AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ಜೀವ ಉಳಿಸಲು ನೆರವಾಯ್ತು ಬಿಎಂಆರ್​​ಸಿಎಲ್

ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ಜೀವ ಉಳಿಸಲು ನೆರವಾಯ್ತು ಬಿಎಂಆರ್​​ಸಿಎಲ್

ಕಿರಣ್​ ಸೂರ್ಯ
| Edited By: |

Updated on: Oct 14, 2026 | 7:26 PM

Share

ಮುಖ್ಯಾಂಶಗಳು

  • ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ
  • ಮೆಟ್ರೋ ಅಧಿಕಾರಿಗಳಿಂದ ಸೂಕ್ತ ವ್ಯವಸ್ಥೆ
  • 18 ನಿಮಿಷಗಳಲ್ಲಿ ಯಶಸ್ವಿಯಾಗಿ ಹೃದಯ ಸಾಗಾಟ

ನಮ್ಮ ಮೆಟ್ರೋ ರೈಲಿನಲ್ಲಿ ಜೀವಂತ ಹೃದಯವನ್ನು ಯಶಸ್ವಿಯಾಗಿ ಸಾಗಿಸಲಾಗಿದೆ. ಯಶವಂತಪುರದ ಸ್ಪರ್ಶ ಆಸ್ಪತ್ರೆಯಿಂದ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಕೇವಲ 18 ನಿಮಿಷಗಳಲ್ಲಿ ಹೃದಯ ತಲುಪಿಸಿದ್ದು, BMRCL ಈ ಪ್ರಮುಖ ಕಾರ್ಯಕ್ಕೆ ನೆರವು ನೀಡಿದೆ. ಟ್ರಾಫಿಕ್ ಸಮಸ್ಯೆ ತಪ್ಪಿಸಲು ವೈದ್ಯರು ಮೆಟ್ರೋ ಮಾರ್ಗ ಬಳಸಿದ್ದು, ಇದು ನಮ್ಮ ಮೆಟ್ರೋದಲ್ಲಿ ನಡೆದ ಆರು ಪ್ರಮುಖ ಅಂಗಾಂಗ ಸಾಗಾಟಗಳಲ್ಲಿ ಒಂದಾಗಿದೆ.

ಬೆಂಗಳೂರು, ಅಕ್ಟೋಬರ್​ 14: ನಮ್ಮ ಮೆಟ್ರೋ ರೈಲಿನಲ್ಲಿ ಜೀವಂತ ಹೃದಯವನ್ನು ಯಶಸ್ವಿಯಾಗಿ ಸಾಗಾಟ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಯಶವಂತಪುರದ ಸ್ಪರ್ಶ ಆಸ್ಪತ್ರೆಯಿಂದ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ 18 ನಿಮಿಷಗಳಲ್ಲಿ ಮೆಟ್ರೋ ರೈಲಿನಲ್ಲಿ ಹೃದಯವನ್ನು ಯಶಸ್ವಿಯಾಗಿ ಸಾಗಿಸಲಾಗಿದೆ. ಇಂದು ಮಧ್ಯಾಹ್ನ 2:22 ಗಂಟೆಗೆ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ಹೊರಟ ಮೆಟ್ರೋ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಕ್ಕೆ 2:40ಕ್ಕೆ ಬಂದು ತಲುಪಿತು. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಮೆಟ್ರೋ ರೈಲಿನಲ್ಲಿ ಹೃದಯವನ್ನು ವೈದ್ಯರು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕೊನೆಯ ಕೋಚ್​ನಲ್ಲಿ ಹೃದಯ ಸಾಗಾಟಕ್ಕೆ ಬಿಎಂಆರ್​ಸಿಎಲ್​ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಇಂದಿನ ಈ ಹೃದಯ ಸಾಗಾಟವೂ ಸೇರಿದಂತೆ ನಮ್ಮ ಮೆಟ್ರೋ ರೈಲಿನಲ್ಲಿ ಇಲ್ಲಿಯವರೆಗೆ ಆರು ಪ್ರಮುಖ ಅಂಗಗಳ ಸಾಗಾಟ ಮಾಡಲಾಗಿದೆ. ಒಂದು ಲಿವರ್, ಮೂರು ಹೃದಯಗಳು ಮತ್ತು ಒಂದು ಜೋಡಿ ಶ್ವಾಸಕೋಶಗಳನ್ನ ಸಾಗಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More