
ನಮ್ಮನ್ನು ನಾವು ಚೆನ್ನಾಗಿ ನೋಡಿಕೊಂಡರೆ, ನಾವು ಖುಷಿಯಾಗಿದ್ದರೆ ಜಗತ್ತೆಲ್ಲ ಖುಷಿಯಾಗಿ ಕಾಣುತ್ತದೆ ಎಂಬ ಮಾತಿದೆ. ಯಾರು ಏನಂದುಕೊಳ್ಳುತ್ತಾರೋ ಎಂಬ ಯೋಚನೆಯಿಲ್ಲದೆ ತಮಗೇನು ಇಷ್ಟವೋ ಅದನ್ನು ಮಾಡುವವರು ಬೇರೆಯವರ ಕಣ್ಣಿಗೆ ವಿಚಿತ್ರವಾಗಿ ಕಂಡರೂ ಅವರು ಮಾತ್ರ ತಮ್ಮ ಆ ಕ್ಷಣವನ್ನು ಭಾರೀ ಎಂಜಾಯ್ ಮಾಡುತ್ತಿರುತ್ತಾರೆ. ನಾವು ನಮಗಾಗಿ ಬದುಕಬೇಕು ಎಂಬುದನ್ನು ತೋರಿಸಿಕೊಡುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಇಂಗ್ಲೆಂಡ್ನ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ತನಗನಿಸಿದ ಹಾಗೆ ಹಾಯಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ.
ತನ್ನ ಸುತ್ತಮುತ್ತ ನಿಂತಿರುವವರನ್ನು ಲೆಕ್ಕಿಸದೆ ಬಸ್ ಸ್ಟಾಪ್ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ದಾರಿಯಲ್ಲಿ ಹೋಗುತ್ತಿರುವವರೆಲ್ಲ ಆ ವ್ಯಕ್ತಿಯನ್ನೇ ನೋಡುತ್ತಿದ್ದರೂ ಅದಕ್ಕೆ ಕೇರ್ ಮಾಡದ ಆ ವ್ಯಕ್ತಿ ತನ್ನ ಪಾಡಿಗೆ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಇಂಗ್ಲೆಂಡ್ನ ಲಿವರ್ಪೂಲ್ನ ಗ್ರೇಟ್ ಹೋಮರ್ ಸ್ಟ್ರೀಟ್ನಲ್ಲಿ ಬಸ್ ನಿಲ್ದಾಣದ ಎದುರು ಕಾಯುತ್ತಿದ್ದ ಹೇಲಿ ಲೂಯಿಸ್ ಎಂಬ ವ್ಯಕ್ತಿ ಮನಸೋಇಚ್ಛೆ ಬಸ್ ಸ್ಟಾಪ್ನಲ್ಲೇ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬರ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋಗೆ ಟ್ವಿಟ್ಟರ್ನಲ್ಲಿ ಇಲ್ಲಿಯವರೆಗೆ ಸುಮಾರು 3 ಲಕ್ಷ ವೀಕ್ಷಣೆಗಳು ಮತ್ತು 5,600 ಲೈಕ್ಸ್ ಬಂದಿವೆ.
ಇದನ್ನೂ ಓದಿ: Viral Video: ಸತ್ತ ಗೆಳೆಯನನ್ನು ಹೂಳಲು ತಾವೇ ಬಾಯಿಯಿಂದ ಮಣ್ಣು ತೋಡಿದ ನಾಯಿಗಳು; ಕಣ್ತುಂಬುವ ವಿಡಿಯೋ ಇಲ್ಲಿದೆ
Viral News: ಶಾಪಿಂಗ್ ಮಾಡುವಾಗ ಗಂಡ ಕಿರಿಕಿರಿ ಮಾಡ್ತಾನಾ?; ಈ ಮಾಲ್ನಲ್ಲಿದೆ ಹಸ್ಬೆಂಡ್ ಸ್ಟೋರೇಜ್ ಪಾಡ್ಸ್