ಈ ರೀಲ್ಸ್ ಹುಚ್ಚು ಯಾವೆಲ್ಲ ಅನಾಹುತವನ್ನು ಉಂಟು ಮಾಡುತ್ತದೆ ಎಂದರೆ, ಅದು ಜೀವಕ್ಕೂ ಅಪಾಯ ಹಾಗೂ ಸಮಾಜಕ್ಕೂ ಅಪಾಯ. ಯುವಕ – ಯುವತಿಯರು ಮಾಡುವ ಹುಚ್ಚಾಟಕ್ಕೆ ಸಾರ್ವಜನಿಕರು ಬೆಲೆ ತೆರಬೇಕು. ಉತ್ತರಪ್ರದೇಶದ ಲಕ್ನೋದಲ್ಲಿ ಯುವತಿಯೊಬ್ಬಳು ಕೈಯಲ್ಲಿ ಗನ್ ಹಿಡಿದು ನಡುರಸ್ತೆಯಲ್ಲಿ ರೀಲ್ ಮಾಡಿದ್ದಾಳೆ, ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ವಕೀಲ ಕಲ್ಯಾಣಜಿ ಚೌಧರಿ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಕೆಯನ್ನು ಇನ್ಸ್ಟಾಗ್ರಾಮ್ ಸ್ಟಾರ್ ಸಿಮ್ರಾನ್ ಯಾದವ್ ಎಂದು ಗುರುತಿಸಲಾಗಿದೆ.
ಈ ವಿಡಿಯೋದಲ್ಲಿ ಸಿಮ್ರಾನ್ ಯಾದವ್ ಹೆದ್ದಾರಿಯಲ್ಲಿ ಗನ್ ಹಿಡಿದುಕೊಂಡು ರೀಲ್ಸ್ ಮಾಡಿದ್ದಾರೆ. ಇದೀಗ ಯುವತಿಯ ಈ ವರ್ತನೆಯೂ ಕಾನೂನು ಮತ್ತು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಸಾರ್ವಜನಿಕ ಪ್ರದೇಶದಲ್ಲಿ ಇಂತಹ ವಿಡಿಯೋ ಮಾಡಿರುವುದು ಸಮಾಜಘಾತಕ ವರ್ತನೆ ಎಂದು ಹೇಳಲಾಗಿದೆ. ಇನ್ನು ಈ ವಿಡಿಯೋದ ಬಗ್ಗೆ ಪೊಲೀಸರು ಕೂಡ ಮೌನ ವಹಿಸಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
instagram star सिमरन यादव लखनऊ सरेआम नियम कानून व आचार संहिता की धज्जियाँ उड़ाते हुए highway पर पिस्टल को लहराकर video वायरल करके समाज में अपनी बिरादरी का रौब जमा रहीं हैं परंतु अधिकारी चुप्पी साधे हुए है l @dgpup @ECISVEEP @Splucknow_rural @Igrangelucknow @adgzonelucknow @myogi pic.twitter.com/GN4zWsc1P9
— Advocate kalyanji Chaudhary (@DeewaneHindust1) May 9, 2024
ಒಂದು ವಾರಗಳ ಹಿಂದೆ ಈ ವಿಡಿಯೋಗೆ 1,300 ಕ್ಕೂ ಹೆಚ್ಚು ವೀಕ್ಷಣೆ ಹಾಗೂ ಅನೇಕ ಕಮೆಂಟ್ ಕೂಡ ಬಂದಿದೆ. ಇನ್ನು ಎಕ್ಸ್ ಬಳಕೆದಾರರೂ ಈ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಕಮೆಂಟ್ ಮಾಡುವಾಗ ಉತ್ತರಪ್ರದೇಶದ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ. ” ಉತ್ತರಪ್ರದೇಶದ ಪೊಲೀಸರೇ ಈ ವಿಡಿಯೋವನ್ನು ಒಮ್ಮೆ ನೋಡಿ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಪ್ರದೇಶದ ಪೊಲೀಸರು ಕೂಡ ಪ್ರತಿಕ್ರಿಯೆ ನೀಡಿದ್ದು ಖಂಡಿತ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಟೋಗೆ ಬಲೂನ್ ಕಟ್ಟಿ ಮಗಳ ಹುಟ್ಟುಹಬ್ಬ ಸಂಭ್ರಮಿಸಿದ ತಂದೆ
ಇನ್ನು ಈ ವಿಡಿಯೋಗೆ ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದು, ಪೊಲೀಸರೇ ಈ ಯುವತಿಗೆ ಭಾರೀ ದಂಡವನ್ನು ಹಾಕಿ, ಆ ಹಣದಲ್ಲಿ ಬಡವರಿಗೆ ಅನ್ನ ನೀಡಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ಖಾತೆಯನ್ನು ಬ್ಲಾಕ್ ಮಾಡಿ ಎಂದು ಹೇಳಿದ್ದಾರೆ. ಈ ಹಿಂದೆಯೂ ಕೂಡ ಇಂತಹ ಅನೇಕ ಘಟನೆಗಳು ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ಅನೇಕ ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ