ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್
ಸಾರಿಗೆ ಬಸ್ ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್, ಡೀಸೆಲ್ ಬೆಲೆ ಏರಿಕೆಯಿಂದ ನಷ್ಟದಲ್ಲಿದ್ದ ಸಂಸ್ಥೆಗಳನ್ನು ಉಳಿಸಲು ಈ ನಿರ್ಧಾರ ಅನಿವಾರ್ಯ ಎಂದು ಪ್ರತಿಪಕ್ಷಗಳ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ. ಡೀಸೆಲ್ ದರ ಹೆಚ್ಚಾದಾಗ ಯಾಕೆ ಕೇಳಿಲ್ಲ? ಡೀಸೆಲ್ ದರ ಕಡಿಮೆ ಮಾಡಿಸಿ, ನಾವು ಕಡಿಮೆ ಮಾಡಿಸೋಣ ಎಂದವರು ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 04: ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆಯನ್ನು ಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಡೀಸೆಲ್ ಹಾಕಲೂ ಹಣ ಇರಲಿಲ್ಲ, ತುಂಬಾ ನಷ್ಟ ಆಗಿತ್ತು. ಒಂದೊಂದು ಸ್ಟೇಜ್‌ನಲ್ಲಿ ಎರಡ್ಮೂರು ರೂ. ಹೆಚ್ಚಿಸಿರಬೇಕು. ಈಗ ಮಾತಾಡುವವರು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಯಾಕೆ ಮಾತನಾಡಲಿಲ್ಲ. ಡೀಸೆಲ್ ದರ ಹೆಚ್ಚಾದಾಗ ಯಾಕೆ ಕೇಳಿಲ್ಲ? ಡೀಸೆಲ್ ದರ ಕಡಿಮೆ ಮಾಡಿಸಿ, ನಾವು ಕಡಿಮೆ ಮಾಡಿಸೋಣ ಎಂದವರು ಹೇಳಿದ್ದಾರೆ. ವಿಪಕ್ಷಗಳಿಂದ ಪ್ರತಿಭಟನೆ ಕರೆ ವಿಚಾರವಾಗಿಯೂ ಅವರು ಈ ವೇಳೆ ಕಿಡಿ ಕಾರಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

