ಮಹಾಕುಂಭದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪುಣ್ಯ ಸ್ನಾನ
ಪ್ರತಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭವು ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. ಸಂಪ್ರದಾಯದ ಪ್ರಕಾರ, ಯಾತ್ರಿಕರು ಪವಿತ್ರ ಸ್ನಾನ ಮಾಡಲು ತ್ರಿವೇಣಿ ಸಂಗಮದಲ್ಲಿ ಸೇರುತ್ತಾರೆ. ಇದು ಪಾಪಗಳನ್ನು ಶುದ್ಧೀಕರಿಸುತ್ತದೆ ಮತ್ತು ಮೋಕ್ಷ ನೀಡುತ್ತದೆ ಎಂದು ನಂಬಲಾಗಿದೆ. ಗಂಗಾ ಮಾತೆಗೆ, ಹರ-ಹರ ಗಂಗೆ, ಹರ-ಹರ ಮಹಾದೇವನಿಗೆ ನಮಸ್ಕರಿಸಿ! ಎಂದು ಸಚಿನ್ ಪೈಲಟ್ ಪೋಸ್ಟ್ ಮಾಡಿದ್ದಾರೆ.
ಪ್ರಯಾಗರಾಜ್: ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಇಂದು ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪವಿತ್ರ ಸ್ನಾನದ ನಂತರ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇಂದು ಮಹಾಕುಂಭದಲ್ಲಿ ಪವಿತ್ರ ನದಿಯಯಲ್ಲಿ, ಸಂಗಮದ ದಡದಲ್ಲಿರುವ ತ್ರಿವೇಣಿ ಘಾಟ್‌ನಲ್ಲಿ ಸ್ನಾನ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಗಂಗಾ ಮಾತೆಗೆ, ಹರ-ಹರ ಗಂಗೆ, ಹರ-ಹರ ಮಹಾದೇವನಿಗೆ ನಮಸ್ಕರಿಸಿ! ಎಂದು ಸಚಿನ್ ಪೈಲಟ್ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Feb 13, 2025 08:42 PM