AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ ಎಂದ ರಂಜಿತ್ ತಾಯಿ

ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ ಎಂದ ರಂಜಿತ್ ತಾಯಿ

ರಾಮು, ಆನೇಕಲ್​
| Edited By: |

Updated on: Mar 27, 2026 | 9:42 PM

Share

ಆನೇಕಲ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣದಲ್ಲಿ ಭಾವನಿಂದಲೇ ಬಾಮೈದ ಕೊಲೆಯಾಗಿದ್ದಾನೆ. ಮದುವೆಯಾದ ಕೇವಲ ಮೂರು ತಿಂಗಳಲ್ಲೇ ತನ್ನ ವಿವಾಹಿತ ತಂಗಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಬಾಮೈದನನ್ನು ಕೊಲೆ ಮಾಡಲಾಗಿದೆ. ಘಟನೆ ಕುರಿತು ಮೃತನ ತಾಯಿ ನೋವು ತೋಡಿಕೊಂಡಿದ್ದು, ಕೊಲೆ ಆರೋಪಿ ಶ್ರೀನಿವಾಸ್ ಪೊಲೀಸರಿಗೆ ಶರಣಾಗಿದ್ದಾನೆ.

ಆನೇಕಲ್, ಮಾರ್ಚ್ 27: ಭಾವನೇ ಬಾಮೈದನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ರಂಜಿತ್ ತಾಯಿ ಪ್ರತಿಕ್ರಿಯಿಸಿದ್ದು, ಈ ಘಟನೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ತಮ್ಮ ಮಗನನ್ನು ಅಳಿಯ ಶ್ರೀನಿವಾಸ್​ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ತಮ್ಮ ಮಗ ಮತ್ತು ಶ್ರೀನಿವಾಸ್‌ನ ತಂಗಿ ಕೋಮಲ್​ ಇಬ್ಬರು ಓಡಿಹೋಗಿ ಹೈದರಾಬಾದ್‌ನಲ್ಲಿ ಒಂದು ತಿಂಗಳು ಇದ್ದು, ಬಳಿಕ ವಾಪಸ್ ಬಂದಿದ್ದರು. ಕೊಲೆ ನಡೆದ ರಾತ್ರಿ, ನವೀನ್ ಮತ್ತು ಶ್ರೀನಿವಾಸ್ ಸೇರಿದಂತೆ ನಾಲ್ವರು ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಾಯಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us