ಭವ್ಯ ರಾಮ ಮಂದಿರದ ನಿರ್ಮಾಣವು ಕೋಟ್ಯಾಂತರ ರಾಮ ಭಕ್ತರ ಕನಸಾಗಿದ್ದು, ಈ ಕನಸು ಇನ್ನೂ ಕೆಲವೇ ದಿನಗಳಲ್ಲಿ ನನಸಾಗುತ್ತಿದೆ. ಈ ನಡುವೆ ಮುದ್ದಾದ ಫೋಟೋವೊಂದು ವೈರಲ್ ಆಗಿದ್ದು, ಅಯೋಧ್ಯೆ ನಗರಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ್ದೀರಿ ಅಲ್ವಾ, ನನ್ನ ಜನ್ಮಸ್ಥಳವಾದ ಮಥುರಾದಲ್ಲಿ ಕೃಷ್ಣ ಮಂದಿರವನ್ನು ಯಾವಾಗ ನಿರ್ಮಾಣ ಮಾಡುತ್ತೀರಾ ಎಂದು ಬಾಲ ಕೃಷ್ಣ ಹುಸಿ ಕೋಪದಲ್ಲಿ ಕುಳಿತಿರುವಂತ ಮುದ್ದಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಪೋಸ್ಟ್ ಅನ್ನು ಚಕ್ರವರ್ತಿ ಸುಲಿಬೆಲೆ (@Chakravarty Sulinele) ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ನೀನು ಏಕೆ ಕೋಪಗೊಂಡಿದ್ದೀಯಾ ಕೃಷ್ಣಾ, ಮುಂದಿನ ವರ್ಷ ಮೋದಿಯವರು ಮಥುರಾದಲ್ಲಿ ನಿಮ್ಮ ಮಂದಿರವನ್ನು ಸಹ ಕಟ್ಟಿಸುತ್ತಾರೆ ಸ್ವಲ್ಪ ನಗು ನೋಡೋಣ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಫೋಟೋದಲ್ಲಿ ಬೇಜಾರಿನಲ್ಲಿ ಕುಳಿತಿರುವಂತಹ ಬಾಲ ಕೃಷ್ಣನನ್ನು ತಾಯಿ ಸಮಾಧಾನ ಪಡಿಸುವ ಮುದ್ದಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ವಿಮಾನದೊಳಗೆ ಹೋಗುತ್ತಿದ್ದಂತೆ ತಾಯಿ-ಮಗಳಿಗೆ ಕಾದಿತ್ತು ಅಚ್ಚರಿ, ಅದೃಷ್ಟ ಅಂದ್ರೆ ಇದಪ್ಪ
Why You are angry Krishna, next year Modi will build your temple in Mathura.. now smile🙂@narendramodi pic.twitter.com/uYgtQQ3Pyv
— Chakravarty Sulibele (@astitvam) January 10, 2024
ಜನವರಿ 10ರಂದು ಹಂಚಿಕೊಳ್ಳಲಾದ ಈ ಫೊಸ್ಟ್ 34 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಲೈಕ್ಸ್ ಮತ್ತು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರುʼಬಹಳ ಸುಂದರವಾದ ಶೀರ್ಷಿಕೆಯನ್ನು ಬರೆದುಕೊಂಡಿದ್ದೀರಾʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಆದಷ್ಟು ಬೇಗ ಆಗಲಿ ಎಂದು ನಾನು ಬಯಸುತ್ತೇನೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಾಲ ಕೃಷ್ಣನ ಫೋಟೋ ಬಹಳ ಮುದ್ದಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಪೋಸ್ಟ್ಗೆ ಮೆಚ್ಚುಗೆಯನ್ನು ನೀಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ