ಪುಷಪ್ಸ್​ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ

| Updated By: ಶ್ರೀದೇವಿ ಕಳಸದ

Updated on: Jan 25, 2023 | 11:51 AM

Pushups : ‘ಒಂದೇ ಸಲಕ್ಕೆ 15 ಪುಷಪ್ಸ್​ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ ನನಗೆ ಇದೇ ಗುರಿ!

ಪುಷಪ್ಸ್​ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ
ಮೊಮ್ಮಗಳೊಂದಿಗೆ ಪುಷಪ್ಸ್
Follow us on

Viral Video : ಏನು ಮಾಡಲೂ ಒಂದು ಸ್ಫೂರ್ತಿ ಬೇಕಲ್ಲವೆ? ಬರೀ ಗುರಿ ಸಾಕಾಗುವುದಿಲ್ಲ. ಅದರಲ್ಲೂ ವರ್ಕೌಟ್​ ಮಾಡುವುದಕ್ಕೆ ತುಸು ಜಾಸ್ತಿಯೇ ಸ್ಫೂರ್ತಿ ಬೇಕು. ಆಗ ಗುರಿಯೂ ಗರಿಗೆದರುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮಗುವನ್ನು ಬೆನ್ನ ಮೇಲೆ ಮಲಗಿಸಿಕೊಂಡು ಪುಷಪ್ಸ್ ತೆಗೆಯುತ್ತಿದ್ದಾನೆ ಈ ಅಜ್ಜ. ನೆಟ್ಟಿಗರು ಈ ಮುದ್ದಾದ ವಿಡಿಯೋ ನೋಡುತ್ತ, ನಾವೂ ಇನ್ನು ಮುಂದೆ ಹೀಗೆಲ್ಲ ಮಾಡುವುದೇ ಎಂದು ಸಂಕಲ್ಪ ತೊಡುತ್ತಿದ್ದಾರೆ.

ಸಂದೀಪ್​ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಒಂದೇ ಸಲಕ್ಕೆ 15 ಪುಷಪ್ಸ್​ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ 15 ಪುಷಪ್ಸ್​ ತೆಗೆಯುವ ಗುರಿ ಹೊಂದಿದ್ದೇನೆ ಎಂದಿದ್ದಾರೆ ಈ ವ್ಯಕ್ತಿ.

ಇದನ್ನೂ ಓದಿ : ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ

ಈಗಾಗಲೇ ಈ ವಿಡಿಯೋ ಅನ್ನು 33,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಮತ್ತೆ ಮತ್ತೆ ನೋಡುತ್ತ ಕಳೆದುಹೋಗುತ್ತಿದ್ದಾರೆ. ಈ ದಿನ ನೋಡಿದ ಸಾಕಷ್ಟು ವಿಡಿಯೋಗಳಲ್ಲಿ ಇದು ತುಂಬಾ ಇಷ್ಟವಾಯಿತು ಎಂದಿದ್ದಾರೆ ಕೆಲವರು. ನಾನೀಗ ನನ್ನ ಮೊಮ್ಮಕ್ಕಳೊಂದಿಗೆ ಹೀಗೆ ಪುಷಪ್ಸ್​ ತೆಗೆಯುವ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ಯಾರಿದೀರಿ? ‘ಸಾಂಬಾರ್’ ಅಂತೂ ಬಂದಿದೆ, ಇಡ್ಲಿನೋ ವಡಾನೋ ಕೊಟ್ಬಿಡಿ

ಆಹಾ ಮುದ್ದು ಸುರಿಯುತ್ತಿದೆ ಇಲ್ಲಿ ಎಂದು ಅನೇಕರು ಹೇಳಿದ್ದಾರೆ. ಅವಳು ನಿಮ್ಮನ್ನು ಹಿಡಿದುಕೊಂಡ ರೀತಿಯೇ ಬಹಳ ಆಪ್ತವಾಗಿದೆ ಎಂದಿದ್ಧಾರೆ ಹಲವರು. ಆಹಾ ಎಂಥ ಯಂಗ್​ ಅಜ್ಜ ಇವರು ಎಂದಿದ್ದಾರೆ ಮತ್ತೊಬ್ಬರು. ಸಂದೀಪ ಎನ್ನುವ ಇನ್ನೊಬ್ಬರು ಪಾರಿವಾಳದ ಮರಿಗಳನ್ನು ಬೆನ್ನ ಮೇಲೆ ಇಟ್ಟುಕೊಂಡು ಪುಷಪ್ಸ್ ತೆಗೆದ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ