
ಹಳ್ಳಿ ಜನರಿಗೆ ಕೃಷಿ (agriculture) ಅಂದ್ರೆ ಜೀವಾಳ. ಬೆಳೆ ಮನೆಯಂಗಳಕ್ಕೆ ಬರುತ್ತಿದ್ದಂತೆ ಖುಷಿಯೋ ಖುಷಿ. ಇದೀಗ ಹಳ್ಳಿ ಜನರು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಕಟಾವು ಮಾಡಿ ಮನೆಯಂಗಳಕ್ಕೆ ತಂದ ಪೈರಿನಿಂದ ಭತ್ತವನ್ನು ಸಾಂಪ್ರದಾಯಿಕ ವಿಧಾನದಿಂದ ಬೇರ್ಪಡಿಸುವುದರಲ್ಲಿ ನಿರತರಾಗಿದ್ದಾರೆ. ಈ ಸುಂದರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿದೆ.
ಸಂತೋಷ್ ನಾಯ್ಕ್ (Santhosh_naik) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಳ್ಳಿ ಜನರು ಕೃಷಿ ಕೆಲಸದಲ್ಲಿ ತೊಡಗಿರುವುದನ್ನು ಕಾಣಬಹುದು. ಮನೆಯಂಗಳದಲ್ಲಿ ಪೈರಿನಿಂದ ಭತ್ತವನ್ನು ಬೆರ್ಪಡಿಸುವ ಕೆಲಸದಲ್ಲಿ ಜನರು ಬ್ಯುಸಿಯಾಗಿದ್ದಾರೆ. ಈ ಕಾಯಕವನ್ನು ಖುಷಿಯಿಂದಲೇ ಮಾಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: ಜಗತ್ತಿನ ಅತಿ ಉದ್ದದ ಹೆಸರಿನ ಸ್ಥಳವಿದು; ನ್ಯೂಜಿಲೆಂಡ್‌ನ ಈ ಸ್ಥಳದ ಹೆಸರಿನಲ್ಲಿದೆ 85 ಅಕ್ಷರಗಳು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹಳ್ಳಿ ಬದುಕು ಚಂದ ಎಂದು ಹೇಳಿದರೆ, ಮತ್ತೊಬ್ಬರು ಈಗೆಲ್ಲಾ ಕೃಷಿಯಲ್ಲಿ ಯಂತ್ರಗಳದ್ದೇ ಕಾರುಬಾರು ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಬಾರಿ ನೋಡಿದ್ರು ಬೇಜಾರ್ ಆಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ