AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ಹಗರಣ: ಕೋರ್ಟ್​​ಗೆ ಇಡಿಯಿಂದ ವರದಿ ಸಲ್ಲಿಕೆ

ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ಹಗರಣ: ಕೋರ್ಟ್​​ಗೆ ಇಡಿಯಿಂದ ವರದಿ ಸಲ್ಲಿಕೆ

ಪ್ರದೀಪ್​ ಚಿಕ್ಕಾಟಿ
| Edited By: |

Updated on: Oct 11, 2026 | 6:25 AM

Share

ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ನ 2459 ಕೋಟಿ ವಂಚನೆ ಪ್ರಕರಣ ಸಂಬಂಧ ಇಡಿ ದಕ್ಷಿಣ ಕನ್ನಡ ಮೂರನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಸುಮಾರು 35,000 ಗ್ರಾಹಕರಿಂದ ಹಣ ಸಂಗ್ರಹಿಸಿ, 3% ಬಡ್ಡಿ ಹಾಗೂ 0.5% ಕಮಿಷನ್ ಆಮಿಷವೊಡ್ಡಿ ವಂಚಿಸಲಾಗಿದೆ. ಸಂಸ್ಥೆಯು 2125 ಕೋಟಿ ಹಣವನ್ನು ವಾಪಸ್ ಮಾಡದೆ ಅಕ್ರಮವಾಗಿ ವರ್ಗಾವಣೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು/ಬೆಳಗಾವಿ, ಅಕ್ಟೋಬರ್​​ 11: ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ರೂಪಾಯಿ ಹಗರಣ ಸಂಬಂಧ ದಕ್ಷಿಣ ಕನ್ನಡ ಮೂರನೇ ಹೆಚ್ಚುವರಿ ಸೆಷನ್ಸ್‌ ಕೋರ್ಟ್​​ಗೆ ಮಂಗಳೂರು ಉಪ ವಿಭಾಗದ ಇಡಿ ಅಧಿಕಾರಿಗಳು ವರದಿ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಸಂಬಂಧ ವರದಿಯಲ್ಲಿ ಅನೇಕ ವಿಚಾರಗಳನ್ನು ಉಲ್ಲೇಖಿಸಲಾಗಿದ್ದು, ಸುಮಾರು 35 ಸಾವಿರ ಗ್ರಾಹಕರಿಂದ 2,459 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಗ್ರಾಹಕರಿಗೆ ತಿಂಗಳಿಗೆ 3% ಬಡ್ಡಿ ಹಣ ನೀಡುವುದು ಸೇರಿದಂತೆ , ಹೊಸ ಗ್ರಾಹಕರನ್ನು ಸೇರಿಸಿದರೆ 0.5% ಕಮಿಷನ್ ಆಸೆ ತೋರಿಸಲಾಗಿತ್ತು. ಜನರ ನಂಬಿಕೆ ಗಳಿಸಲು ಸಂಸ್ಥೆ ಸ್ವಲ್ಪ ಹಣ ವಾಪಸ್ ಮಾಡಿತ್ತು. ಆದರೆ 2,125 ಕೋಟಿ ರೂ. ವಾಪಸ್ ನೀಡದೆ ಉಳಿಸಿಕೊಂಡಿದ್ದರು. ಈ ಹಣವನ್ನ ಅಕ್ರಮವಾಗಿ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಹೆಚ್ಚಿನ ಹೂಡಿಕೆದಾರರ ಹಣವನ್ನು ಹೈರಿಸ್ಕ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದ ಪರಿಣಾಮವಾಗಿ 185.95 ಕೋಟಿ ರೂಪಾಯಿ ನಷ್ಟವಾಗಿದೆ. ಸೊಸೈಟಿ ಬ್ಯಾಂಕ್‌ಗಳಲ್ಲಿ FD ತೆರೆದು 25 ಕೋಟಿ ರೂ. ಹೂಡಿಕೆದಾರರ ಠೇವಣಿಗಳ ಆಧಾರದ ಮೇಲೆ ಆಪ್ತರ ಹೆಸರಿನಲ್ಲಿ ಸಾಲ ಪಡೆದು ಭೂಮಿ ಖರೀದಿ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಹೂಡಿಕೆಗಳ ಜೊತೆಗೆ ಪತ್ನಿ ಸಂಗೀತಾ ಹಾಗೂ ಅಪ್ರಾಪ್ತ ಮಗ ಸಿದ್ಧಾಂತ್, ಸಂಬಂಧಿಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ನಡೆದಿದೆ. ಶಿವಂ ಸೇವಾ(OPC) ಪ್ರೈ. ಲಿ., ಶಿವಂ ಲೈಫ್‌ಲೈನ್ ಪ್ರೈ. ಲಿ. ಹಾಗೂ ಶಿವಂ ಫುಡ್ಸ್‌ನಂತಹ ಸಂಬಂಧಿತ ವ್ಯಾಪಾರ ಉದ್ಯಮಗಳಿಗೂ ಹಣ ವರ್ಗಾವಣೆ ಆಗಿದೆ. ಚಾಂಪಿಯನ್ ಎಂಬ ಕನ್ನಡ ಚಲನಚಿತ್ರ ನಿರ್ಮಾಣಕ್ಕೂ ಬಂಡವಾಳ ಹಾಕಲಾಗಿದೆ. ಸಾರ್ವಜನಿಕ ಠೇವಣಿಗಳಿಂದ 5 ಕೋಟಿ ರೂ. ವರ್ಗಾಯಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಕರಣದ ಆರೋಪಿ ಶಿವಾನಂದ ನೀಲಣ್ಣನವರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More