ಬೆಂಗಳೂರಿನಿಂದ ದೊಡ್ಡ-ದೊಡ್ಡ ಕಂಪನಿಗಳು ಹೊರ ಹೋಗಲು ಈ ಪೋಸ್ಟ್​​​ ಕಾರಣ, ಎಕ್ಸ್​​​ನಲ್ಲಿ ಭಾರೀ ಚರ್ಚೆ

ಬೆಂಗಳೂರಿನಿಂದ ಈ ಕಾರಣಕ್ಕೆ ಬಹುದೊಡ್ಡ ಕಂಪನಿಗಳು ಹೋಗುತ್ತಿದೆ ಎಂದು ವ್ಯಕ್ತಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಎಕ್ಸ್‌ನಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಭವಿಷ್ಯದಲ್ಲಿ ನನ್ನ ಮಕ್ಕಳು "ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಿಂದ ಏಕೆ ಸ್ಥಳಾಂತರಗೊಂಡವು? ಎಂದು ಕೇಳಿದಾಗ, ನಾನು ಅವರಿಗೆ ಈ ಪೋಸ್ಟ್​​​ನ್ನು ತೋರಿಸುತ್ತೇನೆ ಎಂದು ಅವರು ಹೇಳಿದ್ದು, ಈ ಪೋಸ್ಟ್‌ ಭಾರೀ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಿಂದ ದೊಡ್ಡ-ದೊಡ್ಡ ಕಂಪನಿಗಳು ಹೊರ ಹೋಗಲು ಈ ಪೋಸ್ಟ್​​​ ಕಾರಣ, ಎಕ್ಸ್​​​ನಲ್ಲಿ ಭಾರೀ ಚರ್ಚೆ
ವೈರಲ್​ ಪೋಸ್ಟ್​
Edited By:

Updated on: Jun 25, 2025 | 4:09 PM

ಕರ್ನಾಟಕದಲ್ಲಿ ಕನ್ನಡ ಮಾತನಾಡಿ (Kannada language) ಎಂಬು ಕೂಗು ಆಗ್ಗಾಗೆ ಕೇಳಿ ಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಈ ಬಗ್ಗೆ ಸ್ವಲ್ಪ ಹೆಚ್ಚು ವಿವಾದ ಹುಟ್ಟು ಹಾಕಿದೆ. ಕನ್ನಡ ವಿಚಾರವಾಗಿ ಕೆಲವೊಂದು ಪೋಸ್ಟ್​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗುತ್ತಿರುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಪೋಸ್ಟ್​​ವೊಂದು ಬಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ವ್ಯಕ್ತಿಯೊಬ್ಬರು “ದಯವಿಟ್ಟು ಕನ್ನಡದಲ್ಲಿ ಸಂವಹನ ನಡೆಸಿ” ಎಂಬ ಒಂದು ಪೋಸ್ಟ್​​​ನ್ನು ಹಂಚಿಕೊಂಡಿದ್ದಾರೆ. ಎಕ್ಸ್​​​ ಖಾತೆಯಲ್ಲಿ ಈ ಪೋಸ್ಟ್​​ ಚರ್ಚೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ನನ್ನ ಮಕ್ಕಳು “ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಿಂದ ಏಕೆ ಸ್ಥಳಾಂತರಗೊಂಡವು? ಎಂದು ಕೇಳಿದಾಗ, ನಾನು ಅವರಿಗೆ ಇದನ್ನು ತೋರಿಸುತ್ತೇನೆ ಎಂದು ಈ ಪೋಸ್ಟ್​​​ನಲ್ಲಿ ಹಂಚಿಕೊಂಡಿದ್ದಾರೆ.

ಈ ಪೋಸ್ಟ್​​​​​​​ ಎಕ್ಸ್​​ನಲ್ಲಿ ಶೇರ್‌ ಮಾಡಿದ​​​​ ಆದ ಕೆಲವೇ ಗಂಟೆಗಳಲ್ಲಿ ಇದು 23,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 600 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ವಿಚಾರವಾಗಿ ಅನೇಕರು ಎಕ್ಸ್​​ನಲ್ಲಿ ಚರ್ಚೆಯನ್ನು ನಡೆಸಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಕಂಪನಿಗಳು ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ಏಕೆ ಸ್ಥಳಾಂತರಗೊಳ್ಳುತ್ತಿವೆ ಎಂಬುದು ಆಶ್ಚರ್ಯವೇನಿಲ್ಲ ಎಂದು ಕಮೆಂಟ್​​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಇದು ಹುಚ್ಚತನ ಅಣ್ಣ, ಸಂಚಾರ ಮತ್ತು ಜೀವನ ವೆಚ್ಚಕ್ಕಾಗಿ ಈ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ಎಂದು ಕಮೆಂಟ್​​ ಮಾಡಿದ್ದಾರೆ.

ಇದನ್ನೂ ಓದಿ
ಇದಕ್ಕೆಲ್ಲ ಬೆಂಗಳೂರು ಟ್ರಾಫಿಕ್ ಕಾರಣ
HMT ವಾಚ್‌ನಲ್ಲೂ ಕನ್ನಡದ ಕಂಪು, ಈ ವಾಚ್ ಹೇಗಿದೆ ನೋಡಿ
ಸಲೀಸಾಗಿ ಕನ್ನಡ ಮಾತನಾಡುವ ಓಡಿಶಾದ ಪ್ಲಂಬರ್
ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇನ್ನೊಬ್ಬರು ಈ ಪೋಸ್ಟ್​​​ಗೆ ತುಂಬಾ ಗಂಭೀರವಾಗಿ ಉತ್ತರಿಸಿದ್ದಾರೆ. ನಾನು ಹಾಂಗ್ ಕಾಂಗ್‌ನಲ್ಲಿ ವಾಸಿಸುತ್ತಿದ್ದೇನೆ, ಇಲ್ಲಿರುವ ಎಲ್ಲರೂ ನನ್ನ ದೈನಂದಿನ ಜೀವನದಲ್ಲಿ ಇಂಗ್ಲಿಷ್‌ನಲ್ಲಿ ನನಗೆ ಸೇವೆ ಸಲ್ಲಿಸುತ್ತಾರೆ. ಚೈನೀಸ್ ಕಲಿಯುವುದು ಅಂತಹದ್ದೇನೂ ಅಲ್ಲ. ನಾನು ದುಬೈಗೆ ಭೇಟಿ ನೀಡಿದಾಗ ಅಲ್ಲಿ ಅರೇಬಿಕ್ ಅಥವಾ ಸಿಂಗಾಪುರದಲ್ಲಿ ಬಹಾಸಾ ಕಲಿಯಬೇಕೆಂದು ಒತ್ತಾಯ ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಬೆಂಗಳೂರಿನಲ್ಲಿದ್ದ ಅಷ್ಟು ಕಂಪನಿಗಳು ತಮ್ಮ ಕ್ಲೈಂಟ್‌ಗಳೊಂದಿಗೆ ಕನ್ನಡದಲ್ಲಿಯೂ ಮಾತನಾಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಆಫೀಸ್​​​​​​ನಿಂದ ಸಂಜೆ 6 ಗಂಟೆ ಬಿಟ್ಟು, ಮನೆಗೆ ತಲುಪಿದ್ದು ರಾತ್ರಿ 9.15ಕ್ಕೆ, ಇದಕ್ಕೆಲ್ಲ ಬೆಂಗಳೂರು ಟ್ರಾಫಿಕ್ ಕಾರಣ

ಇನ್ನು ಕೆಲವು ಬಳಕೆದಾರರೂ ನಾವು ಮರಾಠಿಗಳು ನಿಮ್ಮೊಂದಿಗಿದ್ದೇವೆ, ಬೆಂಗಳೂರು ಬಿಟ್ಟು ಹೋಗಿ ಎಂದು ಈ ಪೋಸ್ಟ್​​ಗೆ ಬೆಂಬಲ ಸೂಚಿಸಿದರು. ಇನ್ನೊಬ್ಬ ವ್ಯಕ್ತಿ ಈ ಪೊಸ್ಟ್​​​​​ನ್ನು ವಿರೋಧಿಸಿದ್ದಾರೆ. ಭಾಷೆಗಾಗಿ ಯಾರೂ ಹೊರಗೆ ಹೋಗುತ್ತಿಲ್ಲ. ಬೆಂಗಳೂರಿನಲ್ಲಿರುವ ಕಂಪನಿಗಳು ಬಹುತೇಕ ಪ್ರತಿ ವಾರ ಹೊಸ ಕಚೇರಿಗಳನ್ನು ತೆರೆಯುವುದನ್ನು ನೀವು ಕೇಳುತ್ತಲೇ ಇರುತ್ತೀರಿ. ಇಲ್ಲಿನ ಜೀವ ವೆಚ್ಚ ಹಾಗೂ ಕೆಲವೊಂದು ಘಟನೆಗಳಿಂದ ಇಲ್ಲಿ ಹೊರಗೆ ಹೋಗುತ್ತಾರೆ ಹೊರತು. ಕನ್ನಡ ಕಲಿಯಿರಿ ಎಂಬ ಒತ್ತಡದಿಂದಲ್ಲಾ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Wed, 25 June 25