Loading video

ಐಪಿಎಲ್ ಚಾಂಪಿಯನ್​ಶಿಪ್ ಗೆದ್ದಿರುವ ಆರ್​ಸಿಬಿಗೆ ಕಾದಿದೆ ಸರ್ಕಾರದಿಂದ ಸತ್ಕಾರ ಮತ್ತು ವಿಕ್ಟರಿ ಪರೇಡ್

Updated on: Jun 04, 2025 | 12:33 PM

ಎಲ್ಲ ಕನ್ನಡಿಗರು ಮತ್ತು ಕ್ರಿಕೆಟ್ ಅಭಿಮಾನಿಗಳ ಹಾಗೆ ಆರ್​ಸಿಬಿ ಮತ್ತು ಪಿಬಿಕೆಎಸ್ ನಡುವಿನ ಫೈನಲ್ ಪಂದ್ಯವನ್ನು ಪೂರ್ತಿಯಾಗಿ ನೋಡಿದ್ದೇನೆ ಎಂದ ಶಿವಕುಮಾರ್ ಎಲ್ಲ ಕನ್ನಡಿಗರ ಪರವಾಗಿ ಆರ್​ಸಿಬೆ ಟೀಮಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಗೃಹ ಸಚಿವರ ಮೀಟಿಂಗ್ ಮಿಗಿದ ಕೂಡಲೇ ಸತ್ಕಾರ ಸಮಾರಂಭದ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು, ಜೂನ್ 4: ನಿನ್ನೆ ರಾತ್ರಿ ಅಹ್ಮದಾಬಾದ್​ನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವನ್ನು ರೋಚಕ ಫೈನಲ್​ನಲ್ಲಿ 6 ರನ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್​ಶಿಪ್ ಗೆದ್ದ ಆರ್​ಸಿಬಿ ತಂಡಕ್ಕೆ ಕರ್ನಾಟಕ ಸರ್ಕಾರದಿಂದ ಬೆಂಗಳೂರಲ್ಲಿ ಅದ್ದೂರಿ ಸ್ವಾಗತ ಮತ್ತು ಸತ್ಕಾರ ಕಾಯುತ್ತಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಸಮಾರಂಭದ ಬಗ್ಗೆ ವಿವರವಾದ ಮಾಹಿತಿ ನೀಡಲಿಲ್ಲ. ವಿಧಾನ ಸೌಧದಲ್ಲಿ ಮಾಡುವುದೋ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸತ್ಕರಿಸುವುದೋ ಅಂತ ಇನ್ನೂ ತೀರ್ಮಾನವಾಗಿಲ್ಲ. ಸತ್ಕಾರ ಸಮಾರಂಭದಲ್ಲಿ ಬಹಳಷ್ಟು ಜನ ಸೇರುವುದರಿಂದ ಭದ್ರತೆ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗದ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ಆಟಗಾರರ ಗೌರವಕ್ಕೂ ಧಕ್ಕೆಯಾಗದ ಹಾಗೆ ವಿಕ್ಟರಿ ಪರೇಡ್ ನಿಯೋಜಿಸಬೇಕಾಗುತ್ತದೆ, ಗೃಹ ಸಚಿವರು, ಪೊಲೀಸ್ ಕಮೀಶನರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಹೇಳಿದರು

ಇದನ್ನೂ ಓದಿ:  ಆರ್​ಸಿಬಿ ಗೆಲುವು ಸಂಭ್ರಮಿಸಿದ ಬಾಲಿವುಡ್ ಸೆಲೆಬ್ರಿಟಿಗಳು, ಯಾರು ಏನು ಹೇಳಿದರು?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ