
ಮುಂಬೈನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪ್ರಾಣಿಗಳಿಗೂ ನೋವುವಾಗುತ್ತದೆ ಎಂಬ ಮನೋಭಾವವನ್ನು ಅನೇಕರು ಇಂದಿನ ಕಾಲದಲ್ಲಿ ಮರೆಯುತ್ತಿದ್ದಾರೆ. ಅದೆಷ್ಟೋ ಇಂತಹ ಸ್ಟೋರಿಗಳು ಆಗ್ಗಾಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದದ್ದು, ಮುಂಬೈನಲ್ಲಿ ಸೆಕ್ಯೂರಿಟಿ ಗಾರ್ಡ್ 17ನೇ ಮಹಡಿಯಿಂದ ಸಾಕು ನಾಯಿಯನ್ನು ಬಲವಂತವಾಗಿ ತಳ್ಳಿ ಸಾಯಿಸಿದ್ದಾನೆ. ಈ ಘಟನೆಯ ಬಗೆಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಮೂಕ ಪ್ರಾಣಿ ಎಷ್ಟು ನೋವು ತಿಂದಿರಬೇಡ, ಇಂತಹ ಕೃತ್ಯವನ್ನು ಮಾಡುವವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು ಎಂದು ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ. ಮುಂಬೈನ ವಸತಿ ಕಟ್ಟಡವೊಂದರಲ್ಲಿ ನಾಯಿಯನ್ನು ಕ್ರೂರವಾಗಿ ಥಳಿಸಿ 17 ನೇ ಮಹಡಿಯ ಬಾಲ್ಕನಿಯಿಂದ ಬಲವಂತವಾಗಿ ಜಿಗಿಯುವಂತೆ ಮಾಡಿದ್ದಾನೆ. ನಾಯಿ ನರಳಿ ನರಳಿ ಸಾವನ್ನಪ್ಪಿದ್ದು, ಈ ದೃಶ್ಯವನ್ನು ನೋಡಲು ಸಾಧ್ಯವಿಲ್ಲ ಅಷ್ಟು ಕ್ರೂರವಾಗಿದೆ.
ವಿಜಯ್ ರಂಗರೆ ಎಂಬುವವರು ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಬ್ಬ ಸೆಕ್ಯೂರಿಟಿ ಗಾರ್ಡ್ ವಯಸ್ಸಾದ ನಾಯಿಯನ್ನು 17ನೇ ಮಹಡಿಯಿಂದ ಬಲವಂತವಾಗಿ ಜಿಗಿಯುವಂತೆ ಮಾಡಿದ್ದಾನೆ. ಆ ಜೀವನ ನರಳಾಡಿ ಸತ್ತಿದೆ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಸೆಕ್ಯೂರಿಟಿ ಗಾರ್ಡ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಇಷ್ಟಕ್ಕೆ ಆ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಬೀಡಬಾರದು, ಆತನಿಗೆ ಕಠಿಣ ಶಿಕ್ಷಯಾಗಬೇಕು ಎಂದು ವಿಜಯ್ ರಂಗರೆ ಒತ್ತಾಯ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಯಿಯನ್ನು ಮನಬಂದಂತೆ ಆ ಸೆಕ್ಯೂರಿಟಿ ಗಾರ್ಡ್ ಹೊಡೆಯುತ್ತಾನೆ. ಆ ಶ್ವಾನ ಕಿರುಚಿದರೂ ದಯೆ ಇಲ್ಲದಂತೆ ಹೊಡೆದಿದ್ದಾನೆ. ನಾಯಿ ನೋವು ಸಹಿಸಲಾಗದೇ ಓಡಲು ಪ್ರಾರಂಭಿಸಿದೆ, ಈ ವೇಳೆ ಬಾಲ್ಕನಿ ಬಳಿ ಬಂದ ನಾಯಿ ದಾರಿ ಕಾಣದೇ ಬಲವಂತವಾಗಿ 17 ಮಹಡಿಯ ಬಾಲ್ಕನಿಯಿಂದ ಜಿಗಿದಿದೆ.
ಇದನ್ನೂ ಓದಿ: 79 ವರ್ಷ ವಯಸ್ಸಲ್ಲೂ ಇಡ್ಲಿ-ಸಾಂಬಾರ್ ಮಾರಿ ಸ್ವಾವಲಂಬಿ ಜೀವನ ನಡೆಸುತ್ತಿರುವ ನಿವೃತ್ತ ಯೋಧೆ
ಇನ್ನು ಈ ವಿಡಿಯೋ ನೋಡಿ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಇಂತಹ ಘಟನೆಗಳಿಗೆ ಕಠಿಣ ಕ್ರಮ ಆಗಲೇಬೇಕು. ಆತನನ್ನು ಯಾವುದೇ ಕಾರಣಕ್ಕೂ ಬಿಡಬಾರದು, ಆ ಶ್ವಾನ ಜೀವ ಉಳಿಸಿಕೊಳ್ಳಲು ಎಷ್ಟು ಒದ್ದಾಡಿದೆ ಎಂಬುದನ್ನು ವಿಡಿಯೋದಲ್ಲಿ ನೋಡಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಇನ್ಸ್ಟಾ ಬಳಕೆದಾರ ಆ ವ್ಯಕ್ತಿ ನಾಯಿ ಅಷ್ಟು ಹಿಂಸೆ ಕೊಟ್ಟರು ಯಾರು ಅಲ್ಲಿ ಮಾತನಾಡಿಲ್ಲ, ಅಥವಾ ಅದನ್ನು ತಡೆಯಲಿಲ್ಲ ಇದು ವಿಪರ್ಯಾಸವೇ ಸರಿ. ಒಂದು ವೇಳೆ ಇಂತಹ ಸ್ಥಿತಿ ಅವರಿಗೆ ಬಂದಿದ್ದರೆ, ಆಗಾ ಅವರಿಗೆ ಗೊತ್ತಾಗುತ್ತಿತ್ತು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ