Viral: ಹಣ ನೀಡಲು ಒಲ್ಲೆ ಎಂದ ವ್ಯಕ್ತಿಯ ಮೇಲೆ ನಡುರಸ್ತೆಯಲ್ಲಿ ಕೈ ಮಾಡಿದ ಮಂಗಳಮುಖಿಯರು; ವಿಡಿಯೋ ವೈರಲ್
ಮಂಗಳಮುಖಿಯರು ಮಾಡುವಂತಹ ಸಣ್ಣಪುಟ್ಟ ಕಿರಿಕ್‌ಗಳಿಗೆ ಸಂಬಂಧಿಸಿದ ಕೆಲವೊಂದಿಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಹಣ ಕೊಡಲು ಒಲ್ಲೆ ಎಂದನೆಂದು ಮಂಗಳಮುಖಿಯರ ತಂಡವೊಂದು ಯುವಕನ ಮೇಲೆ ದರ್ಪ ತೋರಿಸಿ ಆತನಿಗೆ ಥಳಿಸಿದ್ದಾರೆ. ವೈರಲ್ ಆಗುತ್ತಿರುವ ಈ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬರೇಲಿ, ಮಾ.2: ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಮಂಗಳಮುಖಿಯರು ಭಿಕ್ಷೆ ಬೇಡುತ್ತಾರೆ. ಅದರಲ್ಲೂ ಕೆಲವರಂತೂ ಜನರನ್ನು ಹಣಕ್ಕಾಗಿ ಪೀಡಿಸುತ್ತಾರೆ, ಇನ್ನೂ ಕೆಲವರು ಜನರ ಮೇಲೆ ದರ್ಪವನ್ನೇ ತೋರುತ್ತಾರೆ. ಇಂತಹ ಕೆಲವೊಂದು ಘಟನೆಗಳು ಈ ಹಿಂದೆಯೂ ನಡೆದಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಹಣ ಕೊಡಲು ಒಲ್ಲೆ ಎಂದನೆಂದು ಮಂಗಳಮುಖಿಯರ ತಂಡವೊಂದು ಯುವಕನ ಮೇಲೆ ದರ್ಪ ತೋರಿಸಿ ಆತನಿಗೆ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಂಗಳಮುಖಿಯರ ಈ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಹಣಕೊಡಲು ನಿರಾಕರಿಸಿದನೆಂದು ಮೂರು ನಾಲ್ಕು ಜನ ಮಂಗಳಮುಖಿಯರು ವ್ಯಕ್ತಿಯೊಬ್ಬನ ಮೇಲೆ ದರ್ಪ ತೋರಿದ್ದಾರೆ. ಅಷ್ಟೇ ಅಲ್ಲದೆ ನಡು ರಸ್ತೆಯಲ್ಲಿಯೇ ಆತನ ಮೇಲೆ ಕೈ ಮಾಡಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಬರೇಲಿ ಪೊಲೀಸ್ ಈ ಬಗ್ಗೆ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೂರು ನಾಲ್ಕು ಜನ ಮಂಗಳಮುಖಿಯರು ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಸುತ್ತುವರೆದಿರುವಂತಹ ದೃಶ್ಯವನ್ನು ಕಾಣಬಹುದು. ಆತ ಹಣ ಕೊಡಲಿಲ್ಲವೆಂದು ಆ ವ್ಯಕ್ತಿಯ ಕೈ ಹಿಡಿದು ಎಳೆದು, ಹೊಡೆದು ದರ್ಪ ತೋರಿದ್ದಾರೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.
Kalesh b/w Transgenders and a Guy over this guy refused to give them Money, Bareilly UP pic.twitter.com/Ni1nVDY0cv
— Ghar Ke Kalesh (@gharkekalesh) February 28, 2025
ಇದನ್ನೂ ಓದಿ: ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ
ಫೆಬ್ರವರಿ 28 ರಂದು ಶೇರ್ ಮಾಡಲಾದ ಈ ವಿಡಿಯೋ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಏಕೆ ಈ ಬಗ್ಗೆ ಪೊಲೀಸರು ಸುಮ್ಮನಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ಮೂರಲ್ಲಿಯೂ ಇದೇ ರೀತಿಯ ಸಮಸ್ಯೆಯಿದೆ, ಹಣ ಕೊಡದೆ ಹೋದ್ರೆ ಅವರುಗಳು ನಮ್ಮ ಬೆನ್ನು ಬಿಡುವುದೇ ಇಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಂಗಳಮುಖಿಯರ ಈ ವರ್ತನೆಯನ್ನು ಖಂಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




