
ಮೂಕ ಪ್ರಾಣಿಗಳ ಹಸಿವು ಹಾಗೂ ದಾಹವನ್ನು ಅರಿತುಕೊಂಡು ಅವುಗಳಿಗೆ ಆಹಾರ ನೀಡುವ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ಯುವಕನೊಬ್ಬ ಬಾಯಾರಿಕೆಯಿಂದ ಬಳಲುತ್ತಿದ್ದ ಕೋತಿ ಮರಿಗೆ (baby monkey) ಬಾಟಲಿ ನೀರು ಕುಡಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.
ಕಾರ್ತಿಕ್ ಪೂಜಾರಿ (Kartik Poojary) ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಒಂದು ಸಣ್ಣ ದಯೆಯುಳ್ಳ ಕಾರ್ಯವು ಅಮಾಯಕ ಜೀವವೊಂದನ್ನು ಉಳಿಸಬಲ್ಲದು ಎಂದು ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವಕನು ಬಾಯಾರಿಕೆಯಿಂದ ಬಳಲುತ್ತಿದ್ದ ಕೋತಿ ಮರಿಗೆ ಬಾಟಲಿ ನೀರು ಕುಡಿಸುವುದನ್ನು ಕಾಣಬಹುದು. ಕೋತಿ ಮರಿ ನೀರು ಕುಡಿದು ದಾಹವನ್ನು ತೀರಿಸಿಕೊಂಡಿದೆ.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಬೊಗಸೆಯಲ್ಲಿ ನೀರು ಕುಡಿಸಿ ದಾಹ ತೀರಿಸಿದ ಯುವಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಅರಣ್ಯ ಉಳಿಸಿ, ಪ್ರಾಣಿಗಳನ್ನು ಉಳಿಸಿ, ನೀರು ಉಳಿಸಿ ಎಂದಿದ್ದಾರೆ. ಇನ್ನೊಬ್ಬರು, ದೇವರು ಅಣ್ಣ ನೀವು ಎಂದು ಒಳ್ಳೆತನವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಬ್ಬರು, ತಂತ್ರಜ್ಞಾನ ಎಷ್ಟೇ ಮುಂದುವರೆದ್ರು ಜೀವಸಂಕುಲದಲ್ಲಿ ಮನುಷ್ಯನಾದರೂ, ಪ್ರಾಣಿಗಳಾದರೂ ದಾಹ ತೀರಿಸಲು ನೀರೊಂದೇ ಪರಿಹಾರ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ