AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ಶಾಸಕ ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ

ವಿಜಯಪುರ ಶಾಸಕ ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Mar 27, 2026 | 10:02 PM

Share

ಕೋಲಾರದಲ್ಲಿ ನಡೆದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಎಂ.ಜಿ.ರಸ್ತೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಂದ ಆಯೋಜಿಸಲಾದ 10ನೇ ವರ್ಷದ ರಾಮೋತ್ಸವದಲ್ಲಿ ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಮುನಿಸ್ವಾಮಿ, ನಾಗಲಾಪುರ ಮಠದ ತೇಜೇಶಲಿಂಗ ಶಿವಚಾರ್ಯ ಸ್ವಾಮಿಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಯತ್ನಾಳ್ ಅವರನ್ನು ಹಿಂದುತ್ವದ ನಾಯಕ ಎಂದು ಸ್ವಾಗತಿಸಲಾಯಿತು.

ಕೋಲಾರ, ಮಾರ್ಚ್​​ 27: ನಗರದಲ್ಲಿ ಶ್ರೀರಾಮನವಮಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿದ್ದರು. ಎಂ.ಜಿ.ರಸ್ತೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಆಯೋಜಿಸಿದ್ದ 10ನೇ ವರ್ಷದ ರಾಮೋತ್ಸವ ಸಮಾರಂಭ ಇದಾಗಿತ್ತು. ಈ ಸಂದರ್ಭದಲ್ಲಿ ಬೃಹತ್ ಶ್ರೀರಾಮ ಶೋಭಾಯಾತ್ರೆಗೆ ಯತ್ನಾಳ್ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಮುನಿಸ್ವಾಮಿ, ನಾಗಲಾಪುರ ಮಠದ ತೇಜೇಶಲಿಂಗ ಶಿವಚಾರ್ಯ ಸ್ವಾಮಿಜಿ, ಶ್ರೀರಾಮಸೇನೆಯ ಶ್ರೀನಿವಾಸ್ ಗುರೂಜಿ ಸೇರಿದಂತೆ ಹಲರು ಉಪಸ್ಥಿತರಿದ್ದರು. ವಿಜಯಪುರ ಶಾಸಕರನ್ನು ನೋಡಲು ಜನಸಾಗರವೇ ಕಾರ್ಯಕ್ರಮಕ್ಕೆ ಹರಿದುಬಂದಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 27, 2026 09:59 PM
Follow Us