ಬಳ್ಳಾರಿ ಚಲೋ ಪಾದಯಾತ್ರೆ; ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಗೋ ಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆಯ 4ನೇ ದಿನ ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಆರಂಭವಾಯಿತು. ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಗೋ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಅವರು ಬಡ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಅಂಗವಿಕಲರ ಪಿಂಚಣಿ ನಿಲ್ಲಿಸಿರುವುದನ್ನು ಖಂಡಿಸಿದರು.
ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆಯ 4ನೇ ದಿನವು ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷದೊಂದಿಗೆ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಪಾದಯಾತ್ರೆಯು ಇಂದು ಕೊಪ್ಪಳ ಜಿಲ್ಲೆಗೆ ಪ್ರವೇಶಿಸಿತು. ಗೋ ಪೂಜೆ ನೆರವೇರಿಸಿದ ಬಳಿಕ, ವಿಜಯೇಂದ್ರ ಅವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಇರತಕ್ಕಂತಹ ಅಂಗವಿಕಲರ ಪಿಂಚಣಿಗಳನ್ನು ನಿಲ್ಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಬಡ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು. ಮಂಗಲಂ ಭಗವಾನ್ ವಿಷ್ಣು ಮಂಗಲಂ ಗರುಡಧ್ವಜಂ, ಮಂಗಲಂ ಪುಂಡರೀಕಾಕ್ಷಾಯ ಮಂಗಲಾಯ ತನೋಹರಿ ಎಂದು ಪ್ರಾರ್ಥಿಸಿ, ಕಲ್ಯಾಣಮಸ್ತು ಎಂದು ಹಾರೈಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 04, 2026 01:28 PM
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ

