10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಹತ್ತು ದಿನ ಮುಂಚಿತವಾಗಿಯೇ ಸಂಭ್ರಮಾಚರಣೆ ಆರಂಭವಾಗಿದೆ. ರಾಜ ಗಣೇಶ ಮೂರ್ತಿಯನ್ನು ಚವಾಟ್ ಗಲ್ಲಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ನಗರದಾದ್ಯಂತ ಭವ್ಯ ಮೆರವಣಿಗೆಯೊಂದಿಗೆ ಹಬ್ಬದ ವಾತಾವರಣ ಮನೆಮಾಡಿದ್ದು, ಭಕ್ತರು ಭಕ್ತಿಭಾವದಿಂದ ಗಣೇಶನನ್ನು ಸ್ವಾಗತಿಸಿದರು. ಈ ಬಾರಿಯ ಗಣೇಶೋತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಬೆಳಗಾವಿ ನಗರವು ಈಗಾಗಲೇ ಸಜ್ಜಾಗಿದೆ.
ಬೆಳಗಾವಿ, ಸೆಪ್ಟೆಂಬರ್ 05: ನಗರವು ಗಣೇಶ ಚತುರ್ಥಿ ಹಬ್ಬದ ಸಂಭ್ರಮಕ್ಕೆ ಹತ್ತು ದಿನಗಳ ಮೊದಲೇ ಸಾಕ್ಷಿಯಾಗಿದೆ. ಭಕ್ತಿ ಮತ್ತು ಉತ್ಸಾಹದಿಂದ ನಗರದಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬೆಳಗಾವಿಯ ಪ್ರಮುಖ ಆಕರ್ಷಣೆಯಾದ ರಾಜಾ ಗಣೇಶ ಮೂರ್ತಿಯ ಆಗಮನವು ಚವಾಟ್ ಗಲ್ಲಿಯಲ್ಲಿ ಅದ್ಧೂರಿಯಾಗಿ ಜರುಗಿತು.
ಈ “ಆಗಮನ ಸೋಳಾ” (ಆಗಮನ ಮೆರವಣಿಗೆ) ಕೇವಲ ಚವಾಟ್ ಗಲ್ಲಿಗೆ ಮಾತ್ರ ಸೀಮಿತವಾಗಿರದೆ, ಇಡೀ ಬೆಳಗಾವಿ ನಗರದ ಗೋವಾವೇಸ್, ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಸಾಗಿತು. ಸಾವಿರಾರು ಭಕ್ತರು ರಾಜಾ ಗಣೇಶನನ್ನು ಭಕ್ತಿ ಭಾವದಿಂದ ಸ್ವಾಗತಿಸಿ, ಆಶೀರ್ವಾದ ಪಡೆದರು. ಈ ಬಾರಿಯ ಗಣೇಶೋತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಬೆಳಗಾವಿ ನಗರವು ಈಗಾಗಲೇ ಸಜ್ಜಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

