Viral: ನ್ಯಾಚುರಲ್ ಆಗಿ ಸೇಬು ಹಣ್ಣಿನ ಜ್ಯೂಸ್ ಮಾಡೋದನ್ನು ನೋಡಿದ್ದೀರಾ?

ಸಾಮಾನ್ಯವಾಗಿ ಸೇಬು ಅಥವಾ ಯಾವುದೇ ಹಣ್ಣಿನ ಜ್ಯೂಸ್‌ಗಳಿಗೆ ಸಕ್ಕರೆ ಇತ್ಯಾದಿ ವಸ್ತುಗಳನ್ನು ಮಿಕ್ಸ್‌ ಮಾಡಿ ತಯಾರಿಸಲಾಗುತ್ತದೆ. ಆದ್ರೆ ನ್ಯಾಚುರಲ್‌ ಮತ್ತು ಫ್ರೆಶ್‌ ಆಗಿರುವಂತಹ ಸೇಬು ಹಣ್ಣಿನ ಜ್ಯೂಸ್‌ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ನೀವೆಂದಾದರೂ ನೋಡಿದ್ದೀರಾ? ಹಾಗಿದ್ರೆ ಈ ವೈರಲ್‌ ವಿಡಿಯೋವನ್ನೊಮ್ಮೆ ನೋಡಿ….

ಸೇಬು ಹೇಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅದೇ ರೀತಿ ಆಪಲ್‌ ಜ್ಯೂಸ್‌ ಕೂಡಾ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು. ಹೆಲ್ತ್‌ಗೆ ಒಳ್ಳೆಯದು ಅಂತ ಹೇಳಿ ಹೆಚ್ಚಿನವರು ಫ್ರೆಶ್‌ ಜ್ಯೂಸ್‌ ಬದಲಾಗಿ ಅಂಗಡಿಯಲ್ಲಿ ಸಿಗುವಂತಹ ಸಕ್ಕರೆ ಮಿಶ್ರಿತ ಆಪಲ್‌ ಜ್ಯೂಸ್‌ ಅನ್ನು ಕುಡಿತಾರೆ. ಆದ್ರೆ ನೀವು ಯಾವತ್ತಾದ್ರೂ ಫ್ರೆಶ್‌ ಆಂಡ್‌ ನ್ಯಾಚುರಲ್‌ ಆಗಿರುವಂತಹ ಸೇಬು ಹಣ್ಣಿನ ಜ್ಯೂಸ್‌ ಹೇಗಿರುತ್ತೆ? ಫ್ರೆಶ್‌ ಆಗಿರುವಂತಹ ಈ ಜ್ಯೂಸ್‌ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ನೋಡಿದ್ದೀರಾ? ಹಾಗಿದ್ರೆ ಈ ವೈರಲ್‌ ವಿಡಿಯೋವನ್ನು ನೋಡಿ. ಇಲ್ಲಿ ನ್ಯಾಚುರಲ್‌ ಆಗಿರುವಂತಹ ಸೇಬು ಹಣ್ಣಿನ ಜ್ಯೂಸ್‌ ಹೇಗೆ ತಯಾರಾಗುತ್ತದೆ ಎಂಬುದನ್ನು ತೋರಿಸಲಾಗಿದೆ.

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ನ್ಯಾಚುರಲ್‌ ಆಪಲ್‌ ಜ್ಯೂಸ್‌ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಕುರಿತ ವಿಡಿಯೋವನ್ನು nourisg.hq ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ತೋಟದಿಂದ ಫ್ರೆಶ್‌ ಸೇಬು ಹಣ್ಣುಗಳನ್ನು ಕಿತ್ತು ತಂದು ಅದನ್ನು ಕಟ್‌ ಮಾಡಿ, ನಂತರ ಅದನ್ನು ಒಂದು ಮಿಷಿನ್‌ನಲ್ಲಿ ಹಾಕಿ ಸ್ಮ್ಯಾಶ್‌ ಮಾಡಿ ಬಳಿಕ ಅದನ್ನು ಮ್ಯಾನ್ಯುವಲ್‌ ಜ್ಯೂಸ್‌ ಪ್ರೆಸ್‌ಗೆ ಹಾಕಿ ಸಕ್ಕರೆ ಅಥವಾ ಯಾವುದೇ ವಸ್ತುವನ್ನು ಮಿಶ್ರಣ ಮಾಡದೇ ಫ್ರೆಶ್‌ ಆಂಡ್‌ ನ್ಯಾಚುರಲ್‌ ಆಗಿರುವಂತಹ ಸೇಬು ಹಣ್ಣಿನ ರಸವನ್ನು ತಯಾರಿಸಿದಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಮೂಲಕ ತಾನು ಕೆಲಸ ಮಾಡೋ ಆಫೀಸಿಗೆ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಿದ ವ್ಯಕ್ತಿ; ಮುಂದೆ ನಡೆದದ್ದೇ ಬೇರೆ

ಕೆಲ ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 34.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್‌ ಇದಂತೂ ತುಂಬಾನೇ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಹಾ ಎಷ್ಟೊಂದು ಸುಂದರವಾಗಿದೆ, ನನಗೂ ಇಂತಹ ಜೀವನ ಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us