ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ: ಕೆಆರ್ಎಸ್ ಡ್ಯಾಂಗೆ ಕಲರ್ಫುಲ್ ಲೈಟಿಂಗ್ಸ್
ಕಾಂಗ್ರೆಸ್ ಸರ್ಕಾರ ಅಧಿಕಾರ ಹಸ್ತಾಂತರದ ನಂತರ 100 ದಿನ ಪೂರೈಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಡಳಿತ 100 ದಿನ ಪೂರೈಸಿರುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೆಆರ್ಎಸ್ ಡ್ಯಾಂನಲ್ಲಿ ಭರ್ಜರಿ ಲೈಟಿಂಗ್ಸ್ ಅಲಂಕಾರ ಮಾಡಲಾಗಿದೆ. ಕೆಆರ್ಎಸ್ ಡ್ಯಾಂ ಲೈಟಿಂಗ್ಸ್ ವಿಡಿಯೋ ಇಲ್ಲಿದೆ.
ಮಂಡ್ಯ, ಸೆಪ್ಟೆಂಬರ್ 10: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೃಷ್ಣರಾಜಸಾಗರ ಜಲಾಶಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಈ ವಿಶೇಷ ಸಂಭ್ರಮಾಚರಣೆಗಾಗಿ ಅಣೆಕಟ್ಟು, ಕ್ರೆಸ್ಟ್ ಗೇಟ್‌ಗಳು ಹಾಗೂ ಜಲಾಶಯದ ಆವರಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಕಾವೇರಿ ಮಾತೆಯ ಪ್ರತಿಮೆಗಳಿಗೆ ವರ್ಣರಂಜಿತ ದೀಪಾಲಂಕಾರ ಮಾಡಲಾಗಿದ್ದು, ಕೆ.ಆರ್.ಎಸ್ ಅಣೆಕಟ್ಟು ಕಣ್ಣುಕೋರೈಸುವಂತೆ ಕಂಗೊಳಿಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

