ಈ ವರ್ಷ ವಿವಾಹವಾದ ತಾರೆಯರು ಇವರೇ ನೋಡಿ

Celebrity Marriage: ಈ ವರ್ಷ ಹಲವಾರು ಸೆಲೆಬ್ರಿಟಿ ನಟ-ನಟಿಯರು, ಸ್ಟಾರ್​ಗಳ ಮಕ್ಕಳು ಹಸೆಮಣೆ ಏರಿದ್ದಾರೆ. 2023ರಲ್ಲಿ ವಿವಾಹ ಬಂಧನಕ್ಕೆ ಒಳಗಾದ ನಟ-ನಟಿಯರ ಪಟ್ಟಿ ಇಲ್ಲಿದೆ...

ಈ ವರ್ಷ ವಿವಾಹವಾದ ತಾರೆಯರು ಇವರೇ ನೋಡಿ
ಸೆಲೆಬ್ರಿಟಿ ಮದುವೆ
Follow us
ಮಂಜುನಾಥ ಸಿ.
| Updated By: Digi Tech Desk

Updated on:Dec 29, 2023 | 3:52 PM

ಈ ವರ್ಷವೂ ಸಹ ಹಲವು ಸಿನಿಮಾ ತಾರೆಯರು ವಿವಾಹ ಬಂಧನಕ್ಕೆ ಒಳಗಾದರು. ಕೆಲವು ಭಾರಿ ಅದ್ಧೂರಿ ವಿವಾಹಗಳೇ ನಡೆದವು. ಕೆಲವರು ಸರಳತೆ ಮೆರೆದರು. ಈ ವರ್ಷ ಸ್ಯಾಂಡಲ್​ವುಡ್​ನಲ್ಲಿಯೂ ಹಲವು ತಾರೆಯರು, ತಾರೆಯರ ಮಕ್ಕಳು ಮದುವೆಯಾದರು (ಅದರ ಪಟ್ಟಿ ಇಲ್ಲಿದೆ). ಸ್ಯಾಂಡಲ್​ವುಡ್ ಹೊರತಾಗಿ ಇತರೆ ಚಿತ್ರರಂಗಕ್ಕೆ ಸೇರಿದ ಸೆಲೆಬ್ರಿಟಿಗಳು ಯಾರ್ಯಾರು ಈ ವರ್ಷ ಮದುವೆಯಾದರು? ಇಲ್ಲಿದೆ ನೋಡಿ ಪಟ್ಟಿ…

ಕಿಯಾರಾ-ಸಿದ್ಧಾರ್ಥ್

ಈ ವರ್ಷ ಸಖತ್ ಗಮನ ಸೆಳೆದಿದ್ದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾರ ವಿವಾಹ. ಈ ತಾರಾ ಜೋಡಿಯ ವಿವಾಹ ಬಹು ಅದ್ಧೂರಿಯಾಗಿ ರಾಜಸ್ಥಾನದ ಜೈಸ್ಮೆಲರ್​ನಲ್ಲಿ ಫೆಬ್ರವರಿ 7ಕ್ಕೆ ನೆರವೇರಿತು. ಬಾಲಿವುಡ್​ನ ಹಲವು ತಾರೆಯರು ಈ ಜೋಡಿಯ ವಿವಾಹ ಕಾರ್ಯದಲ್ಲಿ ಭಾಗಿಯಾಗಿದ್ದರು.

ಕೆಎಲ್ ರಾಹುಲ್-ಆಥಿಯಾ ಶೆಟ್ಟಿ

ಕ್ರಿಕೆಟ್-ಮನೊರಂಜನೆ ಕ್ಷೇತ್ರದ ‘ದಾಂಪತ್ಯ’ ಪರಂಪರೆಯನ್ನು ಈ ವರ್ಷ ಮುಂದಕ್ಕೆ ಕೊಂಡೊಯ್ದವರು ಖ್ಯಾತ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ. ಸುನಿಲ್ ಶೆಟ್ಟಿಯ ಪುತ್ರಿ ಆಥಿಯಾ ಶೆಟ್ಟಿಯನ್ನು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಕೆಎಲ್ ರಾಹುಲ್ ಜನವರಿ 23ಕ್ಕೆ ವಿವಾಹವಾದರು. ಇವರ ವಿವಾಹ ಕಾರ್ಯ ಸುನಿಲ್ ಶೆಟ್ಟಿಯ ಖಂಡಾಲಾ ಫಾರ್ಮ್​ ಹೌಸ್​ನಲ್ಲಿ ನಡೆಯಿತು.

ಇದನ್ನೂ ಓದಿ:Year Ender 2023: ‘ದಿ ಕೇರಳ ಸ್ಟೋರಿ’ಯಿಂದ ಕೇಸರಿ ಬಿಕಿನಿ ತನಕ: 2023ರಲ್ಲಿ ಬಾಲಿವುಡ್​ ಮಂದಿಯ ವಿವಾದ ಒಂದೆರಡಲ್ಲ

ವರುಣ್ ತೇಜ್-ಲಾವಣ್ಯಾ ತ್ರಿಪಾಠಿ

ಟಾಲಿವುಡ್​ನ ಮೆಗಾ ಫ್ಯಾಮಿಲಿಯ ಕುಡಿ, ಟಾಲಿವುಡ್​ನ ಜನಪ್ರಿಯ ನಾಯಕ ನಟ ವರುಣ್ ತೇಜ್, ನಟಿ ಲಾವಣ್ಯಾ ತ್ರಿಪಾಠಿಯನ್ನು ವರಿಸಿದರು. ಇವರಿಬ್ಬರ ವಿವಾಹ ಇಟಲಿಯಲ್ಲಿ ಬಲು ಅದ್ಧೂರಿಯಾಗಿ ನಡೆಯಿತು. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಇನ್ನೂ ಹಲವಾರು ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ

ಕ್ರಿಕೆಟ್-ಸಿನಿಮಾದ ನಂಟಿನಂತೆ ರಾಜಕೀಯ-ಸಿನಿಮಾದ ನಂಟೂ ಸಹ ಹಲವು ದಶಕಗಳಿಂದ ಜಾರಿಯಲ್ಲಿದೆ. ಈ ವರ್ಷ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಹಾಗೂ ಎಎಪಿ ಪಕ್ಷದ ಮುಖಂಡ, ಸಂಸದ ರಾಘವ್ ಚಡ್ಡಾ ವಿವಾಹವಾದರು. ಇವರಿಬ್ಬರ ವಿವಾಹ ರಾಜಸ್ಥಾನದ ಉದಯ್​ಪುರದ ಲೀಲಾ ಪ್ಯಾಲೇಸ್​ನಲ್ಲಿ ಸೆಪ್ಟೆಂಬರ್ 24ರಂದು ಅದ್ಧೂರಿಯಾಗಿ ನಡೆಯಿತು.

ಇದನ್ನೂ ಓದಿ:Year Ender 2023: ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳು ಇವರು..

ಶರ್ವಾನಂದ-ರಕ್ಷಿತಾ ರೆಡ್ಡಿ

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಾಯಕ ನಟರಾಗಿ ಗುರುತಿಸಿಕೊಂಡಿರುವ ಶರ್ವಾನಂದ ಜೂನ್ 3ನೇ ತಾರೀಖು ತಮ್ಮ ಪ್ರೇಯಸಿ ರಕ್ಷಿತಾ ರೆಡ್ಡಿಯೊಡನೆ ರಾಜಸ್ಥಾನದ ಜೈಪುರದಲ್ಲಿ ಅದ್ಧೂರಿಯಾಗಿ ವಿವಾಹವಾದರು. ವಿದೇಶದಲ್ಲಿ ಐಟಿ ಉದ್ಯೋಗಿ ಆಗಿರುವ ರಕ್ಷಿತಾ ರೆಡ್ಡಿ ಹಾಗೂ ಶರ್ವಾನಂದ ಬಹು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.

ರಣ್​ದೀಪ್ ಹೂಡಾ- ಲಿನ್ ಲೈಶ್ರಾಮ್

ಬಾಲಿವುಡ್​ ನಟ ರಣ್​ದೀಪ್ ಹೂಡಾ ಮಾಡೆಲ್ ಲಿನಾ ಲೈಶ್ರಾಮ್ ಜೊತೆ ವಿವಾಹ ಬಂಧನಕ್ಕೆ ಒಳಗಾದರು. ಅವರ ವಿವಾಹವು ಮಣಿಪುರದ ಇಂಫಾಲದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು. ರಣ್​ದೀಪ್ ಹೂಡಾ ವಿವಾಹ ಕಾರ್ಯಕ್ಕೆ ಕುಟುಂಬವರು, ಕೆಲವು ಆಪ್ತ ಮಿತ್ರರು ಪಾಲ್ಗೊಂಡಿದ್ದರು.

ಆಶಿಷ್ ವಿದ್ಯಾರ್ಥಿ-ರೂಪಾಲಿ

57 ವರ್ಷದ ನಟ ಆಶಿಷ್ ವಿದ್ಯಾರ್ಥಿ, ಫ್ಯಾಷನ್ ಡಿಸೈನರ್, ಮಾಡೆಲ್ ಆಗಿರುವ ರೂಪಾಲಿ ಅವರೊಟ್ಟಿಗೆ ಇದೇ ವರ್ಷ ಸರಳವಾಗಿ ವಿವಾಹವಾದರು. ಇದು ಅವರಿಗೆ ಎರಡನೇ ವಿವಾಹ. ರೂಪಾಲಿಯವರಿಗೂ ಸಹ. ನ್ನ ಬದುಕಿನ ಈ ಹಂತದಲ್ಲಿ ರುಪಾಲಿಯನ್ನು ವಿವಾಹವಾಗಿದ್ದು ಅದ್ಭುತ ಎಂದು ಅನಿಸುತ್ತಿದೆ. ‘ನಾವು ಕೋರ್ಟ್ ಮ್ಯಾರೇಜ್ ಆಗಿದ್ದು, ಸಂಜೆ ಆತ್ಮೀಯರಿಗಾಗಿ ಔತಣಕೂಟವಿದೆ” ಎಂದು ಮದುವೆಯ ದಿನ ಆಶಿಶ್ ವಿದ್ಯಾರ್ಥಿ ಹೇಳಿದ್ದರು. ತಮ್ಮ ಮೊದಲ ಪತ್ನಿಯೊಟ್ಟಿಗೆ ವಿಚ್ಛೇದನ ಪಡೆದುಕೊಂಡ ವಿಷಯವನ್ನು ಆ ಬಳಿಕ ವಿಡಿಯೋ ಮೂಲಕ ಖಾತ್ರಿಪಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Fri, 29 December 23

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು