New York: ಮಾಡೆಲ್ಗಳೆಂದರೆ ಸಾಮಾನ್ಯವಾಗಿ ರ್ಯಾಂಪ್ ಮೇಲಿರುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅವರು ಮಣ್ಣಿನೊಳಗಿದ್ದಾರೆ! ಹೌದು, ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ((New York Fashio Week) ಮಾಡೆಲ್ಗಳು ಮಡ್ ಫೈಟ್ ನಡೆಸಿದ್ದಾರೆ. ಈ ವಿಡಿಯೋ ಫ್ಯಾಷನ್ಪ್ರಿಯರ ಹುಬ್ಬೇರಿಸುವಂತೆ ಮಾಡಿದೆ. ಎಲೆನಾ ವೆಲೆಝ್ನ 2024ರ ಸ್ಪ್ರಿಂಗ್/ಸಮ್ಮರ್ ನ್ಯೂ ಕಲೆಕ್ಷನ್ ಪ್ರಸ್ತುತಿಗಾಗಿ ಮಾಡೆಲ್ಗಳು ಅಕ್ಷರಶಃ ಮಣ್ಣಿನಗುಂಡಿಗೆ ಇಳಿದಿದ್ದ ವಿಡಿಯೋ ಇದಾಗಿದೆ. ಈ ಫ್ಯಾಷನ್ ಷೋ ವಿಡಿಯೋ ಅನ್ನು ಇನ್ಸ್ಟಾಗ್ರಾಂನ @DietSabya ನಲ್ಲಿ ಹಂಚಿಕೊಳ್ಳಲಾಗಿದ್ದು ಮಾಡೆಲ್ಗಳು ಕೆಸರಿನಲ್ಲಿ ಬಿದ್ದೇಳುತ್ತಿರುವ ದೃಶ್ಯಗಳನ್ನು ನೆಟ್ಟಿಗರು ಅವಾಕ್ಕಾಗಿ ನೋಡುತ್ತಿದ್ದಾರೆ.
ಇದನ್ನೂ ಓದಿ : Viral Video: ಬಾಗ್ಮತಿ ನದಿಯ ಪ್ರವಾಹದ ಸುದ್ದಿ ಓದುವಾಗ ನಕ್ಕ ನಿರೂಪಕಿಯ ವಿಡಿಯೋ ವೈರಲ್
18 ಗಂಟೆಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 7,000ಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಸಾವಿರಾರು ಜನರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ಧಾರೆ. ರೆಸ್ಟೋರೆಂಟ್ ಬಿಲ್ ಯಾರು ಕೊಡುತ್ತಾರೆ ಎಂಬುದರ ಬಗ್ಗೆ ಇಡೀ ಫ್ಯಾಮಿಲಿಯೇ ಜಗಳಕ್ಕೆ ಬಿದ್ದಿದೆ ಎಂದು ಒಬ್ಬರು ತಮಾಷೆ ಮಾಡಿದ್ಧಾರೆ. ಇದರ ಔಚಿತ್ಯವೇನಿತ್ತು ಎಂದು ಮತ್ತೊಬ್ಬರು ಕೇಳಿದ್ದಾರೆ.
ತಾಯಿ ಆಚೆ ಹೋಗಿರುವಾಗ ಹಳ್ಳಿಮಕ್ಕಳು ಜಗಳಾಡುತ್ತಿವೆ ಎಂದಿದ್ದಾರೆ ಒಬ್ಬರು. ಝಾರಾನಲ್ಲಿ ಮೊದಲ ದಿನದ ಸೇಲ್ ಎಂದಿದ್ದಾರೆ ಇನ್ನೊಬ್ಬರು. ಇದು ಬಿಗ್ ಬಾಸ್ ಟ್ರೇಲರ್ ಎಂದು ನಾ ಅನ್ಕೊಂಡೆ ಎಂದಿದ್ದಾರೆ ಮತ್ತೊಬ್ಬರು. ನಾನು ಜುಹೂ ಬೀಚಿನಲ್ಲಿ ನಮ್ಮ ಹುಡುಗರೊಂದಿಗೆ ಮರಳಿನ ಗೋಪುರ ಕಟ್ಟುತ್ತಿದ್ದೇನೆ ಎಂದು ಮಗದೊಬ್ಬರು. ಸರೋಜಿನಿ ಲೂಟ್, ಬನ್ನಿ ಬನ್ನಿ ಎಲ್ಲಾ ನೂರು ರೂಪಾಯಿಗೆ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್ ಬ್ಯೂಟಿಫುಲ್’ ನೀಹಾರ್ ಸಚದೇವ್
ಭಾನುವಾರದಂದು ಸರೋಜಿನಿಯಲ್ಲಿರುವ ಹುಡುಗಿಯರು ಎಂದಿದ್ದಾರೆ ಒಬ್ಬರು. ಬ್ರೌನ್ ಫ್ಯಾಮಿಲಿ ತುಂಡು ಭೂಮಿಗಾಗಿ ಫೈಟ್ ಮಾಡುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಇದು ನಾನೇ ಲಂಚ್ ಬ್ರೇಕ್ನಲ್ಲಿ ಎಂದಿದ್ದಾರೆ ಮತ್ತೊಬ್ಬರು. ಸ್ಲೀಪ್ಲೆಂಬರ್ ಲಾಸ್ಟ್ ಸೇಲ್ನ ಕೊನೆಯ ದಿನ ಇದು! ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ