20 ರಿಂದ 30 ವರ್ಷ ವಯಸ್ಸಿನ ಅಂತರದಲ್ಲಿ ಪ್ರೀತಿ ಹುಟ್ಟಿ ವಿವಾಹವಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದೇ ರೀತಿ ಇಲ್ಲೊಬ್ಬಳು ಯುವತಿ ತನಗಿಂತ 15 ವರ್ಷ ಹಿರಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾಳೆ. ಆದ್ರೆ ತನ್ನನ್ನು 4 ವರ್ಷದ ಬಾಲಕಿಯಿಂದಲೇ ಸಾಕಿದ ವ್ಯಕ್ತಿಯಲ್ಲೇ ಮದುವೆಯಾಗಿರುವುದು ಇದೀಗಾ ಚರ್ಚೆಗೆ ಗ್ರಾಸವಾಗಿದೆ.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಯುವತಿಯ ಹೆಸರು ಸಮಂತಾ ಗೀಸಾಲ್(29). ಈಕೆ 44 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಅವರ ನಡುವೆ 15 ವರ್ಷಗಳ ವಯಸ್ಸಿನ ಅಂತರವಿದೆ. ಈ ವ್ಯಕ್ತಿ ಸಮಂತಾಳನ್ನು ಕೇವಲ ನಾಲ್ಕು ವರ್ಷದ ಮಗುವಾಗಿದ್ದಾಗಿನಿಂದ ಸಾಕುತ್ತಿದ್ದಾನೆ. ಇತ್ತೀಚೆಗಷ್ಟೇ ಸಮಂತಾ ತಾನು ಚಿಕ್ಕವಳಾಗಿದ್ದಾಗ ಮತ್ತು ಇತ್ತೀಚೆಗೆ ಮದುವೆಯಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. ಬಾಲ್ಯದ ಫೋಟೋದಲ್ಲಿ ಆಕೆಗೆ 4 ವರ್ಷ ಮತ್ತು ಆಕೆಯ ಪತಿಗೆ 19,ಮತ್ತು ಆತ ಸಮಂತಾಳನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದು. ಎರಡನೇ ಫೋಟೋದಲ್ಲಿ ಅವರ ಮದುವೆಯ ಸಮಯದಲ್ಲಿ, ಸಮಂತಾಗೆ 29 ವರ್ಷ, ಪತಿಗೆ 44 ವರ್ಷವಿರುವುದನ್ನು ಕಾಣಬಹುದು.
ಇದನ್ನೂ ಓದಿ: 2023ರಲ್ಲಿ ‘ಸೆಕ್ಸ್’ ಕುರಿತು ಗೂಗಲ್ನಲ್ಲಿ ಹೆಚ್ಚು ಹುಡುಕಾಡಿದ ಪ್ರಶ್ನೆಗಳು ಯಾವುದು ಗೊತ್ತಾ?
ಈಗ ಇವರಿಬ್ಬರ ವಿಚಿತ್ರ ಸಂಬಂಧವನ್ನು ನೆಟ್ಟಿಗರು ಕಾಮೆಂಟ್ ಮೂಲಕ ಟೀಕಿಸಿದ್ದಾರೆ. ಆತ ಪೋಷಕರ ಸ್ಥಾನದಲ್ಲಿ ಆಕೆಯನ್ನೇ ಮದುವೆಯಾಗಿರುವುದು ಸರಿಯಲ್ಲ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:29 pm, Sun, 31 December 23