಯನ್ನು ತಿಳಿದ ಸೊಸೆ ಕಾಜಲ್, ತಾವೇ ಅವರನ್ನು ಹೊತ್ತುಕೊಂಡು ಹೋಗಲು ನಿರ್ಧರಿಸಿದರು. ನೆಟ್ಟಿಗರು ಕಾಜಲ್ ಚೌಧರಿ ಅವರನ್ನು ಆಧುನಿಕ ಕಾಲದ ‘ಶ್ರವಣ ಕುಮಾರ’ ಎಂದು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ

“ಇದು ಸಂಪೂರ್ಣವಾಗಿ ನನ್ನದೇ ನಿರ್ಧಾರ. ನನ್ನ ಅತ್ತೆ ನನ್ನ ಬಳಿ ಈ ರೀತಿ ಮಾಡುವಂತೆ ಎಂದಿಗೂ ಹೇಳಿರಲಿಲ್ಲ. ಅವರು ನನ್ನನ್ನು ಮಗಳಿಗಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದಾರೆ. ಅವರ ಮುಖದಲ್ಲಿ ಸಂತೋಷ ನೋಡುವುದು ಮತ್ತು ನನ್ನ ಆತ್ಮತೃಪ್ತಿಗಾಗಿ ನಾನು ಈ ಕಠಿಣ ಯಾತ್ರೆಯನ್ನು ಮಾಡುತ್ತಿದ್ದೇನೆ” ಎಂದು ಕಾಜಲ್ ಚೌಧರಿ ಹೇಳಿದ್ದಾರೆ.

ಹರಿಯಾಣದ ಬಂಚಾರಿ ಗ್ರಾಮದಿಂದ ಆರಂಭವಾದ ಈ ಪಯಣವು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಗಡಿಗಳ ಮೂಲಕ ಸಾಗುತ್ತಿದೆ. ತಲೆಯ ಮೇಲೆ ಅತ್ತೆಯನ್ನು ಹೊತ್ತು ಸಾಗುತ್ತಿರುವ ಕಾಜಲ್ ಅವರನ್ನು ಕಂಡ ಸ್ಥಳೀಯ ಗ್ರಾಮೀಣರು ಮತ್ತು ಇತರ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ದಾರಿಯುದ್ದಕ್ಕೂ ಜನ ಇವರಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಯಾತ್ರೆಯು ಶ್ರೀಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಪ್ರಮುಖ ದೇವಸ್ಥಾನಗಳು, ಕಾಡುಗಳು ಮತ್ತು ಪವಿತ್ರ ಸರೋವರಗಳ ಮೂಲಕ ಹಾದುಹೋಗುತ್ತದೆ. ಸಾಮಾನ್ಯವಾಗಿ ಭಕ್ತರು ಈ 260 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಸುಮಾರು 40 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ ಹಿಂದೂ ಕ್ಯಾಲೆಂಡರ್‌ನ ಪವಿತ್ರ ‘ಅಧಿಕ ಮಾಸ’ ನಡೆಯುತ್ತಿರುವುದರಿಂದ, ಈ ಅವಧಿಯಲ್ಲಿ ಪರಿಕ್ರಮ ಮಾಡುವುದರಿಂದ ವಿಶೇಷ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​