ಫಾಂಟಾ ಬಾಟಲಿಯ ಮುಚ್ಚಳ ತೆಗೆದ ಎರಡು ಜೇನುಹುಳುಗಳ ವಿಡಿಯೋ ವೈರಲ್

Fanta Bottle : ಮಕರಂದ ಬೇಸರವಾಗಿ ಫಾಂಟಾ ಬೇಕೆನ್ನಿಸಿತ್ತೇನೋ. ಮಿಲಿಯನ್​ಗಟ್ಟಲೆ ಜನ ಇವುಗಳ ಅನ್ಯೋನ್ಯತೆ, ಸಾಂಘಿಕ ಶಕ್ತಿಯನ್ನು ಶ್ಲಾಘಿಸಿದರೆ, ಇವರಿಬ್ಬರೂ ಸಂಭಾವನೆ ಪಡೆದುಕೊಂಡ ನಟರು ಆಗಿರಲಾರರು ಎಂದು ಕೆಲವರು ತಮಾಷೆ ಮಾಡಿದ್ಧಾರೆ.

ಫಾಂಟಾ ಬಾಟಲಿಯ ಮುಚ್ಚಳ ತೆಗೆದ ಎರಡು ಜೇನುಹುಳುಗಳ ವಿಡಿಯೋ ವೈರಲ್
ಫಾಂಟಾ ಬಾಟಲಿಯ ಮುಚ್ಚಳ ತೆಗೆಯುತ್ತಿರುವ ಜೇನುನೊಣಗಳು
Updated By: ಶ್ರೀದೇವಿ ಕಳಸದ

Updated on: Jan 05, 2023 | 10:13 AM

Viral Video : ಕೆಲವೊಮ್ಮೆ ಬಾಟಲಿಯ ಮುಚ್ಚಳ ತೆಗೆಯಲು ಎಷ್ಟೋ ಸಲ ನೀವು ತಿಣುಕಾಡಿರುತ್ತೀರಿ. ಇಷ್ಟೊಂದು ದೊಡ್ಡ ಕೈಗಳು ಬೆರಳುಗಳು ಇದ್ಧಾಗಲೂ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ಎರಡು ಜೇನುನೊಣಗಳು ಫಾಂಟಾ ಬಾಟಲಿಯ ಮುಚ್ಚಳವನ್ನು ತೆಗೆದಿವೆ! ಇದು ಸ್ವಲ್ಪ ವಿಚಿತ್ರವೂ ಮತ್ತು ನಂಬಲು ಅಸಾಧ್ಯವೂ ಆದ ವಿಷಯವಾಗಿದೆಯಲ್ಲ? ಆದರೆ ಇದು ಸತ್ಯ. ನೀವೇ ಈ ವಿಡಿಯೋ ನೋಡಿಬಿಡಿ.

ಮನುಷ್ಯರನ್ನು ಹೊರತುಪಡಿಸಿಯೂ ಎಂಥ ಸೂಕ್ಷ್ಮಜೀವಿಗೂ ಅದರದೇ ಆದ ಶಕ್ತಿ ಇದೆ ಮತ್ತು ಬುದ್ಧಿವಂತಿಕೆಯೂ ಇದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಶಕ್ತಿ ಎಂದರೆ ಅದು ಕೇವಲ ದೈಹಿಕಕ್ಕೆ ಮಾತ್ರ ಸೀಮಿತವಾಗಬೇಕಿಲ್ಲ. ಬುದ್ಧಿವಂತಿಕೆಯೂ ಅಲ್ಲಿ ಮೇಳೈಸಬೇಕಾಗುತ್ತದೆ. ಎರಡೂ ಶಕ್ತಿಗಳು ಪ್ರವಹಿಸಿದಾಗಲೇ ಬೇಕಾದ್ದನ್ನು ಸಾಧ್ಯವಾಗಿಸಿಕೊಳ್ಳಬಹುದು. ಈತನಕ ಈ ವಿಡಿಯೋ ಅನ್ನು 3.3 ಮಿಲಿಯನ್ ನೆಟ್ಟಿಗರು ನೋಡಿದ್ಧಾರೆ. 51,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. ಸುಮಾರು 7,000 ಜನರು ರೀಟ್ವೀಟ್ ಮಾಡಿದ್ಧಾರೆ. ಸಾವಿರಾರು ಜನರು ಬೆರಗಿನಿಂದ ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಡೆವಿಲ್ಸ್​ ಪೂಲ್​; ವಿಶ್ವದ ಅತೀ ಎತ್ತರದ ಜಲಪಾತದಂಚಿನಲ್ಲಿ ಮಲಗಿದ ಯುವತಿಯ ವಿಡಿಯೋ ವೈರಲ್

ಅದು ಹೇಗೆ ಎರಡೂ ಅಷ್ಟು ಅನ್ಯೋನ್ಯವಾಗಿ ಆ ಮುಚ್ಚಳವನ್ನು ಒಂದೇ ಏಟಿಗೆ ಬೀಳಿಸುತ್ತವೆ! ಜೇನುನೊಣಗಳ ಸಾಂಘಿಕ ಶಕ್ತಿ ಬಹಳ ದೊಡ್ಡದು ಎನ್ನುತ್ತಿದ್ಧಾರೆ ಅನೇಕರು. ಅವರಿಬ್ಬರೂ ಸಂಭಾವನೆ ಪಡೆದುಕೊಂಡ ನಟರು ಆಗಿರಲಾರರು ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಜೇನುಹುಳುಗಳು ಶ್ರದ್ಧಾಳುಗಳು ಎಂದಿದ್ದಾರೆ ಹಲವರು.

ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು ​

ನನಗಿದು ಅಷ್ಟೇನು ಅದ್ಭುತ ಎನ್ನಿಸುತ್ತಿಲ್ಲ, ಏಕೆಂದರೆ ಒಂದು ಜೇನುಹುಳುವು 3 ಇಂಚಿನ ಮೊಳೆಯನ್ನು ಕಟ್ಟಿಗೆಯಿಂದ ಹೊರತೆಗೆದುದನ್ನು ಸ್ವತಃ ನೋಡಿದ್ದೇನೆ ಎಂದಿದ್ದಾರೆ ಮಗದೊಬ್ಬರು. ಟ್ಯಾಂಗೋ ಆಗಿದ್ದರೆ ಈ ಜೇನುಹುಳುಗಳು ಹೀಗೇ ಮುಚ್ಚಳ ತೆಗೆಯುತ್ತಿದ್ದವಾ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಅಂತೂ ಈ ವಿಡಿಯೋ ಮಿಲಿಯನ್​ ಜನರ ಕುತೂಹಲಕ್ಕೆ ಕಾರಣವಾಗಿದ್ದಂತೂ ಹೌದು ಒಟ್ಟಾರೆಯಾಗಿ ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 6:09 pm, Wed, 4 January 23